Home
ಸುದ್ದಿಜಾಲ

Xiaomi: ಶಿಯೋಮಿ ಫ್ಯಾನ್ ಫೆಸ್ಟಿವಲ್ ಸೇಲ್‌ 2024: ಶಿಯೋಮಿ 14 ಸೇರಿದಂತೆ ಅನೇಕ ಡಿವೈಸ್‌ಗಳಿಗೆ ಆಫರ್

ಶಿಯೋಮಿಯ (Xiaomi) ವಿವಿಧ ಡಿವೈಸ್‌ಗಳು ಬಳಕೆದಾರರಿಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತಿವೆ. ಈ ನಡುವೆ ಶಿಯೋಮಿ ಫ್ಯಾನ್ ಫೆಸ್ಟಿವಲ್ ಸೇಲ್‌ (Xiaomi Fan Festival 2024 sale) ಅನ್ನು ಆಯೋಜನೆ ಮಾಡಿದ್ದು, ಈ ಸೇಲ್‌ನಲ್ಲಿ ಕೆಲವು ಪ್ರಮುಖ ಡಿವೈಸ್‌ಗಳಿಗೆ ಭಾರೀ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ಶಿಯೋಮಿ ಫ್ಯಾನ್ ಫೆಸ್ಟಿವಲ್ 2024 ಸೇಲ್‌ ಈಗ ಭಾರತದಲ್ಲಿ ಲೈವ್ ಆಗಿದ್ದು, ಒಂದು ವಾರದವರೆ ಇರಲಿದೆ. ಈ ಸೇಲ್‌ನಲ್ಲಿ ನೀವು ಕಡಿಮೆ ಬೆಲೆಗೆ ಶಿಯೋಮಿ ಹಾಗೂ ರೆಡ್ಮಿ ಡಿವೈಸ್‌ಗಳನ್ನು ಖರೀದಿ ಮಾಡಬಹುದು. ಅಲ್ಲದೆ ಬ್ಯಾಂಕ್‌ ಆಫರ್ ಅನ್ನೂ ಸಹ ನೀಡಲಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ?, ಬ್ಯಾಂಕ್‌ ಕೊಡುಗೆ ಏನಿದೆ?, ಈ ಆಫರ್ ಎಲ್ಲಿಯವರೆಗೆ ಇರಲಿದೆ ಅನ್ನೋದನ್ನು ಗಮನಿಸೋಣ.

ಶಿಯೋಮಿ ಫ್ಯಾನ್ ಫೆಸ್ಟಿವಲ್ ಸೇಲ್‌ 2024: ಅನೇಕ ಡಿವೈಸ್‌ಗಳಿಗೆ ಆಫರ್...

ಶಿಯೋಮಿ ಫ್ಯಾನ್ ಫೆಸ್ಟಿವಲ್ ಸೇಲ್‌ 2024: ಭಾರತದಲ್ಲಿ ಈ ಸೇಲ್‌ ಲೈವ್‌ ಆಗಿದ್ದು, ಏಪ್ರಿಲ್ 12 ರವರೆಗೆ ಇರಲಿದೆ. ಈ ಸೇಲ್‌ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಏಪ್ರಿಲ್ 6 ರಂದು ಆರಂಭ ಮಾಡಲಾಗಿತ್ತು. ಈ ವಿಶೇಷ ಸೇಲ್‌ನಲ್ಲಿ ಶಿಯೋಮಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೇಲೆ 5,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ನೀಡಲು ಐಸಿಐಸಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಪಡೆಯಲಾಗಿದೆ.

ಅಲ್ಲದೆ ನೀವು ಈ ವೇಳೆ ಯಾವುದೇ ಡಿವೈಸ್‌ ಖರೀದಿ ಮಾಡುವಾಗ ಹೆಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌, ಆಕ್ಸಿಸ್‌, ಎಸ್‌ಬಿಐ ಮತ್ತು ಕೊಟಕ್‌ ಕ್ರೆಡಿಟ್ ಕಾರ್ಡ್‌ನಲ್ಲಿ 2,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಸೇಲ್‌ ನಲ್ಲಿ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಬೆಲೆ ಇಳಿಕೆಯ ಆಫರ್ ಮತ್ತು ಸಂಜೆ 4 ಗಂಟೆಗೆ ಬಿಡ್ & ವಿನ್ ಬೊನಾಂಜಾ ಪ್ರಯೋಜನ ಸಹ ಇರಲಿದೆ.

ಶಿಯೋಮಿ ಫ್ಯಾನ್ ಫೆಸ್ಟಿವಲ್ ಸೇಲ್‌ 2024: ಅನೇಕ ಡಿವೈಸ್‌ಗಳಿಗೆ ಆಫರ್...

ಯಾವೆಲ್ಲಾ ಡಿವೈಸ್‌ಗಳಿಗೆ ಕೊಡುಗೆ ಇದೆ?: ಶಿಯೋಮಿ 14 (Xiaomi 14) ನ 12GB+512GB ವೇರಿಯಂಟ್‌ಗೆ 69,999 ರೂ.ಗಳ ಬೆಲೆ ಇದ್ದು, ಈ ಸೇಲ್‌ನಲ್ಲಿ 59,999 ರೂ.ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅಲ್ಲದೆ ಈ ಫೋನ್‌ಗೆ ಬ್ಯಾಂಕ್‌ ಆಫರ್ ಸಹ ಇದ್ದು, ಇನ್ನೂ ಕಡಿಮೆ ದರದಲ್ಲಿ ಈ ಪ್ರೀಮಿಯಂ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಜೊತೆಗೆ ರೆಡ್ಮಿ ನೋಟ್‌ 13 ಪ್ರೊ+ 5G ಸ್ಮಾರ್ಟ್‌ಫೋನ್‌ (Redmi Note 13 Pro+ 5G) ಅನ್ನೂ ಸಹ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ 31,999 ರೂ.ಗಳ ಬೆಲೆಯ ಈ ಫೋನ್‌ ಅನ್ನು ಈ ವಿಶೇಷ ಸೇಲ್‌ನಲ್ಲಿ 28,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಫೋನ್‌ ಮಾತ್ರವಲ್ಲದೆ ಪ್ಯಾಡ್‌ ಅನ್ನೂ ಸಹ ಆಫರ್ ಬೆಲೆಗೆ ಖರೀದಿ ಮಾಡಬಹುದು. ಅಂದರೆ ಶಿಯೋಮಿ ಪ್ಯಾಡ್‌ 6 (Xiaomi Pad 6) ಭಾರತದಲ್ಲಿ ಕಳೆದ ಜೂನ್‌ನಲ್ಲಿ ಲಾಂಚ್‌ ಆಗಿದ್ದು, 26,999 ರೂ.ಗಳ ಆರಂಭಿಕ ಬೆಲೆ ಹೊಂದಿತ್ತು. ಆದರೆ, ಈಗ ನೀವು ಕೊಡುಗೆಗಳೊಂದಿಗೆ 22,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ರೆಡ್ಮಿ 12 5G (Redmi 12 5G) ಬಜೆಟ್ 5G ಸ್ಮಾರ್ಟ್‌ಫೋನ್ ಆಗಿದ್ದು, ಇದು ಭಾರತದಲ್ಲಿ 11,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಾಂಚ್‌ ಆಗಿತ್ತು. ಆದರೆ ಈಗ ನೀವು ಈ ಫೋನ್‌ ಅನ್ನು 10,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಶಿಯೋಮಿ ಫ್ಯಾನ್ ಫೆಸ್ಟಿವಲ್ ಸೇಲ್‌ 2024: ಅನೇಕ ಡಿವೈಸ್‌ಗಳಿಗೆ ಆಫರ್...

ಇದಿಷ್ಟೇ ಅಲ್ಲದೆ ಈ ಸೇಲ್‌ನಲ್ಲಿ ರೆಡ್ಮಿ ಬಡ್ಸ್‌ 4 ಆಕ್ಟಿವ್‌, ರೆಡ್ಮಿ ಸ್ಮಾರ್ಟ್‌ ಫೈರ್‌ ಟಿವಿ 4K 43, ಮತ್ತು ರೆಡ್ಮಿ 20,000mAh ಪವರ್ ಬ್ಯಾಂಕ್ ಅನ್ನೂ ಸಹ ಭಾರೀ ಆಫರ್‌ನೊಂದಿಗೆ ಕೊಂಡುಕೊಳ್ಳಬಹುದಾಗಿದೆ. ಹಾಗಿದ್ರೆ, ತಡಯಾಕೆ ನೀವು ಏನಾದರೂ ಶಿಯೋಮಿ ಅಥವಾ ರೆಡ್ಮಿ ಡಿವೈಸ್‌ಗಳನ್ನು ಖರೀದಿ ಮಾಡಲು ಮುಂದಾದರೆ ಈಗಲೇ ಈ ಆಫರ್ ಅನ್ನು ಸದುಪಯೋಗ ಮಾಡಿಕೊಳ್ಳಿ.

Best Mobiles in India

English summary
Xiaomi Fan Festival 2024 sale is now live in India where you can buy Xiaomi and Redmi devices at offer price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+