Amazfit; ಅಮಾಜ್‌ಫಿಟ್‌ನಿಂದ ಹೊಸ ಸ್ಮಾರ್ಟ್‌ವಾಚ್ ಲಾಂಚ್: ಸಖತ್ ಫೀಚರ್ಸ್, ದುಬಾರಿ ಬೆಲೆ
ಸ್ಮಾರ್ಟ್‌ವಾಚ್‌ಗಳು (Smartwatches) ಈಗ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಪಡೆಯುತ್ತಿದ್ದು, ಈ ಕಾರಣಕ್ಕೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಪ್ರಮುಖ ಕಂಪೆನಿಗಳು ಲಾಂಚ್ ಮಾಡಿಕೊಂಡು ಬರುತ್ತಲೇ ಇವೆ. ಅಂತೆಯೇ ಈಗ ಅಮಾಜ್‌ಫಿಟ್ ಹೊಸ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ.
ಹೌದು, ಅಮಾಜ್‌ಫಿಟ್ ಸ್ಮಾರ್ಟ್‌ವಾಚ್‌ಗಳು (Amazfit Smartwatch) ಆಕರ್ಷಕ ಶೈಲಿ ಹಾಗೂ ವಿಶೇಷ ಫೀಚರ್ಸ್ ಹೊಂದಿರುವ ಪರಿಣಾಮ ಜನರು ಈ ವಾಚ್‌ಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಅದರಂತೆ ಈಗ ಈ ವಾಚ್‌ಗಳ ಸಾಲಿಗೆ ಅಮಾಜ್‌ಫಿಟ್ ಬ್ಯಾಲೆನ್ಸ್ (Amazfit Balance) ವಾಚ್ ಸೇರ್ಪಡೆ ಆಗಿದೆ. ಈ ವಾಚ್ ಜಿಪಿಎಸ್ ಬೆಂಬಲ ಹಾಗೂ ಅಮೋಲೆಡ್ ಡಿಸ್‌ಪ್ಲೇ ಆಯ್ಕೆಯೊಂದಿಗೆ ಪ್ರೀಮಿಯಂ ನೋಟ ನೀಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಫೀಚರ್ಸ್ ಹಾಗೂ ಬೆಲೆ ವಿವರ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಮಾಜ್‌ಫಿಟ್ ಬ್ಯಾಲೆನ್ಸ್ ಡಿಸ್‌ಪ್ಲೆ ವಿವರ: ಈ ಸ್ಮಾರ್ಟ್‌ವಾಚ್ 1.5 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 480×480 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 323 PPI, 60Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ. ಹಾಗೆಯೇ ಆಂಟಿ-ಗ್ಲೇರ್ ಗ್ಲಾಸ್ ಬೆಜೆಲ್, ಆಂಟಿಫಿಂಗರ್‌ಪ್ರಿಂಟ್ ಲೇಯರ್ ಸೌಲಭ್ಯ ಈ ವಾಚ್ ದೀರ್ಘಕಾಲದವರೆಗೆ ಹೊಸತರಂತೆ ಕಾಣುವಂತೆ ಮಾಡುತ್ತದೆ.
ಅಮಾಜ್‌ಫಿಟ್ ಬ್ಯಾಲೆನ್ಸ್ ಫೀಚರ್ಸ್ ಮಾಹಿತಿ: ಇನ್ನು ಈ ವಾಚ್ ನವೀಕರಿಸಿದ ಡ್ಯುಯಲ್ ಎಲ್ಇಡಿ ಮತ್ತು 8PD ಬಯೋಟ್ರ್ಯಾಕರ್ 5.0 PPG ಬಯೋಮೆಟ್ರಿಕ್ ಆಪ್ಟಿಕಲ್ ಸೆನ್ಸರ್ ಸಂಯೋಜಿಸುವುದರ ಜೊತೆಗೆ ವಿವಿಧ ಆಕರ್ಷಕ ಫೀಚರ್ಸ್ ಅನ್ನು ಪಡೆದಿದೆ. ಹೊಸ ರೆಡಿನೆಸ್ ಫೀಚರ್ಸ್ ಪ್ರತಿ ಮುಂಜಾನೆ ನಿಮಗೆ ಸ್ಕೋರ್ ಅನ್ನು ನೀಡುತ್ತದೆ. ಅದರ ಮೂಲಕ ನಿರ್ದಿಷ್ಟ ನಿದ್ರೆಯ ಸೂಚಕಗಳು ತಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿ ಹೇಗಿದೆ ಅನ್ನೋದನ್ನು ಕಂಡುಕೊಳ್ಳಬಹುದಾಗಿದೆ.

ಈ ವಾಚ್ ಬ್ಲೂಟೂತ್ ಕರೆಗಾಗಿ ಮೈಕ್ ಮತ್ತು ಸ್ಪೀಕರ್ ಆಯ್ಕೆ ಪಡೆದಿದ್ದು, ಅಮೆಜಾನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಅನ್ನೂ ಸಹ ಸಹ ಬೆಂಬಲಿಸುತ್ತದೆ. ಇದರೊಂದಿಗೆ ರಕ್ತದಲ್ಲಿನ ಆಮ್ಲಜನಕದ ಶುದ್ಧತ್ವ ಮಾಪನ, ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆ ಮತ್ತು ಕ್ರೀಡಾ ಡೇಟಾ, 150+ ಸ್ಪೋರ್ಟ್ಸ್ ಮೋಡ್ ಆಯ್ಕೆಯೊಂದಿಗೆ ವೇಗವರ್ಧಕ ಸೆನ್ಸರ್, ಗೈರೊಸ್ಕೋಪ್ ಸೆನ್ಸರ್, ಭೂಕಾಂತೀಯ ಸೆನ್ಸರ್, ಬ್ಯಾರೊಮೆಟ್ರಿಕ್ ಆಲ್ಟಿಮೀಟರ್, ಥರ್ಮಾಮೀಟರ್ ಸೇರಿದಂತೆ ಅಗತ್ಯ ಸೆನ್ಸರ್ ಫೀಚರ್ಸ್ ಅನ್ನು ವಾಚ್ ಪಡೆದುಕೊಂಡಿದೆ. ಅದರಲ್ಲೂ ಕ್ರೀಡಾ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಲು ಎಐ ಮತ್ತು ದೊಡ್ಡ ಭಾಷಾ ಮಾದರಿಗಳನ್ನು ಬಳಕೆ ಮಾಡುತ್ತದೆ.
ಇದರಲ್ಲಿನ ಬಾಡಿ ಕಂಪೋಸಿಷನ್ ಮೆಸ್ಯುರ್‌ಮೆಂಟ್ ಫೀಚರ್ಸ್ ಬಳಕೆದಾರರ ದೇಹದ ಕೊಬ್ಬಿನ ಶೇಕಡಾವಾರು ಮಾಹಿತಿ, ದೇಹದಲ್ಲಿನ ನೀರಿನ ಮಟ್ಟ, ಸ್ನಾಯು, ಪ್ರೋಟೀನ್, ಬಿಎಮ್‌ಐ ಮತ್ತು ಚಯಾಪಚಯ ಪ್ರಕ್ರಿಯೆ ಸೇರಿದಂತೆ ವಿವಿಧ ದೈಹಿಕ ಬದಲಾವಣೆಗಳ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತದೆ. ಪರಿಣಾಮ ಓರ್ವ ಡಾಕ್ಟರ್ ರನ್ನು ಪಕ್ಕದಲ್ಲೇ ಯಾವಾಗಲೂ ಇರಿಸಿಕೊಂಡಂತಹ ಅನುಭವ ಈ ವಾಚ್ ಮೂಲಕ ಆಗಲಿದೆ.

ಇದರೊಂದಿಗೆ ಆಫ್‌ಲೈನ್ ಮ್ಯೂಸಿಕ್ ಪ್ಲೇಬ್ಯಾಕ್‌ಗಾಗಿ 4GB ಸ್ಟೋರೇಜ್ ಆಯ್ಕೆ ಸಹ ಪಡೆದಿದ್ದು, ಈ ವಾಚ್‌ನ ಮತ್ತೊಂದು ವಿಶೇಷವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ವಾಚ್ ವಾಟರ್ ರೆಸಿಸ್ಟೆಂಟ್ ಆಗಿದ್ದು, ನೀವು ಇದನ್ನು ಎಲ್ಲಿಬೇಕಾದರೂ ಬಳಕೆ ಮಾಡಬಹುದಾಗಿದೆ. ಜೊತೆಗೆ ಈ ವಾಚ್ Zepp ಓಎಸ್ 3.0 ಅನ್ನು ರನ್ ಮಾಡಲಿದ್ದು, ಈ ಮೂಲಕ ವಿವಿಧ ಡಿವೈಸ್‌ಗಳಿಗೆ ಸುಲಭವಾಗಿ ಹೊಂದಾಣಿಕೆ ಆಗುತ್ತದೆ.

ಅಮಾಜ್‌ಫಿಟ್ ಬ್ಯಾಲೆನ್ಸ್ ಬ್ಯಾಟರಿ ಹಾಗೂ ಬೆಲೆ ವಿವರ: ಈ ಸ್ಮಾರ್ಟ್‌ವಾಚ್ ಅನ್ನು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದ್ರೆ 14 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ 475mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ನೀಡಲಾಗಿದೆ. ಈ ವಾಚ್ ಅನ್ನು 24,999ರೂ.ಗಳ ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಅಮಾಜ್‌ಫಿಟ್ ಇಂಡಿಯಾ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಡಿಸೆಂಬರ್ 4 ರಿಂದ ಖರೀದಿ ಮಾಡಬಹುದಾಗಿದೆ. ಈ ವಾಚ್ ಸನ್‌ಸೆಟ್ ಗ್ರೇ ಮತ್ತು ಮಿಡ್‌ನೈಟ್ ಬಣ್ಣಗಳಲ್ಲಿ ಲಭ್ಯ ಇದೆ.


Click it and Unblock the Notifications








