Home
ಸುದ್ದಿಜಾಲ

Smartring: ಅಮಾಜ್‌ಫಿಟ್‌ನಿಂದ ಹೊಸ ಸ್ಮಾರ್ಟ್‌ರಿಂಗ್‌ ಲಾಂಚ್‌! ಏನೆಲ್ಲಾ ಫೀಚರ್ಸ್‌ ಇದೆ? ಯಾವಾಗ ಲಭ್ಯ?

ಅಮಾಜ್‌ಫಿಟ್ (Amazfit) ಕಂಪೆನಿ ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಇತ್ತೀಚೆಗೆ ಟಿ-ರೆಕ್ಸ್ ಅಲ್ಟ್ರಾ, ಅಮಾಜ್‌ಫಿಟ್ ಚೀತಾ, ಬ್ಯಾಲೆನ್ಸ್, ಚೀತಾ ಪ್ರೊ ಸೇರಿದಂತೆ ಅನೇಕ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡುವ ಮೂಲಕ ಬಹಳ ಸದ್ದು ಮಾಡಿತ್ತು. ಈಗ ಸ್ಮಾರ್ಟ್‌ರಿಂಗ್‌ (smartring) ವಿಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಮೆರೆಯಲು ಸಜ್ಜಾಗಿದೆ.

ಹೌದು, ಇದೀಗ ಅಮಾಜ್‌ಫಿಟ್ 10ATM ವಾಟರ್ ರೆಸಿಸ್ಟೆನ್ಸ್‌ನೊಂದಿಗೆ ಅಮಾಜ್‌ಫಿಟ್ ಹಿಲಿಯೊ ರಿಂಗ್ (Amazfit Helio Ring) ಅನ್ನು CES 2024 ರಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್‌ರಿಂಗ್‌ ಅಮಾಜ್‌ಫಿಟ್ ಸ್ಮಾರ್ಟ್‌ವಾಚ್‌ ಜೊತೆಗೂ ಸಂಯೋಜನೆ ಆಗಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು?, ಇದು ಹೇಗೆಲ್ಲಾ ಬಳಕೆ ಆಗಲಿದೆ?, ಇದು ಯಾವಾಗ ಲಭ್ಯ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಅಮಾಜ್‌ಫಿಟ್‌ನಿಂದ ಹೊಸ ಸ್ಮಾರ್ಟ್‌ರಿಂಗ್‌ ಲಾಂಚ್‌! ಏನೆಲ್ಲಾ ಫೀಚರ್ಸ್‌ ಇದೆ?...

ಮಾಜ್‌ಫಿಟ್ ಹಿಲಿಯೊ ರಿಂಗ್: ಅಮಾಜ್‌ಫಿಟ್ ಹಿಲಿಯೊ ರಿಂಗ್ ಅನ್ನು ಲಾಸ್ ವೇಗಾಸ್‌ನಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ (CES) 2024 ರಲ್ಲಿ ಅನಾವರಣ ಮಾಡಲಾಗಿದೆ. ಜೆಪ್ (Zepp) ಹೆಲ್ತ್‌ನ ಸ್ಮಾರ್ಟ್‌ರಿಂಗ್ ಇದಾಗಿದ್ದು, ಈ ಮೂಲಕ ಜೆಪ್ ಅಪ್ಲಿಕೇಶನ್‌ನೊಂದಿಗೆ ಹಾಗೂ ಸ್ಮಾರ್ಟ್‌ವಾಚ್‌ನೊಂದಿಗೆ ಕೆಲಸ ಮಾಡುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಈ ವಿಶೇಷ ಸ್ಮಾರ್ಟ್‌ರಿಂಗ್ ನಾಯ್ಸ್ ಲೂನಾ ರಿಂಗ್ ಮತ್ತು ಬೋಟ್ ಸ್ಮಾರ್ಟ್ ರಿಂಗ್‌ಗೆ (Noise Luna Ring, Boat Smart Ring) ಸ್ಪರ್ಧೆ ನೀಡುವ ಸಾಮರ್ಥ್ಯ ಪಡೆದಿದೆ.

ಈ ವಿಶೇಷ ಅಮಾಜ್‌ಫಿಟ್ ಹಿಲಿಯೊ ರಿಂಗ್ ಈ ವರ್ಷದ ಕೊನೆಯಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪನಿ ದೃಢಪಡಿಸಿದೆ. ಅದಾಗ್ಯೂ ಕಂಪನಿಯು ಸ್ಮಾರ್ಟ್‌ರಿಂಗ್‌ನ ವಿನ್ಯಾಸವನ್ನು ಬಹಿರಂಗಪಡಿಸಿದೆಯಾದರೂ ಸಹ ಇದರ ಹಲವು ಫೀಚರ್ಸ್‌ ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಅಮಾಜ್‌ಫಿಟ್ ಸ್ಮಾರ್ಟ್‌ವಾಚ್ ಜೊತೆಗೆ ರಿಂಗ್ ಅನ್ನು ಬಳಸಬಹುದೆಂಬ ಅಧಿಕೃತ ಮಾಹಿತಿ ಮಾತ್ರ ಸದ್ಯಕ್ಕೆ ಲಭ್ಯ ಇದೆ.

ಅಮಾಜ್‌ಫಿಟ್‌ನಿಂದ ಹೊಸ ಸ್ಮಾರ್ಟ್‌ರಿಂಗ್‌ ಲಾಂಚ್‌! ಏನೆಲ್ಲಾ ಫೀಚರ್ಸ್‌ ಇದೆ?...

ಅದಾಗ್ಯೂ ಕೆಲವು ಮಾಹಿತಿ ಪ್ರಕಾರ ಈ ಸ್ಮಾರ್ಟ್‌ರಿಂಗ್‌ 10 ATM ನೀರಿನ ಪ್ರತಿರೋಧವನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಅಥ್ಲೀಟ್‌ಗಳಿಗೆ ಉತ್ತಮ ಆಯ್ಕೆ ಆಗಿರಲಿದೆ ಎನ್ನಲಾಗಿದೆ. ಅಂದರೆ ಅವರ ತರಬೇತಿಗೆ ಉತ್ತಮ ರೀತಿಯಲ್ಲಿ ಸಹಕಾರಿ ಆಗಲಿದೆ. ಅಲ್ಲದೆ. ಅಥ್ಲೀಟ್‌ಗಳಿಗೆ ಆಗುವ ಗಾಯದ ಸಮಸ್ಯೆಗಳನ್ನೂ ಸಹ ಇದು ಟ್ರ್ಯಾಕ್‌ ಮಾಡಲಿದೆ. ಇನ್ನು ಇದರ ಟೈಟಾನಿಯಂ ಮಿಶ್ರಲೋಹದ ವಸ್ತುವು ದೀರ್ಘ ಬಾಳಿಕೆ ಮತ್ತು ಹಗುರ ಅನುಭವವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.

ಈ ಸ್ಮಾರ್ಟ್‌ ರಿಂಗ್ ಎರಡು ಆಯ್ಕೆಯಲ್ಲಿ ಲಭ್ಯ ಇದ್ದು, ಒಂದು 3.8g ತೂಕದ ರಿಂಗ್‌ ಆಗಿದ್ದರೆ ಮತ್ತೊಂದು 12 4g ತೂಕ ಹೊಂದಿದೆ. ಈ ಮೂಲಕ ಭಿನ್ನ ಫೀಚರ್ಸ್‌ ಆಯ್ಕೆಯನ್ನು ರಿಂಗ್‌ಗಳು ಪಡೆದಿರಲಿವೆ ಎಂದು ತಿಳಿದುಬಂದಿದೆ. ಉಳಿದಂತೆ ಜೆಪ್ ಆಪ್‌ ಬಳಕೆ ಮಾಡಿಕೊಂಡು ಈ ಸ್ಮಾರ್ಟ್‌ರಿಂಗ್ ಬಳಕೆದಾರರು ಹೃದಯ ಬಡಿತದ ಮಾಹಿತಿ, ಮಲಗುವ ಸಮಯದ ಹೃದಯ ಬಡಿತ, ಉಸಿರಾಟ, ರಕ್ತದ ಆಮ್ಲಜನಕದ ಶುದ್ಧತ್ವ ಮಟ್ಟ ಮತ್ತು ದೇಹದ ಉಷ್ಣತೆಯನ್ನು ಮೇಲ್ವಿಚಾರಣೆ ಮಾಹಿತಿಯನ್ನು ತಿಳಿಯಬಹುದಾಗಿದೆ.

ಅಲ್ಲದೆ ಈ ಸ್ಮಾರ್ಟ್‌ ರಿಂಗ್‌ ನಿದ್ರೆ-ಟ್ರ್ಯಾಕಿಂಗ್ ಡಿವೈಸ್‌ ಆಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಎಲೆಕ್ಟ್ರೋಡರ್ಮಲ್ ಆಕ್ಟಿವಿಟಿ (EDA) ಸೆನ್ಸರ್‌ಗಳನ್ನೂ ಸಹ ಹೊಂದಿದೆ ಎಂದು ತಿಳಿದುಬಂದಿದ್ದು, ಭಾವನಾತ್ಮಕ ಆರೋಗ್ಯದ ಮೇಲೆ ಹೆಚ್ಚಿನ ಗಮನಹರಿಸುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ ಬೆವರಿನಂತಹ ದೈಹಿಕ ಭಾವನಾತ್ಮಕ ಒತ್ತಡ ಸೂಚಕಗಳನ್ನು ಟ್ರ್ಯಾಕ್ ಮಾಡಲಿದೆ.

ಅಮಾಜ್‌ಫಿಟ್‌ನಿಂದ ಹೊಸ ಸ್ಮಾರ್ಟ್‌ರಿಂಗ್‌ ಲಾಂಚ್‌! ಏನೆಲ್ಲಾ ಫೀಚರ್ಸ್‌ ಇದೆ?...

ಇದರೊಂದಿಗೆ ಇತರ ಫಿಟ್‌ನೆಸ್ ಟ್ರ್ಯಾಕರ್‌ಗಳಂತೆ, ಕ್ಯಾಲೋರಿ ಮಾನಿಟರಿಂಗ್ ಅನ್ನು ಸಹ ಇದು ಅನುಮತಿಸುತ್ತದೆ. ಆದರೆ, ಇದು ಜಿಪಿಎಸ್‌ ಸಂಪರ್ಕವನ್ನು ಬೆಂಬಲಿಸುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ವ್ಯಾಯಾಮದ ನಂತರ ಮೂರು ನಿಮಿಷಗಳಲ್ಲಿ ಹೃದಯ ಬಡಿತವು ಸಾಮಾನ್ಯ ಸ್ಥಿತಿಗೆ ಮರಳಲು ತೆಗೆದುಕೊಳ್ಳುವ ಸಮಯವನ್ನು ಟ್ರ್ಯಾಕ್ ಮಾಡುವ ಮೂಲಕ ಬಳಕೆದಾರರ ಹೃದಯರಕ್ತನಾಳದ ಆರೋಗ್ಯದ ಮೇಲೆ ಹೆಚ್ಚಿನ ಕೆಲಸ ಮಾಡುತ್ತದೆ ಎಂದು ಲೀಕ್‌ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರೊಂದಿಗೆ ಉತ್ತಮ ಬ್ಯಾಟರಿ ಬ್ಯಾಕಪ್‌ ಅನ್ನೂ ಸಹ ಇದು ಪಡೆದಿದೆ.

Best Mobiles in India

English summary
Amazfit has unveiled the Amazfit Helio Smartring with 10ATM water resistance at CES 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+