Home
ಸುದ್ದಿಜಾಲ

Amazfit: ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ ಲಾಂಚ್‌! ಬೆಲೆ ಎಷ್ಟು?

ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ಅಮಾಜ್‌ಫಿಟ್ (Amazfit) ವಾಚ್‌ಗಳು ಭಿನ್ನ ಎನಿಸಿಕೊಳ್ಳುತ್ತವೆ. ಈ ವಾಚ್‌ಗಳಲ್ಲಿ ಆಕರ್ಷಕ ವಿನ್ಯಾಸ, ವಿಶೇಷ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಅದರಂತೆ ಈಗ 120 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳೊಂದಿಗೆ ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ (Amazfit Bip 5 Unity smartwatch) ಅನ್ನು ಜಾಗತಿಕವಾಗಿ ಅನಾವರಣ ಮಾಡಲಾಗಿದೆ.

ಹೌದು, ಈಗಾಗಲೇ ಮಾರುಕಟ್ಟೆಯಲ್ಲಿ ಸಾಕು ಎನಿಸುವಷ್ಟು ಸ್ಮಾರ್ಟ್‌ವಾಚ್‌ಗಳಿವೆ. ಆದರೆ ಈ ವಾಚ್ ಇನ್ಮುಂದೆ ಭಿನ್ನವಾಗಿ ಗುರುತಿಸಿಕೊಳ್ಳಲಿದೆ. ಯಾಕೆಂದರೆ ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ 1.91 ಇಂಚಿನ ಡಿಸ್‌ಪ್ಲೇ ಜೊತೆಗೆ ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಆಯ್ಕೆ ಪಡೆದಿದೆ. ಹಾಗಿದ್ರೆ ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ ಲಾಂಚ್‌! ಬೆಲೆ ಎಷ್ಟು?

ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್: ಅಮಾಜ್‌ಫಿಟ್ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ ಎಂಬ ಹೊಸ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ವಾಚ್ ಅಮಾಜ್‌ಫಿಟ್ ಬಿಪ್‌ 5 (Amazfit Bip 5) ಗೆ ಪರ್ಯಾಯವಾಗಿದ್ದು, ಹಲವಾರು ಪ್ರಮುಖ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಅದರಲ್ಲಿ ಪ್ರಮುಖವಾಗಿ 320 x 280 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 1.91ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ.

ಈ ಸ್ಮಾರ್ಟ್‌ವಾಚ್‌ನ ಬಾಳಿಕೆಯನ್ನು ಸುಧಾರಿಸುವ ಹಿನ್ನೆಲೆ ಸ್ಟೇನ್‌ಲೆಸ್ ಸ್ಟೀಲ್ ಫ್ರೇಮ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದರ ಜೊತೆಗೆ IP68 ರೇಟಿಂಗ್ ಅನ್ನು ಹೊಂದಿದೆ. ಅಂದರೆ ವಾಚ್ 30 ನಿಮಿಷಗಳ ಕಾಲ 1.5 ಮೀಟರ್ ಶುದ್ಧ ನೀರಿನಲ್ಲಿ ಇದ್ದರೂ ಸಹ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಇದರ ಜೊತೆಗೆ ಬಯೋಟ್ರ್ಯಾಕರ್ ಪಿಪಿಜಿ ಬಯೋಮೆಟ್ರಿಕ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುತ್ತದೆ.

ಇದರೊಂದಿಗೆ ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಲಿದ್ದು, ಈ ಸೆನ್ಸರ್‌ ಅಸಹಜ ಹೃದಯ ಬಡಿತ ವಾಚನಗೋಷ್ಠಿಗಳು ಮತ್ತು ಹೆಚ್ಚಿನ ಒತ್ತಡ ಅಥವಾ ಕಡಿಮೆ ಆಮ್ಲಜನಕದ ಮಟ್ಟ ಕಂಡುಬಂದಾಗ ಬಳಕೆದಾರರಿಗೆ ಎಚ್ಚರಿಕೆಗಳನ್ನು ನೀಡುತ್ತದೆ. ಇದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಪ್ರಮುಖವಾಗಿ ಈ ವಾಚ್‌ 120 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ ಅನ್ನು ಪಡೆದಿದ್ದು, ಧ್ವನಿ ಆಜ್ಞೆಗಳಿಗಾಗಿ ಅಮೆಜಾನ್ ಅಲೆಕ್ಸಾ ಬೆಂಬಲ ಪಡೆದಿದೆ.

ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ ಲಾಂಚ್‌! ಬೆಲೆ ಎಷ್ಟು?

ಈ ನಡುವೆ ಈ ವಿಶೇ‍ಷ ವಾಚ್‌ನಲ್ಲಿ 70 ಆಪ್‌ಗಳನ್ನು ಬೆಂಬಲಿಸಲಿದ್ದು, 300 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ 5 ದಿನಗಳ ಭಾರೀ ಬಳಕೆ, 11 ದಿನಗಳ ವಿಶಿಷ್ಟ ಬಳಕೆ ಅಥವಾ ಬ್ಯಾಟರಿ-ಸೇವರ್‌ನಲ್ಲಿ 26 ದಿನಗಳ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ. ಇದರಿಂದ ಪದೇ ಪದೇ ಚಾರ್ಜಿಂಗ್ ಮಾಡುವ ಅಗತ್ಯ ಇರುವುದಿಲ್ಲ.

ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್‌ವಾಚ್‌ ಪ್ರಸ್ತುತ ಯುಕೆ ಮತ್ತು ಯುಎಸ್‌ ಎರಡರಲ್ಲೂ ಲಭ್ಯ ಇದ್ದು, ಕ್ರಮವಾಗಿ $59.99 ಮತ್ತು £69.99 ಕ್ಕೆ ಬೆಲೆಯಯನ್ನು ಪಡೆದುಕೊಂಡಿದೆ. ಆದರೂ ಸಹ ಈ ಸ್ಮಾರ್ಟ್‌ವಾಚ್‌ ಇತರ ಪ್ರದೇಶಗಳ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

ಅಮಾಜ್‌ಫಿಟ್ ಬಿಪ್ 5 ಯೂನಿಟಿ ಸ್ಮಾರ್ಟ್‌ವಾಚ್ ಲಾಂಚ್‌! ಬೆಲೆ ಎಷ್ಟು?

ಅಮಾಜ್‌ಫಿಟ್ ಬಿಪ್ 5: ಕೆಲವು ದಿನಗಳ ಹಿಂದಷ್ಟೇ ಅಮಾಜ್‌ಫಿಟ್ ಬಿಪ್ 5 ಸ್ಮಾರ್ಟ್‌ವಾಚ್‌ ಅನ್ನೂ ಸಹ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ 1.91 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 300 mAh ಸಾಮರ್ಥ್ಯದ ಬ್ಯಾಟರಿ ಮತ್ತು ಆರೋಗ್ಯ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಪಡೆದುಕೊಂಡಿದೆ ಅದರಲ್ಲಿ ಈ ವಾಚ್‌ ಕೈಗೆಟುಕುವ ಬೆಲೆ ವಿಭಾಗದಲ್ಲಿ ಲಭ್ಯ ಇದ್ದು, ಬಜೆಟ್ ವಿಭಾಗದಲ್ಲಿನ ಖರೀದಿದಾರರಿಗೆ ಪರಿಪೂರ್ಣ ಅನುಭವ ನೀಡಲಿದೆ.

Best Mobiles in India

English summary
The Amazfit Bip 5 Unity smartwatch features a 1.91-inch display with a stainless steel body. In addition to this, more than 120 sports mode options can be found in it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+