ಈ ಸ್ಮಾರ್ಟ್‌ವಾಚ್‌ನಲ್ಲಿ AI ಚಾಲಿತ ಹೆಲ್ತ್ ಫೀಚರ್ಸ್! ಇದರ ಕಾರ್ಯ ವೈಖರಿ ಏನು?
ಟೆಕ್ ವಲಯದಲ್ಲಿ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳಿಗೆ ಅಮಾಜ್‌ಫಿಟ್ ಕಂಪೆನಿ ಹೆಸರುವಾಸಿಯಾಗಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ವಾಚ್‌ಗಳಿಂದ ಗ್ರಾಹಕರ ಗಮನಸೆಳೆದಿದೆ. ಇದೀಗ ಹೊಸದಾಗಿ AI ಚಾಲಿತ ಅಮಾಜ್‌ಫಿಟ್ ಬ್ಯಾಲೆನ್ಸ್ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ ಹೆಲ್ತ್ ಮತ್ತು ಫಿಟ್‌ನೆಸ್ ಫೀಚರ್ಸ್ ಒಳಗೊಂಡಿದೆ.
ಹೌದು, ಅಮಾಜ್‌ಫಿಟ್ ಬ್ಯಾಲೆನ್ಸ್ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಜೆಪ್‌ಔರಾ ಮತ್ತು ಜೆಪ್‌ಕೋಚ್ ಮೂಲಕ AI ನಿಂದ ಚಾಲಿತವಾಗುವ ಫೀಚರ್ಸ್ ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಜೆಪ್‌ಔರಾ AI ಜೊತೆಗೆ ಪೇಟೆಂಟ್ ಕೋರ್ ಟೆಕ್ನಾಲಜಿಯನ್ನು ಬಳಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್ ಬ್ಯಾಲೆನ್ಸ್ ಸ್ಮಾರ್ಟ್‌ವಾಚ್ 1.5 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 480 x 480 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 46mm ಸ್ಮಾರ್ಟ್ ವೇರಿಯೆಬಲ್ ಆಗಿದ್ದು, ಗರಿಷ್ಠ 1,500 ನಿಟ್ಸ್ ಬ್ರೈಟ್‌ನೆಸ್ ನೀಡಲಿದೆ. ಇದಲ್ಲದೆ 50 ಮೀ ವರೆಗೆ ವಾಟರ್ ರೆಸಿಸ್ಟೆನ್ಸಿ ನೀಡುವುದಕ್ಕೆ 5 ಎಟಿಎಂ ರೇಟಿಂಗ್ ಪಡೆದುಕೊಂಡಿದೆ. ಹೆಚ್ಚುವರಿ ರಕ್ಷಣೆಗಾಗಿ ಸ್ಮಾರ್ಟ್ ವಾಚ್ ಹದಗೊಳಿಸಿದ ಗಾಜಿನ ಪದರವನ್ನು ಹೊಂದಿದೆ.
ಈ ಸ್ಮಾರ್ಟ್‌ವಾಚ್ ಡ್ಯುಯಲ್-LED ಮತ್ತು 8PD ಬಯೋಟ್ರ್ಯಾಕರ್ ಆಪ್ಟಿಕಲ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಈ ಬಯೋ ಟ್ರ್ಯಾಕರ್ ನೀವು ಹೇಗೆ ಮಲಗಿದ್ದೀರಿ ಎಂಬುದರ ಆಧಾರದ ಮೇಲೆ ಪ್ರತಿ ದಿನ ಬೆಳಿಗ್ಗೆ ಸಿದ್ಧತೆ ಸ್ಕೋರ್ ಅನ್ನು ನೀಡುತ್ತದೆ. ಇದರಲ್ಲಿರುವ ಜೆಪ್ ಔರಾ ಎಐ ಧ್ಯಾನ ಮತ್ತು ವಿಶ್ರಾಂತಿ ಸೌಂಡ್‌ಸ್ಕೇಪ್‌ಗಳೊಂದಿಗೆ ತನ್ನ ಆಂತರಿಕ ಸಮತೋಲನವನ್ನು ಮರುಶೋಧಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ. ಇನ್ನು Zepp Aura ನಿಂದ ನಡೆಸಲ್ಪಡುವ AI ಸ್ಲಿಪ್ ಟ್ರ್ಯಾಕರ್ ಸೇವೆ ನೀಡಲಿದೆ. ಆದರೆ ಇದು ಚಂದಾದಾರಿಕೆ ಸೇವೆಯಾಗಿದ್ದು, ಮೊದಲು ಮೂರು ತಿಂಗಳು ಉಚಿತವಾಗಿ ದೊರೆಯಲಿದೆ.
ಇನ್ನು ಹೊಸ ಅಮಾಜ್‌ಫಿಟ್ ಸ್ಮಾರ್ಟ್‌ವಾಚ್ ಮೂಲಕ ಬಾಡಿ ಮಾಸ್ ಇಂಡೆಕ್ಸ್, ಮಣಿಕಟ್ಟಿನಿಂದ ಬೇಸಲ್ ಮೆಟಾಬಾಲಿಸಮ್, ಅಸ್ಥಿಪಂಜರದ ಸ್ನಾಯು ಮತ್ತು ಹೆಚ್ಚಿನದನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ ಸಾಮಾನ್ಯ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಆದರೆ ಬ್ಯಾಟರಿ ಸೇವರ್ ಮೋಡ್‌ನಲ್ಲಿ 25 ದಿನಗಳ ಬಾಳಿಕೆಯನ್ನು ನೀಡಲಿದೆ. ಇದರ ಬೆಲೆವಿವರಗಳು ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆಯಿದೆ.
ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ಚಾಚ್ ಅನ್ನು ಪರಿಚಯಿಸಿದೆ. ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ 1.91 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 320x380 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 2.5D ಟೆಂಪರ್ಡ್ ಗ್ಲಾಸ್ ಮತ್ತು ಆಂಟಿಫಿಂಗರ್‌ಪ್ರಿಂಟ್ ಲೇಪನವನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ 70 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದೆ.
ಇದರಲ್ಲಿ ಮಿನಿ ಗೇಮ್‌ಗಳನ್ನು ಸಹ ಅಳವಡಿಸಲಾಗಿದ್ದು, 30ಕ್ಕೂ ಹೆಚ್ಚು ಮಿನಿ ಗೇಮ್‌ಗಳನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ ಮ್ಯೂಸಿಕ್ ಕಂಟ್ರೋಲ್, ಈವೆಂಟ್ ರಿಮೈಂಡರ್, ಸ್ಮಾರ್ಟ್ ಅಧಿಸೂಚನೆಗಳು ಮತ್ತು ಫೈಂಡ್ ಮೈ ಫೋನ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಹತ್ತುದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಅಮಾಜ್‌ಫಿಟ್ ಹೇಳಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಟೆಂಪರ್ಡ್ ಗ್ಲಾಸ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ಫೋನ್ ಕರೆಗಳನ್ನು ನಿಯಂತ್ರಿಸಬಹುದಾಗಿದೆ.


Click it and Unblock the Notifications








