Home
ಸುದ್ದಿಜಾಲ

Amazon Pay: 2,000 ನೋಟನ್ನು ಯಾರೂ ಸ್ವೀಕರಿಸುತ್ತಿಲ್ಲವೇ...ಚಿಂತೆ ಬೇಡ ಇಲ್ಲಿದೆ ಸರಳ ಮಾರ್ಗ!

ಕೇಂದ್ರ ಸರ್ಕಾರ 2,000ರೂ.ಗಳ ನೋಟ್‌ಗಳನ್ನು ವಾಪಸ್‌ ತೆಗೆದುಕೊಳ್ಳುತ್ತಿದ್ದು, ಈ ನಡುವೆ ಜನರು ತಮ್ಮ ಬಳಿ ಇದ್ದ ನೋಟ್‌ಗಳನ್ನು ವಾಪಸ್‌ ನೀಡಲು ಎಲ್ಲಾ ರೀತಿಯ ಕಸರತ್ತನ್ನು ಮಾಡುತ್ತಿದ್ದಾರೆ. ಅದರಲ್ಲೂ ಅದಾಗ್ಯೂ ಕೆಲವು ಅಂಗಡಿಗಳು ಈ ನೋಟ್‌ ಅನ್ನು ಸ್ವೀಕಾರ ಮಾಡುತ್ತಿಲ್ಲ. ಜೊತೆಗೆ ಜನರಿಗೆ ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಸಮಯವೂ ಇಲ್ಲ.

ಹೌದು, ನಿಮ್ಮ ಬಳಿ 2,000ರೂ.ಗಳ ಹಣ ಇದ್ದು, ಯಾವುದೇ ಅಂಗಡಿಯಲ್ಲಿ ಅಥವಾ ಪೆಟ್ರೋಲ್‌ ಬಂಕ್‌ನಲ್ಲಿ ಅದನ್ನು ಸ್ವೀಕಾರ ಮಾಡುತ್ತಿಲ್ಲ ಎಂದು ಬೇಸರ ಆಗಬೇಡಿ. ಯಾಕೆಂದರೆ ಅಮೆಜಾನ್‌ ಪೇ (Amazon Pay) ನಿಮ್ಮ ಬಳಿ ಇರುವ 2,000ರೂ.ಗಳ ಹಣವನ್ನು ಸ್ವೀಕಾರ ಮಾಡುತ್ತದೆ. ಹಾಗಿದ್ರೆ 2,000 ರೂ.ಗಳ ನೋಟನ್ನು ಅಮೆಜಾನ್‌ನಲ್ಲಿ ಹೇಗೆ ಠೇವಣಿ ಮಾಡುವುದು ಎಂಬ ಮಾಹಿಗಾಗಿ ಈ ಲೇಖನ ಓದಿರಿ.

2,000 ನೋಟನ್ನು ಯಾರೂ ಸ್ವೀಕರಿಸುತ್ತಿಲ್ಲವೇ...ಚಿಂತೆ ಬೇಡ ಇಲ್ಲಿದೆ ಸರಳ ಮಾರ್ಗ!

ಅಮೆಜಾನ್‌ ಪೇಈಗ ರೂ.2,000 ನೋಟುಗಳನ್ನು ಸ್ವೀಕರಿಸುತ್ತದೆ: ಇನ್ಮುಂದೆ ಗ್ರಾಹಕರು ತಮ್ಮ ಬಳಿ ಇರುವ 2,000 ನೋಟುಗಳನ್ನು ಅಮೆಜಾನ್‌ ಇಂಡಿಯಾದಲ್ಲಿ ಠೇವಣಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ತಕ್ಷಣವೇ ಅವರ ಅಮೆಜಾನ್‌ ಪೇ ಬ್ಯಾಲೆನ್ಸ್‌ಗೆ ಈ ಹಣ ಕ್ರೆಡಿಟ್ ಆಗುತ್ತದೆ. ಜೊತೆಗೆ ಈ ಹಣವನ್ನು ಅಮೆಜಾನ್‌ಪೇ ನಿಂದ ನಿಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು ಅಥವಾ ಅಮೆಜಾನ್‌ ಸೈಟ್‌ ಮೂಲಕ ಬೇಕಾದದ್ದನ್ನು ಖರೀದಿ ಮಾಡಬಹುದು.

ಇನ್ನು ಆರ್‌ಬಿಐ ಮೇ 2023 ರಲ್ಲಿ 2,000ರೂ.ಗಳ ನೋಟುಗಳ ಮುದ್ರಣವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು ಜೊತೆಗೆ ಎಲ್ಲಾ ಭಾರತೀಯ ನಾಗರಿಕರು ತಮ್ಮ ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಿ ತಮ್ಮ 2,000ರೂ.ಗಳ ನೋಟುಗಳನ್ನು ಠೇವಣಿ ಮಾಡುವಂತೆ ಮಾಹಿತಿ ನೀಡಿದೆ. ಹಾಗೆಯೇ ಈ ನೋಟುಗಳನ್ನು ಠೇವಣಿ ಮಾಡಲು ಸೆಪ್ಟೆಂಬರ್ 30, 2023 ಅನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ತಡ ಯಾಕೆ ಬನ್ನಿ ಹಣವನ್ನು ಹೇಗೆ ಠೇವಣಿ ಮಾಡೋದು ಎಂಬುದನ್ನು ಈ ಸರಳ ಹಂತದ ಮೂಲಕ ತಿಳಿಯೋಣ,

ಹಂತ 1 : ಈ ಸೇವೆ ಪಡೆಯುವ ಮುನ್ನ ನೀವು ಅಮೆಜಾನ್‌ ಪೇ ವಾಲೆಟ್‌ (Amazon Pay Wallet) ಗಾಗಿ ನಿಮ್ಮ ವೀಡಿಯೊ ಕೆವೈಸಿ ಅನ್ನು ನೀವು ಪೂರ್ಣಗೊಳಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಬೇಕಿದೆ. ಈ ರೀತಿ ಮಾಡಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಪಾವತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಾಡಿಲ್ಲವಾದರೆ ಈ ಕ್ಷಣವೇ ಇದನ್ನು ಮಾಡಿ. ಇದಾದ ಬಳಿಕ ಅಮೆಜಾನ್‌ ಸೈಟ್‌ ಮೂಲಕ ನಿಮಗೆ ಅಗತ್ಯ ಇರುವುದನ್ನು ಆರ್ಡರ್‌ ಮಾಡಿ.

ಹಂತ 2 : ಈ ಆರ್ಡರ್‌ ಪ್ರಕ್ರಿಯೆಯಲ್ಲಿ ಪಾವತಿ ವಿಭಾಗದಲ್ಲಿ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಬೇಕಾಗುತ್ತದೆ (COD). ಇದಾದ ಬಳಿಕ ನೀವು ಮಾಡಿರುವ ಆರ್ಡರ್‌ ಅನ್ನು ಕೊಡಲು ನಿಮ್ಮ ಮನೆ ಬಳಿಗೆ ಬರುವ ಡೆಲಿವರಿ ಏಜೆಂಟ್‌ಗೆ ಆ ನೋಟುಗಳನ್ನು ನೀಡಿ. ಉಳಿದ ಹಣವನ್ನು ಅಮೆಜಾನ್‌ ಪೇ ಬ್ಯಾಲೆನ್ಸ್‌ನಲ್ಲಿ ಠೇವಣಿ ಮಾಡಲು ಹೇಳಿ. ಇದಾದ ತಕ್ಷಣವೇ ಠೇವಣಿ ಮಾಡಿದ ಮೊತ್ತವು ನಿಮ್ಮ ಅಮೆಜಾನ್‌ ಪೇ ಬ್ಯಾಲೆನ್ಸ್‌ನಲ್ಲಿ ತ್ವರಿತವಾಗಿ ಕಾಣಿಸಿಕೊಳ್ಳುತ್ತದೆ.

ಹಂತ 3: ಇದಾದ ನಂತರದಲ್ಲಿ ಗ್ರಾಹಕರು ಈ ಬ್ಯಾಲೆನ್ಸ್ ಅನ್ನು ರೀಚಾರ್ಜ್ ಮಾಡಲು, ವಿದ್ಯುತ್ ಬಿಲ್‌ ಪಾವತಿ ಮಾಡಲು ಅಥವಾ ಯಾವುದೇ ಇತರ ಯುಟಿಲಿಟಿ ಬಿಲ್‌ಗಳು ಅಥವಾ ಶಾಪಿಂಗ್ ಮಾಡಲು ಸುಲಭವಾಗಿ ಬಳಕೆ ಮಾಡಬಹುದು. ಅದಾಗ್ಯೂ ನೀವು ಈ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಮುಂದಾದರೆ ಅದಕ್ಕೂ ಅಮೆಜಾನ್‌ನಲ್ಲಿ ಅವಕಾಶ ಇದೆ. ಈ ರೀತಿ ಮಾಡಲು ಈ ಸರಳ ಮಾರ್ಗ ಅನುಸರಿಸಿ.

ಹಂತ 1 : ಅಮೆಜಾನ್‌ ವಾಲೆಟ್‌ನಲ್ಲಿರುವ ಹಣವನ್ನು ನಿಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲು ಮೊದಲು ನಿಮ್ಮ ಅಮೆಜಾನ್‌ ಆಪ್‌ ಓಪನ್‌ ಮಾಡಿ. ಬಳಿಕ ಹ್ಯಾಂಬರ್ಗರ್ ಐಕಾನ್ ಮೇಲೆ ಟ್ಯಾಪ್ ಮಾಡಿ ಅದರಲ್ಲಿ ಅಮೆಜಾನ್‌ ಪೇ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ. ನಂತರದಲ್ಲಿ ಹಣ ಕಳುಹಿಸು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ.

2,000 ನೋಟನ್ನು ಯಾರೂ ಸ್ವೀಕರಿಸುತ್ತಿಲ್ಲವೇ...ಚಿಂತೆ ಬೇಡ ಇಲ್ಲಿದೆ ಸರಳ ಮಾರ್ಗ!

ಹಂತ 2 : ಇದಾದ ನಂತರದಲ್ಲಿ UPI ಐಡಿಗೆ ಅಥವಾ ಬ್ಯಾಂಕ್‌ಗೆ ಎಂಬ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರ ಮೇಲೆ ಟ್ಯಾಪ್‌ ಮಾಡಿ. ಬಳಿಕ ಅಗತ್ಯ ವಿವರಗಳು ಮತ್ತು ಮೊತ್ತವನ್ನು ಎಂಟ್ರಿ ಮಾಡಿ. ಮೇಲೆ ತಿಳಿಸಿದ ಈ ಎಲ್ಲಾ ಹಂತಗಳನ್ನು ಸರಿಯಾಗಿ ಮಾಡಿದ್ದೀರಾ ಎಂದಾದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದರ್ಥ.

Best Mobiles in India

English summary
Don't feel bad that you have Rs 2,000 in cash and it is not being accepted at any shop or petrol station. Because Amazon Pay accepts your Rs 2,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+