ಭಾರತದಲ್ಲಿ ಅಮಾಜ್‌ಫಿಟ್ ಫಾಲ್ಕನ್ ಸ್ಮಾರ್ಟ್‌ವಾಚ್ ಲಾಂಚ್; ಬೆಲೆ 44,999ರೂ. ಗಳು!
ಅಮಾಜ್‌ಫಿಟ್ ಅತ್ಯುತ್ತಮ ಜಿಪಿಎಸ್ ಸ್ಮಾರ್ಟ್‌ವಾಚ್ ನಿರ್ಮಾಣ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಇದರ ನಡುವೆ ಈಗಾಗಲೇ ಹಲವಾರು ರೀತಿಯ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಭಾಗವಾಗಿಯೇ ಈಗ ಭಾರತದಲ್ಲಿ ಹೊಸ ಪ್ರೀಮಿಯಂ ವಾಚ್ ಅನ್ನು ಲಾಂಚ್ ಮಾಡಿದೆ. ಈ ವಾಚ್ 150 ಸ್ಪೋರ್ಟ್ಸ್ ಮೋಡ್ ಗಳನ್ನು ಹೊಂದಿದೆ.

ಹೌದು, ಅಮಾಜ್‌ಫಿಟ್ ಫಾಲ್ಕನ್ ಆರು ಉಪಗ್ರಹ ಸ್ಥಾನೀಕರಣ ವ್ಯವಸ್ಥೆಗೆ ಬೆಂಬಲವಾಗಿರುವ ಇನ್‌ಬಿಲ್ಟ್ ಜಿಪಿಎಸ್ ಆಯ್ಕೆ ಪಡೆದಿದ್ದು, ಝೆಪ್ (Zepp) ಆಪ್ ಮೂಲಕ ರಿಯಲ್ ಟೈಮ್ ನ್ಯಾವಿಗೇಷನ್‌ಗಾಗಿ ಮಾರ್ಗದ ಫೈಲ್‌ಗಳನ್ನು ಇನ್‌ಪುಟ್ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಕೈಟ್ ಸರ್ಫಿಂಗ್‌ನಂತಹ ಹೈ-ಸ್ಪೀಡ್ ವಾಟರ್ ಸ್ಪೋರ್ಟ್ಸ್‌ನಿಂದ ಹಿಡಿದು ಗಾಲ್ಫ್ ಸ್ವಿಂಗ್ ಮೋಡ್ ವರೆಗಿನ ಫೀಚರ್ಸ್ ಹೊಂದಿದ್ದು, ಈ ವಾಚ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ಹೇಗಿದೆ?
ಅಮಾಜ್‌ಫಿಟ್ ಫಾಲ್ಕನ್ ಏರ್ಕ್ರಾಫ್ಟ್ ಗ್ರೇಡ್ TC4 ಟೈಟಾನಿಯಂ ಯುನಿಬಾಡಿಯಿಂದ ಮಾಡಲ್ಪಟ್ಟಿದ್ದು, ಈ ವಾಚ್ 1.28 ಇಂಚಿನ ಅಮೋಲೆಡ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 1,000nits ಬ್ರೈಟ್‌ನೆಸ್ ನೀಡಲಿದೆ. ಹಾಗೆಯೇ ಬಲವಾದ ನೀಲಮಣಿ ಸ್ಫಟಿಕ ಗಾಜಿನಿಂದ ರೂಪಿಸಲಾಗಿದ್ದು, ತುಕ್ಕು ನಿರೋಧಕವಾಗಿದೆ.

ಪ್ರಮುಖ ಫೀಚರ್ಸ್
ಈ ಸ್ಮಾರ್ಟ್‌ವಾಚ್ ಕೈಟ್ ಸರ್ಫಿಂಗ್‌ನಂತಹ ಹೈ-ಸ್ಪೀಡ್ ವಾಟರ್ ಸ್ಪೋರ್ಟ್ಸ್, ಗಾಲ್ಫ್ ಸ್ವಿಂಗ್ ಮೋಡ್, ಟ್ರಯಥ್ಲಾನ್ ಮೋಡ್ ಸೇರಿದಂತೆ 150 ಇನ್‌ಬಿಲ್ಟ್ ಸ್ಪೋರ್ಟ್ಸ್ ಮೋಡ್‌ಗಳನ್ನು ಇದು ಹೊಂದಿದೆ. ಹಾಗೆಯೇ ಬಳಕೆದಾರರು ಎಲ್ಲಿವರೆಗೆ ತಮ್ಮ ಚಟುವಟಿಕೆಯಲ್ಲಿ ಇರುತ್ತಾರೋ ಅಲ್ಲಿವರೆಗೂ ಸ್ಪೋರ್ಟ್ಸ್ ಮೋಡ್ ಡೇಟಾ ಆನ್ ಸ್ಕ್ರೀನ್‌ನಲ್ಲಿ ಇರುತ್ತದೆ.

ಇನ್ನುಳಿದಂತೆ ಈ ವಾಚ್‌ನಲ್ಲಿ ಮ್ಯೂಸಿಕ್ ಸ್ಟೋರೇಜ್ ಮಾಡಬಹುದಾಗಿದ್ದು, ಬ್ಲೂಟೂತ್ ಇಯರ್‌ಫೋನ್ ಮೂಲಕ ಆಲಿಸಬಹುದಾಗಿದೆ ಹಾಗೆಯೇ ಬಳಕೆದಾರರು ಆಯ್ದ ಚಟುವಟಿಕೆಯ ಡೇಟಾವನ್ನು ಅಡಿದಾಸ್ ರನ್ನಿಂಗ್ ಆಪ್‌ಗೆ ಸಿಂಕ್ ಮಾಡಬಹುದು. ಇದರೊಂದಿಗೆ ಈ ಅಡಿದಾಸ್ ರನ್ನಿಂಗ್ ಆಪ್ ಕಸ್ಟಮೈಸ್ ಮಾಡಿದ ಸ್ಪೋರ್ಟ್ಸ್ ವರದಿಯನ್ನು ನೀಡಲಿದ್ದು, ಇದು ಪ್ರತಿ ವ್ಯಾಯಾಮದ ನಂತರ, ಗುರಿ ತಲುಪಲು ಮತ್ತು ಪರಿಣಾಮಕಾರಿ ತರಬೇತಿ ಸುಧಾರಣೆಗಳಿಗೆ ಸಹಾಯ ಮಾಡುತ್ತದೆ.

AI ಚಾಲಿತ ಝೆಪ್ ಕೋಚ್
ಕಂಪನಿಯು ಹೊಸ AI ಚಾಲಿತ ಜೆಪ್ ಕೋಚ್ ಆಪ್ ಅನ್ನು ಅಮಾಜ್‌ಫಿಟ್ ಫಾಲ್ಕನ್‌ನೊಂದಿಗೆ ಪರಿಚಯಿಸಿದೆ . ಇದು ಸ್ಮಾರ್ಟ್ ಕೋಚಿಂಗ್ ಅಲ್ಗಾರಿದಮ್ ಆಗಿದ್ದು, ಬಳಕೆದಾರರ ಭೌತಿಕ ಗುಣಲಕ್ಷಣಗಳ ಆಧಾರದ ಮೇಲೆ ಸೂಕ್ತವಾದ ಮಾರ್ಗದರ್ಶನವನ್ನು ನೀಡುತ್ತಾ ಬರುತ್ತದೆ. ಹಾಗೆಯೇ ಬಳಕೆದಾರರಿಗೆ ವ್ಯಾಯಾಮದ ಅನುಭವದ ಮಟ್ಟವನ್ನು ಇದು ಸುಧಾರಿಸುತ್ತದೆ.

ಇದಿಷ್ಟೇ ಅಲ್ಲದೆ, ಬಳಕೆದಾರರಿಗೆ ತಮ್ಮ ಕ್ರೀಡಾ ತರಬೇತಿಯನ್ನು ಸುಧಾರಿಸಲು ಮತ್ತು ಉತ್ತಮ ಫಿಟ್‌ನೆಸ್ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ವೈಜ್ಞಾನಿಕವಾಗಿ ಸಹಾಯ ಮಾಡುತ್ತದೆ. ಝೆಪ್ ಆಪ್‌ನಲ್ಲಿ ವಿವರವಾದ ಚಟುವಟಿಕೆಯ ವರದಿಯನ್ನು ರಚಿಸುವ ಮೊದಲು ಅಮಾಜ್‌ಫಿಟ್ ನ ಬಯೋಟ್ರ್ಯಾಕರ್ PPGPPG ಬಯೋಮೆಟ್ರಿಕ್ ಟ್ರ್ಯಾಕಿಂಗ್ ಆಪ್ಟಿಕಲ್ ಸೆನ್ಸರ್ ತಂತ್ರಜ್ಞಾನವು ಆರೋಗ್ಯ ಮತ್ತು ಫಿಟ್‌ನೆಸ್ ಮೆಟ್ರಿಕ್‌ಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಬ್ಯಾಟರಿ ವಿವರ
ಅಮಾಜ್‌ಫಿಟ್ ಫಾಲ್ಕನ್ ಸ್ಮಾರ್ಟ್‌ವಾಚ್ 500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು ಬರೋಬ್ಬರಿ 14 ದಿನಗಳವರೆಗೆ ಬ್ಯಾಕಪ್ ನೀಡಲಿದೆ.

ಅಮಾಜ್‌ಫಿಟ್ ಪಾಪ್ 2 ಸ್ಮಾರ್ಟ್‌ವಾಚ್
ಈ ಸ್ಮಾರ್ಟ್‌ವಾಚ್ ಲಾಂಚ್ ಮಾಡುವ ಮುನ್ನವೇ ಅಮಾಜ್‌ಫಿಟ್ ಇತ್ತೀಚೆಗೆ ತನ್ನ ಅಮಾಜ್‌ಫಿಟ್ ಪಾಪ್ 2 ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿತ್ತು. ಈ ವಾಚ್ 1.78 ಇಂಚಿನ ಹೆಚ್‌ಡಿ ಅಮೋಲೆಡ್ 2.5D ಕರ್ವ್ಡ್ ಡಿಸ್‌ಪ್ಲೇ ಜೊತೆಗೆ ಆಲ್‌ವೇಸ್ ಆನ್ ಫೀಚರ್ಸ್ ಪಡೆದುಕೊಂಡಿದೆ. ಇನ್ನು ಹೃದಯ ಬಡಿತ ಮಾನಿಟರ್, Sp02 ಸೆನ್ಸರ್ ಜೊತೆಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಇದು ಹೊಂದಿದೆ. ಭಾರತದಲ್ಲಿ ಈ ವಾಚ್‌ಗೆ 3,999 ರೂ. ನಿಗದಿ ಮಾಡಲಾಗಿದೆ.

ಬೆಲೆ ಹಾಗೂ ಲಭ್ಯತೆ
ಅಮಾಜ್‌ಫಿಟ್ ಫಾಲ್ಕನ್ ಸ್ಮಾರ್ಟ್‌ವಾಚ್ ಗೆ 44,999 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಈ ವಾಚ್ ಡಿಸೆಂಬರ್ 3, 2022 ರಿಂದ ಅಮಾಜ್‌ಫಿಟ್ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಜೊತೆಗೆ ಡಿಸೆಂಬರ್ 1 ರಿಂದ ಡಿಸೆಂಬರ್ 3, 2022 ರವರೆಗೆ ಪ್ರಿ- ಆರ್ಡರ್ ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಲಾಗಿದೆ.


Click it and Unblock the Notifications








