Home
ಸುದ್ದಿಜಾಲ

ಎಲ್ಲಾ ಫೋನ್‌ಗಳಲ್ಲಿ ಕಡ್ಡಾಯವಾಗಿ FM ರೇಡಿಯೊ ಆಯ್ಕೆ ಇರಬೇಕು: ಸರ್ಕಾರದಿಂದ ಮಹತ್ವದ ಸಲಹೆ!

ಈ ಹಿಂದೆ ಫೋನ್‌ಗಳಲ್ಲಿ ರೇಡಿಯೋ ಆಯ್ಕೆ ಇರುವುದೇ ಒಂದು ದೊಡ್ಡ ಫೀಚರ್ಸ್‌ ಎನಿಸಿಕೊಳ್ಳುತ್ತಿದ್ದು. ಫೋನ್‌ ಖರೀದಿ ಮಾಡುವಾದ ರೇಡಿಯೋ ಆಯ್ಕೆ ಇದೆಯಾ ಎಂದು ಜನರು ಕೇಳುತ್ತಿದ್ದರು.ಆದರೆ, ರೇಡಿಯೋವನ್ನೇ ಮರೆಯುವ ಹಂತಕ್ಕೆ ತಲುಪಿದ್ದಾರೆ. ಇದಕ್ಕೆ ಕಾರಣ ಬಹುಪಾಲು ಫೋನ್‌ಗಳಲ್ಲಿ ಈ ಆಯ್ಕೆ ಇರುವುದಿಲ್ಲ, ಇದ್ದರೂ ಬಳಕೆ ಮಾಡಲಾಗುತ್ತಿಲ್ಲ.

ಹೌದು, ಎಫ್‌ಎಂ ರೇಡಿಯೊವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಪ್ರವೇಶಿಸುವಂತೆ ಮಾಡಲು ಭಾರತ ಸರ್ಕಾರವು ಮೊಬೈಲ್ ಫೋನ್ ತಯಾರಕರಿಗೆ ಸಲಹೆ ನೀಡಿದೆ. ಈ ಕ್ರಮವು ಜನರು ರೇಡಿಯೊ ಸೇವೆಗಳ ಮೂಲಕ ಮಾಹಿತಿ ಮತ್ತು ಮನರಂಜನೆಗೆ ಪ್ರವೇಶವನ್ನು ಹೊಂದುವುದನ್ನು ಖಚಿತಪಡಿಸುತ್ತದೆ. ಇಷ್ಟಕ್ಕೆ ಮಾತ್ರವಲ್ಲದೆ ಈ ಅಗತ್ಯ ಮಾಹಿತಿ ಪಡೆದುಕೊಳ್ಳಲು ಇದು ಅಗತ್ಯವಾದ ಮಾರ್ಗವಾಗಿದೆ. ಬನ್ನಿ ಈ ಬಗ್ಗೆ ತಿಳಿಯೋಣ.

ಎಲ್ಲಾ ಫೋನ್‌ಗಳಲ್ಲಿ ಕಡ್ಡಾಯವಾಗಿ FM ರೇಡಿಯೊ ಆಯ್ಕೆ ಇರಬೇಕು...

ಸರ್ಕಾರದಿಂದ ಸಲಹೆ: ಸ್ಮಾರ್ಟ್‌ಫೋನ್‌ಗಳಲ್ಲಿ ಎಫ್‌ಎಂ ರೇಡಿಯೊವನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡಲು ಮೊಬೈಲ್ ಫೋನ್ ತಯಾರಕರಿಗೆ ಸರ್ಕಾರ ಸಲಹೆ ನೀಡಿದೆ. ಅಂದರೆ ಐಟಿ ಸಚಿವಾಲಯವು ಭಾರತೀಯ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಮತ್ತು ಮಾಹಿತಿ ತಂತ್ರಜ್ಞಾನದ ತಯಾರಕರ ಸಂಘ (MAIT) ಗೆ ತುರ್ತು ಮತ್ತು ವಿಪತ್ತುಗಳ ಸಮಯದಲ್ಲಿ ಎಫ್‌ಎಮ್‌ ರೇಡಿಯೊವನ್ನು ಜನರು ಪ್ರವೇಶಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಈ ಸೌಲಭ್ಯದಿಂದ ಜನರು ಅದರಲ್ಲೂ ಬಡವರು ತುರ್ತು ಮತ್ತು ವಿಪತ್ತುಗಳ ಸಮಯದಲ್ಲಿ ಈ ಸಂಬಂಧ ಮಾಹಿತಿಯನ್ನು ಪಡೆದುಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅದರಲ್ಲೂ ಡಿಜಿಟಲ್ ಗ್ಯಾಜೆಟ್‌ಗಳನ್ನು ಬಳಕೆ ಮಾಡದ, ಸ್ವತಂತ್ರ ರೇಡಿಯೊ ಸೆಟ್‌ಗಳನ್ನು ಪಡೆಯಲು ಸಾಧ್ಯವಾಗದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ಜನ ಈ ಮೂಲಕ ಸುಲಭ ರೇಡಿಯೊ ಸೇವೆಗಳನ್ನು ಪಡೆದುಕೊಳ್ಳಲು ಈ ನಿರ್ಧಾರ ಮಹತ್ವದ್ದಾಗಿದೆ.

ಎಲ್ಲಾ ಫೋನ್‌ಗಳಲ್ಲಿ ಕಡ್ಡಾಯವಾಗಿ FM ರೇಡಿಯೊ ಆಯ್ಕೆ ಇರಬೇಕು...

ಐಟಿ ಸಚಿವಾಲಯ ನೀಡಿದ ಸಲಹೆಯಂತೆ, ಯಾವೆಲ್ಲಾ ಫೋನ್‌ಗಳು ಎಫ್‌ಎಮ್‌ ರೇಡಿಯೋ ರಿಸೀವರ್ ಕಾರ್ಯ ಅಥವಾ ಫೀಚರ್ಸ್‌ಅನ್ನು ಹೊಂದಿದ್ದರೂ ಅದು ಫೋನ್‌ನಲ್ಲಿ ಸಕ್ರಿಯವಾಗಿದೆಯಾ ಅಥವಾ ನಿಸ್ಕ್ರಿಯವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಮೊಬೈಲ್ ಫೋನ್‌ಗಳಲ್ಲಿ ಎಫ್‌ಎಂ ರೇಡಿಯೊ ರಿಸೀವರ್ ಕಾರ್ಯ ಅಥವಾ ಫೀಚರ್ಸ್‌ ಲಭ್ಯವಿಲ್ಲದಿದ್ದರೆ ಅದನ್ನು ಸೇರಿಸಬೇಕು ಎಂದು ಉಲ್ಲೇಖ ಮಾಡಲಾಗಿದೆ.

ಗಮನಾರ್ಹ ಕುಸಿತ ಕಂಡ ಎಫ್‌ಎಮ್‌ ರೇಡಿಯೋ ಬಳಕೆ: ಇತ್ತೀಚಿನ ವರ್ಷಗಳಲ್ಲಿ ಎಫ್‌ಎಂ ರೇಡಿಯೊ ಹೊಂದಿರುವ ಮೊಬೈಲ್ ಫೋನ್‌ಗಳಲ್ಲಿ ಗಮನಾರ್ಹ ಕುಸಿತವನ್ನು ಗಮನಿಸಲಾಗಿದೆ. ಈ ಮೂಲಕ ಉಚಿತ ಎಫ್‌ಎಂ ರೇಡಿಯೊ ಸೇವೆಗಳನ್ನು ಅವಲಂಬಿಸಿರುವ ಬಡವರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದೆ. ಎಫ್‌ಎಮ್‌ ಸೌಲಭ್ಯ ಇದ್ದರೆ ತುರ್ತು ಪರಿಸ್ಥಿತಿಗಳು, ವಿಪತ್ತುಗಳು ಸಮಯದಲ್ಲಿ ನೈಜ-ಸಮಯದ ಮಾಹಿತಿಯನ್ನು ಈ ಮೂಲಕ ಜನರು ಪಡೆದುಕೊಳ್ಳಬಹುದಾಗಿದೆ ಎಂಬುದು ಸರ್ಕಾರದ ನಿಲುವು.

ಇತ್ತೀಚಿನ ಫೋನ್‌ಗಳಲ್ಲಿ ಎಫ್‌ಎಮ್ ಯಾಕಿಲ್ಲ?: ಇದಕ್ಕೆ ಮುಖ್ಯ ಕಾರಣ ಏನೆಂದರೆ ಫೋನ್‌ಗಳು ಒಂದು ದೇಶದಲ್ಲಿ ಸಾಮೂಹಿಕವಾಗಿ ತಯಾರಿಸಲ್ಪಟ್ಟಿದ್ದರೂ, ಅವುಗಳನ್ನು ಪ್ರಪಂಚದಾದ್ಯಂತ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಎಫ್‌ಎಮ್‌ ರಿಸೀವರ್‌ಗಳನ್ನು ಎಲ್ಲಿ ಮಾರಾಟ ಮಾಡಲಾಗುವುದು ಎಂಬುದರ ಪ್ರಕಾರ ಟ್ಯೂನ್ ಮಾಡಬೇಕಾಗುತ್ತದೆ. ಇನ್ನೊಂದು ಕಾರಣ ಏನೆಂದರೆ ಎಫ್‌ಎಮ್‌ ಮೇಲೆ ಇರುವ ಜನರ ನಿರಾಸಕ್ತಿ.

ಎಲ್ಲಾ ಫೋನ್‌ಗಳಲ್ಲಿ ಕಡ್ಡಾಯವಾಗಿ FM ರೇಡಿಯೊ ಆಯ್ಕೆ ಇರಬೇಕು...

ಅದರಲ್ಲೂ ಐಫೋನ್‌ಗಳು ಎಫ್‌ಎಮ್‌ ರೇಡಿಯೊ ಚಿಪ್‌ಗಳನ್ನು ಇನ್‌ಬಿಲ್ಟ್‌ ಆಗಿ ಹೊಂದಿರುವುದಿಲ್ಲ. ಬಹುಶಃ ಇದು ಕೆಲವರಿಗೆ ಸಮಸ್ಯೆ ಉಂಟು ಮಾಡುತ್ತದೆ. ಆದರೆ, ಹಳೆಯ ಐಫೋನ್‌ಗಳಾದ ಐಫೋನ್‌ 6 ವರೆಗೆ ಎಫ್‌ಎಮ್‌ ಮಾಡ್ಯೂಲ್‌ಗಳ ಆಯ್ಕೆ ನೀಡಲಾಗಿತ್ತು. ಆದರೆ, ಅವುಗಳು ಎಫ್‌ಎಮ್‌ ರೇಡಿಯೊವನ್ನು ಬೆಂಬಲಿಸಲು ಸೂಕ್ತವಾದ ಆಂಟೆನಾ ಮತ್ತು ಆಂಪ್ಲಿಫಯರ್ ಚಿಪ್ ಅನ್ನು ಹೊಂದಿರಲಿಲ್ಲ ಎನ್ನುವುದು ಪ್ರಮುಖವಾದ ವಿಷಯವಾಗಿದೆ.

Best Mobiles in India

English summary
Indian government has advised mobile phone manufacturers to make FM radio easily accessible on smartphones. This move will ensure that people have access to information and entertainment through radio services.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+