Home
ಸುದ್ದಿಜಾಲ

ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ರೆ ಉಬರ್‌ ಚಾರ್ಜ್‌ ಜಾಸ್ತಿಯಾಗುತ್ತಂತೆ?: ಶಾಕಿಂಗ್ ವರದಿ

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದ ವಿಚಾರ ಏನೆಂದರೆ ನಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ದರೆ ಆ ಫೋನ್‌ ಬೇಗನೇ ಅಫ್‌ ಆಗುತ್ತದೆ ಅಥವಾ ತನ್ನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಎಂದು. ಆದರೆ ಇಲ್ಲೊಂದು ಘಟನೆ ಸಂಬಂಧ ವರದಿಯಾಗಿದ್ದು, ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ರೆ ಪ್ರಯಾಣದ ದರ ಹೆಚ್ಚಾಗಲಿದೆ.

ಹೌದು, ಇದನ್ನು ಓದಿ ನಿಮಗೆ ಕಂಡಿತಾ ಗೊಂದಲ ಉಂಟಾಗಿರಬಹುದು.ಆದರೆ, ವರದಿಯೊಂದರ ಪ್ರಕಾರ ವ್ಯಕ್ತಿಯೋರ್ವರು ಉಬರ್‌ ಬುಕ್‌ ಮಾಡಿದ್ದಾರೆ. ಆ ವೇಳೆ ಅವರ ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇತ್ತಂತೆ. ಹೀಗಾಗಿ ಪ್ರಯಾಣದ ದರ ಸಾಮಾನ್ಯ ದರಕ್ಕಿಂತೆ ಹೆಚ್ಚಾಗಿ ತೋರಿಸಿದೆ ಎಂದು ಉಲ್ಲೇಖಿಸಿದೆ. ಅರೇ...ಅದೇಗೆ ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯಕ್ಕೂ ಉಬರ್‌ನ ಸಂಚಾರ ದರಕ್ಕೂ ವ್ಯತ್ಯಾಸ ಇರಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಬನ್ನಿ ಈ ಬಗ್ಗೆ ತಿಳಿಸಿಕೊಡುತ್ತೇವೆ.

ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ರೆ ಉಬರ್‌ ಚಾರ್ಜ್‌ ಜಾಸ್ತಿಯಾಗುತ್ತಂತೆ?

ಏನಿದು ಘಟನೆ?: ಬೆಲ್ಜಿಯನ್ ಪತ್ರಿಕೆ ಡೆರ್ನಿಯರ್ ಹ್ಯೂರ್‌, ಕಡಿಮೆ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಫೋನ್‌ನಲ್ಲಿ ಉಬರ್ ಬಳಕೆದಾರರಿಗೆ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಅಂದರೆ, ಬ್ರಸೆಲ್ಸ್‌ನಲ್ಲಿರುವ ಗ್ರಾಹಕರು ಸಂಚಾರಕ್ಕೆ ಉಬರ್‌ ಬುಕ್‌ ಮಾಡಿದಾಗ ಅವರ ಬ್ಯಾಟರಿ ಶೇಕಡಾವಾರು ಆಧಾರದ ಮೇಲೆ ಬೆಲೆ ನಿಗದಿಯಾಗಿದೆಯಂತೆ.

ಇದು ಕಂಡು ಬಂದಿದ್ದು ಹೇಗೆ?: ಈ ಪತ್ರಿಕೆಯವರು ಬ್ರಸೆಲ್ಸ್‌ನಲ್ಲಿರುವ ತಮ್ಮ ಎರಡು ಐಫೋನ್‌ಗಳನ್ನು ಬಳಕೆ ಮಾಡಿಕೊಂಡು ತಮ್ಮ ಕಚೇರಿಯಿಂದ ನಗರ ಕೇಂದ್ರದಲ್ಲಿರುವ ಟೂರ್ ಮತ್ತು ಟ್ಯಾಕ್ಸಿಗಳನ್ನು ಬುಕ್‌ ಮಾಡುವ ಮೂಲಕ ತನಿಖೆ ನಡೆಸಿದ್ದಾರೆ. ಒಂದು ಫೋನ್‌ನಲ್ಲಿ 84 ಪ್ರತಿಶತ ಮತ್ತು ಇನ್ನೊಂದು 12 ಪ್ರತಿಶತ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿತ್ತು. ದುರಂತ ಎಂದರೆ ಉಬರ್‌ ದರ ಸಹ ಬದಲಾಗಿತ್ತಂತೆ.

ಅಂದರೆ 12 ಪ್ರತಿಶತ ಸಾಮರ್ಥ್ಯದ ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ ನಲ್ಲಿ 17.56 ಯುರೋಗಳು (1,585ರೂ. ಗಳು) ಮತ್ತು 84 ಪ್ರತಿಶತ ಬ್ಯಾಟರಿ ಹೊಂದಿರುವ ಫೋನ್‌ ನಲ್ಲಿ ಅದೇ ದೂರದ ಪ್ರಯಾಣಕ್ಕೆ 16.6 ಯುರೋಗಳು (1,498ರೂ. ಗಳು) ಬೆಲೆಯನ್ನು ತೋರಿಸಲಾಗಿದೆಯಂತೆ. ಈ ಮೂಲಕ ಉಬರ್‌ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.

ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ರೆ ಉಬರ್‌ ಚಾರ್ಜ್‌ ಜಾಸ್ತಿಯಾಗುತ್ತಂತೆ?

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಬರ್‌, ಬಳಕೆದಾರರ ಬ್ಯಾಟರಿಯನ್ನು ಅಳೆಯಲು ಅಪ್ಲಿಕೇಶನ್‌ಗೆ ಸಾಧ್ಯವಾಗುವುದಿಲ್ಲ. ಉಬರ್ ಪ್ರವಾಸದ ಬೆಲೆಯನ್ನು ಲೆಕ್ಕಾಚಾರ ಮಾಡಲು ಫೋನ್‌ನ ಬ್ಯಾಟರಿ ಮಟ್ಟವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಊಬರ್‌ ಮೂಲಕ ಬುಕ್ ಮಾಡಲಾದ ಟ್ರಿಪ್‌ಗಳಿಗೆ ಅನ್ವಯಿಸಲಾದ ಡೈನಾಮಿಕ್ ಬೆಲೆಯನ್ನು ರೈಡ್‌ಗಳಿಗೆ ಅಸ್ತಿತ್ವದಲ್ಲಿರುವ ಬೇಡಿಕೆ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಚಾಲಕರ ಪೂರೈಕೆಯಿಂದ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದೆ.

ಆದರೆ ಒಂದೇ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಒಂದೇ ಸ್ಥಳಕ್ಕೆ ಹೋಗಲು ಉಬರ್‌ ಬುಕ್‌ ಮಾಡಿದಾಗ ಅದರ ಬೆಲೆ ಹೇಗೆ ಏರುಪೇರಾಗುತ್ತದೆ ಎಂಬ ಬಗ್ಗೆ ಕಂಪೆನಿ ನಿಖರ ಮಾಹಿತಿ ನೀಡಿಲ್ಲ. ಅದರಂತೆ ವೈಸ್‌ ಎಂಬ ಪತ್ರಿಕೆ ಸಹ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯವನ್ನು ಉಬರ್‌ ದುರಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಉಲ್ಲೆಖಿಸಿದೆ.

ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ರೆ ಉಬರ್‌ ಚಾರ್ಜ್‌ ಜಾಸ್ತಿಯಾಗುತ್ತಂತೆ?

2016 ರಲ್ಲಿ ಉಬರ್‌ನ ಆರ್ಥಿಕ ಸಂಶೋಧನೆಯ ಮಾಜಿ ಮುಖ್ಯಸ್ಥ ಕೀತ್ ಚೆನ್ ಅವರು ಎನ್‌ಪಿಆರ್‌ಗೆ ನೀಡಿದ ಸಂದರ್ಶನದಲ್ಲಿ, ಕಡಿಮೆ ಬ್ಯಾಟರಿ ಮಟ್ಟವನ್ನು ಹೊಂದಿರುವ ಜನರು ಉಲ್ಬಣ ಬೆಲೆ ಪಾವತಿಸಲು ಸಿದ್ಧರಿದ್ದಾರೆ ಎಂದು ಕಂಪನಿಯು ಕಂಡುಕೊಂಡಿದೆ ಎಂದು ಹೇಳಿದ್ದರು.ಅದಾಗ್ಯೂ ಈ ಬಳಕೆದಾರರ ಮೇಲೆ ಬೆಲೆಗಳನ್ನು ಹೆಚ್ಚಿಸುತ್ತಿದೆ ಎಂದು ಚೆನ್ ನಿರಾಕರಿಸಿದ್ದರು. ಆದರೆ,ಕೆಲವು ತಜ್ಞರು ಯಾವ ಉದ್ದೇಶಕ್ಕೆ ಆಪ್‌ ಬ್ಯಾಟರಿ ಮೇಲ್ವಿಚಾರಣೆ ಮಾಡುತ್ತಿದೆ ಎಂಬುದರ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ.

Best Mobiles in India

English summary
Belgian newspaper Dernière Heure reported Uber charged 6 per cent more for a journey made on a smartphone with only 12 percent of battery capacity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+