ಭಾರತದಲ್ಲಿ ಅಮಾಜ್‌ಫಿಟ್‌ GTR 2e ಮತ್ತು GTS 2e ಸ್ಮಾರ್ಟ್‌ವಾಚ್‌ ಬಿಡುಗಡೆ!

|

ಹಲವು ಭಿನ್ನ ಶ್ರೇಣಿಗಳ ಸ್ಮಾರ್ಟ್‌ವಾಚ್‌ ಮೂಲಕ ಗ್ರಾಹಕರ ಗಮನ ಸೆಳೆದಿರುವ ಜನಪ್ರಿಯ ಅಮಾಜ್‌ಫಿಟ್ ತನ್ನ ಬಹುನಿರೀಕ್ಷಿತ ಅಮಾಜ್‌ಫಿಟ್ GTR 2e ಮತ್ತು ಅಮಾಜ್‌ಫಿಟ್ GTS 2e ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ ವಾಚ್‌ಗಳು ಈಗಾಗಲೇ ಏರ್‌ ಪ್ರೇಶರ್ ಹಾಗೂ ತಾಪಮಾನ ಸೆನ್ಸಾರ್‌ನಂತಹ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿವೆ.

ಅಮಾಜ್‌ಫಿಟ್

ಹೌದು, ಅಮಾಜ್‌ಫಿಟ್ ಭಾರತದಲ್ಲಿ ತನ್ನ ಹೊಸ ಅಮಾಜ್‌ಫಿಟ್‌ GTR 2e ಮತ್ತು GTS 2e ಸ್ಮಾರ್ಟ್‌ವಾಚ್‌ಗಳನ್ನು ಲಾಂಚ್ ಮಾಡಿದೆ. ಈ ಎರಡು ಸ್ಮಾರ್ಟ್‌ ವಾಚ್‌ಗಳು 9,999ರೂ.ಗಳ ಆರಂಭಿಕ ಬೆಲೆಯನ್ನು ಪಡೆದುಕೊಂಡಿವೆ. ಅಮಾಜ್‌ಫಿಟ್‌ GTS 2e ಸ್ಮಾರ್ಟ್‌ವಾಚ್ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಹಾಗೆಯೇ ಅಮಾಜ್‌ಫಿಟ್‌ GTR 2e ವಾಚ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ಮೂಲಕ ಲಭ್ಯವಾಗಲಿದೆ. ಸಂಸ್ಥೆಯು ತನ್ನ ಅಧಿಕೃತ ತಾಣದಲ್ಲಿ ಈ ಎರಡು ವಾಚ್‌ಗಳನ್ನು ಇದೇ ಜನೆವರಿ 20ರಿಂದ ಸೇಲ್ ಆರಂಭಿಸಲಿವೆ ಎನ್ನಲಾಗಿದೆ.

ಪಿಕ್ಸೆಲ್‌ಗಳ

ಅಮಾಜ್‌ಫಿಟ್ GTR 2e ಮತ್ತು ಅಮಾಜ್‌ಫಿಟ್ GTS 2e ಸ್ಮಾರ್ಟ್‌ವಾಚ್‌ನ ಬಹುತೇಕ ಫೀಚರ್ಸ್‌ಗಳಲ್ಲಿ ಸಾಮ್ಯತೆಗಳಿವೆ. ಈ ಸ್ಮಾರ್ಟ್ ವಾಚ್ 1.39-ಇಂಚಿನ AMOLED ಪರದೆಯನ್ನು ಅದೇ 454 × 454 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. GTR 2e ವಾಚ್ 2.5 D ಬಾಗಿದ ವಿನ್ಯಾಸವನ್ನು ಹೊಂದಿದೆ. ಈ ವಾಚ್ ಅಬ್ಸಿಡಿಯನ್ ಬ್ಲ್ಯಾಕ್, ಮ್ಯಾಚಾ ಗ್ರೀನ್ ಮತ್ತು ಸ್ಲೇಟ್ ಗ್ರೇ ಬಣ್ಣಗಳ ಆಯ್ಕೆ ಪಡೆದಿದೆ.

ಬ್ಲೂಟೂತ್

ಅಮಾಜ್‌ಫಿಟ್ 5 ಎಟಿಎಂ (50 ಮೀಟರ್) ಜಲನಿರೋಧಕ ಪ್ರಮಾಣೀಕರಣ ಮತ್ತು ಹುವಾಮಿ-ಅಭಿವೃದ್ಧಿಪಡಿಸಿದ ಬಯೋಟ್ರಾಕರ್ ಪಿಪಿಜಿ ಜೈವಿಕ ಡೇಟಾ ಸಂವೇದಕವನ್ನು GTR 2e ಸೇರಿಸಿದೆ. ಸ್ಮಾರ್ಟ್ ವಾಚ್ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬ್ಲೂಟೂತ್ ಮೂಲಕ ಸಂಪರ್ಕಿಸುತ್ತದೆ ಮತ್ತು ಇದು ಬ್ಲೂಟೂತ್ ಫೋನ್ ಕರೆಗಳನ್ನು ಬೆಂಬಲಿಸುವುದಿಲ್ಲ. ಸಂವೇದಕಗಳಲ್ಲಿ ವೇಗವರ್ಧಕ ಸಂವೇದಕ, ಗೈರೊಸ್ಕೋಪ್, 3-ಅಕ್ಷದ ಭೂಕಾಂತೀಯ ಸಂವೇದಕ, ಆಂಬಿಯೆಂಟ್ ಲೈಟ್ ಸಂವೇದಕ, ವಾಯು ಒತ್ತಡ ಸಂವೇದಕ ಮತ್ತು ತಾಪಮಾನ ಸಂವೇದಕ ಸೇರಿವೆ. ಹಾಗೆಯೇ 471mAh ಬ್ಯಾಟರಿಗೆ GTR 2e ಬ್ಯಾಟರಿ ಪಡೆದಿದೆ.

ಲಿಲಾಕ್

ಅಮಾಜ್‌ಫಿಟ್ GTS 2e ಸಹ ಜಿಟಿಎಸ್ 2 ನೊಂದಿಗೆ ಸಾಕಷ್ಟು ಹೋಲಿಕೆ ಪಡೆದಿದೆ. ಈ ವಾಚ್ ಅಬ್ಸಿಡಿಯನ್ ಬ್ಲ್ಯಾಕ್, ಮಾಸ್ ಗ್ರೀನ್ ಮತ್ತು ಲಿಲಾಕ್ ಪರ್ಪಲ್ ಪಡೆದಿದೆ. ಈ ವಾಚ್ 1.8-ಇಂಚಿನ AMOLED ಪರದೆಯನ್ನು ಹೊಂದಿದ್ದು, 348 × 442 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ರಕ್ತದ ಆಮ್ಲಜನಕದ ಮಟ್ಟದ ಮೇಲ್ವಿಚಾರಣೆಗೆ ಅದೇ ಹುವಾಮಿ ನಿರ್ಮಿತ ಸಂವೇದಕವನ್ನು ಸಹ ಹೊಂದಿದೆ. ಇದು 246mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಇದು ಮಧ್ಯಮ ಬಳಕೆಯಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

Most Read Articles
Best Mobiles in India

English summary
Amazfit GTR 2e and the GTS 2e. Both the smartwatches will be available for purchase at Rs 9,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X