Home
ಸುದ್ದಿಜಾಲ

ಆಫರ್‌ನಲ್ಲಿ ಹೊಸ ವಿವೋ ಫೋನ್‌ ಖರೀದಿಸಬೇಕೆ? ಹಾಗಿದ್ರೆ, ಇಲ್ಲಿ ಗಮನಿಸಿ!

ವಿವೋ ಮೊಬೈಲ್‌ ಬ್ರ್ಯಾಂಡ್‌ ಭಾರತೀಯ ಮಾರುಕಟ್ಟೆಯಲ್ಲಿ ಭಿನ್ನ ರೇಂಜ್‌ನ ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದ್ದು, ಆ ಪೈಕಿ ಸಂಸ್ಥೆಯ ಬಜೆಟ್‌ ದರದ ಫೋನ್‌ಗಳು ಕೂಡಾ ಆಕರ್ಷಕ ಎನಿಸಿವೆ. ಸಂಸ್ಥೆಯ ವಿವೋ T3 5G (Vivo T3 5G) ಮೊಬೈಲ್‌ ಸಕತ್ ಫೀಚರ್ಸ್‌, ಲುಕ್‌ ಹಾಗೂ ಬಜೆಟ್‌ ದರ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಗಮನಾರ್ಹ ಬೆಲೆ ಇಳಿಕೆ ಪಡೆದಿದ್ದು, ಗ್ರಾಹಕರು ವಾವ್‌ ಎನ್ನುವಂತೆ ಆಗಿದೆ.

ಹೌದು, ವಿವೋ T3 5G (Vivo T3 5G) ಮೊಬೈಲ್‌ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಶೇ. 13% ರಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಬಹುದಾಗಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ 19,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಖರೀದಿದಾರರು ಆಯ್ದ ಬ್ಯಾಂಕ್‌ಗಳ ಆಫರ್‌ ಸಹ ಪಡೆಯಲು ಅವಕಾಶ ಇದೆ.

ಆಫರ್‌ನಲ್ಲಿ ಹೊಸ ವಿವೋ ಫೋನ್‌ ಖರೀದಿಸಬೇಕೆ? ಹಾಗಿದ್ರೆ, ಇಲ್ಲಿ ಗಮನಿಸಿ!

ಅಂದಹಾಗೆ ವಿವೋದ ಈ ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಒಳಗೊಂಡಿದೆ. ಇನ್ನು ಗ್ರಾಹಕರು ಇದನ್ನು ಕಾಸ್ಮಿಕ್ ಬ್ಲೂ ಮತ್ತು ಸಿಸ್ಟಲ್ ಫ್ಲೇಕ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ವಿವೋ T3 5G ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ವಿವೋ T3 5G - ಫೀಚರ್ಸ್‌ ಹೀಗಿವೆ

ವಿವೋ T3 5G ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದು 2400 × 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಹಾಗೂ 360Hz ಟಚ್ ಸ್ಯಾಂಪ್ಲಿಂಗ್ ರೇಟ್, ಹೆಚ್‌ಡಿಆರ್ 10+ ಸೌಲಭ್ಯ, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಸೌಲಭ್ಯ ಕೂಡಾ ಪಡೆದಿದೆ.

ವಿವೋ T3 5G ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 4nm ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್ ಕೂಡಾ ಪಡೆದಿದೆ. ಇದರೊಂದಿಗೆ 8GB RAM, 128GB ಹಾಗೂ 256GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಇವೆ. ಹಾಗೆಯೇ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ವಿಸ್ತರಿಸುವ ಸೌಲಭ್ಯ ಪಡೆದಿದೆ.

ವಿವೋ T3 5G ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಅದೇ ರೀತಿ ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ.

ವಿವೋ T3 5G ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಕುಡಾ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್‌ ಆಯ್ಕೆಗಳನ್ನು ಹೊಂದಿದೆ.

ವಿವೋ T3 5G ಫೋನ್‌ 8GB + 128GB ಮಾಡೆಲ್‌ ಹಾಗೂ 8GB + 256GB ಮಾಡೆಲ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಇದು ಕಾಸ್ಮಿಕ್ ಬ್ಲೂ ಮತ್ತು ಸಿಸ್ಟಲ್ ಫ್ಲೇಕ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
Amazing Price cut on Vivo T3 5G in India. check offer price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+