ಅಮೆಜಾನ್ 5G ರೆವಲ್ಯೂಷನ್ ಸೇಲ್: ಈ ಫೋನ್‌ಗಳಿಗೆ ಬೊಂಬಾಟ್ ಕೊಡುಗೆ!
ಅಮೆಜಾನ್ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಒಂದಾಗಿದ್ದು, ಆಗಾಗ್ಗೆ ಸ್ಮಾರ್ಟ್‌ಡಿವೈಸ್‌ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡುವ ಮೂಲಕ ಸದ್ದು ಮಾಡುತ್ತಿರುತ್ತದೆ. ಇದರ ಭಾಗವಾಗಿಯೇ ಇದೀಗ ಅಮೆಜಾನ್ 5G ರೆವೊಲ್ಯೂಷನ್ ಸೇಲ್ (Amazon 5G Revolution Sale) ಘೋಷಣೆ ಮಾಡಿದ್ದು, ಈ ಸೇಲ್‌ನಲ್ಲಿ ಒನ್‌ಪ್ಲಸ್,ಶಿಯೋಮಿ, ಐಕ್ಯೂ ಸೇರಿದಂತೆ ಇನ್ನೂ ಹತ್ತು ಹಲವು ಕಂಪೆನಿಯ 5G ಫೋನ್‌ಗಳಿಗೆ ಆಫರ್ ನೀಡಲಾಗಿದೆ.
ಹೌದು, ಅಮೆಜಾನ್ ಇಂದಿನಿಂದ 5G ರೆವೊಲ್ಯೂಷನ್ ಸೇಲ್ ಆರಂಭಿಸಿದ್ದು, ಈ ಸೇಲ್ ಮೇ 31 ರವರೆಗೆ ನಡೆಯುತ್ತದೆ. ಈ ವೇಳೆ ಆಯ್ದ ಫೋನ್‌ಗಳಲ್ಲಿ ಗ್ರಾಹಕರು ಬರೋಬ್ಬರಿ 10,000ರೂ.ವರೆಗೂ ವಿನಿಮಯ ಬೋನಸ್‌ಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ದುಬಾರಿ ಬೆಲೆಯ ಫೋನ್‌ಗಳು ಇದೀಗ ಕೈಗೆಟಕುವ ದರದಲ್ಲಿ ಕಾಣಿಸಿಕೊಂಡಿವೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್ ಲಭ್ಯ ಇದೆ ನೋಡೋಣ.

ಐಕ್ಯೂ 11 5G : ಈ ಸ್ಮಾರ್ಟ್‌ಫೋನ್ 2K E6 ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದ್ದು, ಇದು 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಈ ಬೆಲೆ ಶ್ರೇಣಿಯ ಫೋನ್‌ಗಳಲ್ಲಿ ಅತ್ಯುತ್ತಮ ಫೋನ್ ಎನಿಸಿಕೊಂಡಿದೆ. ಇನ್ನು ಅಮೆಜಾನ್‌ನಲ್ಲಿ ಈ ಫೋನ್‌ಗೆ 5,000ರೂ.ಗಳ ವಿನಿಮಯ ರಿಯಾಯಿತಿಯೊಂದಿಗೆ 9 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಮ್‌ಐ ಆಫರ್ ಅನ್ನು ಸಹ ನೀಡಲಾಗಿದೆ.
ರೆಡ್ಮಿ ನೋಟ್ 12 5G: ಈ ಫೋನ್ ಖರೀದಿ ಮೇಲೂ ಸಹ ವಿಶೇಷ ಆಫರ್ ಇದ್ದು, ಇದು 120Hz ರಿಫ್ರೆಶ್ ರೇಟ್‌ನೊಂದಿಗೆ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 4 ಜನ್ 1 5G ಬಲದೊಂದಿಗೆ ಕೆಲಸ ಮಾಡುತ್ತದೆ. ಇನ್ನುಳಿದಂತೆ 48MP ಎಐ ಕ್ಯಾಮೆರಾ ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದರಲ್ಲಿದೆ. ಅಮೆಜಾನ್‌ನಲ್ಲಿ ಆಯ್ದ ಬ್ಯಾಂಕ್ ಕೊಡುಗೆಗಳೊಂದಿಗೆ 2,000ರೂ.ಗಳ ವಿನಿಮಯ ರಿಯಾಯಿತಿ ಲಭ್ಯ ಇದೆ.

ರಿಯಲ್‌ಮಿ ನಾರ್ಜೋ 50 5G: ರಿಯಲ್‌ಮಿ ವಿಭಾಗದಲ್ಲಿ ರಿಯಲ್‌ಮಿ ನಾರ್ಜೋ 50 5G ಸ್ಮಾರ್ಟ್‌ಫೋನ್ ಖರೀದಿ ಮೇಲೆ ಹಲವು ಆಫರ್ ನೀಡಲಾಗಿದೆ. ಅಂತೆಯೇ ಈ ಫೋನ್ 6.6 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಶಕ್ತಿಯುತ ಗೇಮಿಂಗ್ ಪ್ರೊಸೆಸರ್ ಬಲ ಪಡೆದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ. ಈ ಫೋನ್ ಖರೀದಿ ಮೇಲೆ ಬ್ಯಾಂಕ್ ಕೊಡುಗೆಗಳು, ಹೆಚ್ಚುವರಿ ವಿನಿಮಯ ಕೊಡುಗೆ ಸೇರಿದಂತೆ ಹಲವು ಆಯ್ಕೆ ಇದ್ದು, 14,249ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.
ಒನ್‌ಪ್ಲಸ್ 10 ಪ್ರೊ 5G: ಈ ಫೋನ್ ನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಕ್ಯಾಮೆರಾ ಫೀಚರ್ಸ್. ಅದರಂತೆ ಇದು 48MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಲೆನ್ಸ್‌ಗಳನ್ನು ಹೊಂದಿದ್ದು, 55,499ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಬ್ಯಾಂಕ್ ಕೊಡುಗೆಗಳು ಲಭ್ಯ ಇದ್ದು, ಇದರ ಜೊತೆಗೆ 10,000ರೂ.ಗಳ ವಿನಿಮಯ ಬೋನಸ್ ಸಹ ಲಭ್ಯ.
ಒನ್‌ಪ್ಲಸ್ 10R 5G: ಒನ್‌ಪ್ಲಸ್‌ನ ಮತ್ತೊಂದು ಫೋನ್ ಆಗಿರುವ ಒನ್‌ಪ್ಲಸ್ 10R 5G ಗೂ ಸಹ ಈ ಸೇಲ್‌ನಲ್ಲಿ ಆಫರ್ ನೀಡಲಾಗಿದೆ. ಈ ಫೋನ್ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಸೆನ್ಸರ್ ಆಯ್ಕೆಯೊಂದಿಗೆ ಆಕರ್ಷಕವಾಗಿದೆ. ಈ ಫೋನ್ ಖರೀದಿ ಮೇಲೆ 3,000ರೂ.ಗಳ ಎಕ್ಸ್‌ಚೇಂಜ್ ಬೋನಸ್ ಜೊತೆಗೆ 6 ತಿಂಗಳವರೆಗೆ ನೋ-ಕಾಸ್ಟ್ ಇಎಮ್‌ಐ ಆಯ್ಕೆ ನೀಡಲಾಗಿದ್ದು, ಈ ಮೂಲಕ ನೀವು 32,999ರೂ.ಗಳಿಗೆ ಇದನ್ನು ಕೊಂಡುಕೊಳ್ಳಬಹುದಾಗಿದೆ.

ಶಿಯೋಮಿ 13 ಪ್ರೊ: ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್‌ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇನ್ನು ಈ ಫೋನ್ 6.73 ಇಂಚಿನ 2K ಬೆಂಬಲದ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಪಡದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 4,820mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಇದರ ಸಾಮಾನ್ಯ ದರ 71,999ರೂ.ಗಳಾಗಿದ್ದು, ಬ್ಯಾಂಕ್ ಕೊಡುಗೆಗಳ ಹಾಗೂ ವಿನಿಮಯ ಆಫರ್‌ನಲ್ಲಿ10,000 ಹೆಚ್ಚುವರಿ ರಿಯಾಯಿತಿ ಪಡೆಯಬಹುದು.


Click it and Unblock the Notifications








