'ಅಮೆಜಾನ್ ಅಲೆಕ್ಸಾ'ದಲ್ಲಿ ಬಹುಶಃ ಇಂಥದೊಂದು ಫೀಚರ್‌ ನೀವು ನಿರೀಕ್ಷಿಸಿರಲಿಲ್ಲ!

|

ಪ್ರಸ್ತುತ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ವಾಯಿಸ್‌ ಕಮಾಂಡ್‌ ಹೆಚ್ಚು ಬಳಕೆಯಾಗುತ್ತಿದ್ದು, ಅದರಲ್ಲಿ ಗೂಗಲ್‌ ಅಸಿಸ್ಟಂಟ್‌, ಅಮೆಜಾನ್‌ ಅಲೆಕ್ಸಾ ಮತ್ತು ಆಪಲ್‌ ಸಿರಿ ಹೆಚ್ಚಾಗಿ ಚಾಲ್ತಿಯಲ್ಲಿವೆ. ಆದರೆ ಇವುಗಳಲ್ಲಿ ಅಮೆಜಾನ್‌ ಕಂಪನಿಯು ಅಲೆಕ್ಸಾ ಬೆಂಬಲಿತ ಸ್ಮಾರ್ಟ್‌ ಹೋಮ್‌ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅವುಗಳು ಬಳಕೆದಾರ ಹೇಳಿಕೆಯಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಅವರ ಹೇಳಿಕೆಗಳನ್ನು ದಾಖಲಿಸುತ್ತವೆ.

'ಅಮೆಜಾನ್ ಅಲೆಕ್ಸಾ'ದಲ್ಲಿ ಬಹುಶಃ ಇಂಥದೊಂದು ಫೀಚರ್‌ ನೀವು ನಿರೀಕ್ಷಿಸಿರಲಿಲ್ಲ!

ಇತ್ತೀಚಿಗೆ ಅಮೆಜಾನ್‌ ಅಲೆಕ್ಸಾ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳು ಬಳಕೆದಾರರ ಖಾಸಗಿ ಹೇಳಿಕೆಗಳನ್ನು ಸಹ ರೇಕಾರ್ಡ್‌ ಮಾಡಿಕೊಂಡು ಮಾಹಿತಿಗಳು ಸೋರಿಕೆ ಆಗಿದ್ದು ಬಾರಿ ಸುದ್ದಿ ಆಗಿತ್ತು. ಇಂಥಹ ನ್ಯೂನ್ಯತೆಗಳನ್ನು ಸರಿಪಡಿಸಲು ಇದೀಗ ಕಂಪನಿಯು ತನ್ನ ಅಲೆಕ್ಸಾ ಬೆಂಬಲಿತ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಹೊಸದೊಂದು ಫೀಚರ್‌ ಅನ್ನು ಸೇರಿಸಿದ್ದು, ಈ ಫೀಚರ್‌ ನೆರವಿನಿಂದ ಗ್ರಾಹಕರು ವಾಯಿಸ್‌ ದಾಖಲೆಗಳನ್ನು ಡಿಲೀಟ್‌ ಮಾಡಬಹುದು.

ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!

'ಅಮೆಜಾನ್ ಅಲೆಕ್ಸಾ'ದಲ್ಲಿ ಬಹುಶಃ ಇಂಥದೊಂದು ಫೀಚರ್‌ ನೀವು ನಿರೀಕ್ಷಿಸಿರಲಿಲ್ಲ!

ಹೌದು, ಅಲೆಕ್ಸಾ ಡಿಲೀಟ್‌ ವಾಟ್‌ ಐ ಸೈಡ್‌ ಜಸ್ಟ್‌ ಎನ್ನುವ ಮೂಲಕ ಬಳಕೆದಾರರು ತಮ್ಮ ವಾಯಿಸ್‌ ಡಿಲೀಟ್‌ ಮಾಡಬಹುದಾಗಿದೆ. ಈ ಫೀಚರ್‌ ಬಳಸಿ ಬಳಕೆದಾರರ ಅಲೆಕ್ಸಾದಲ್ಲಿ ದಾಖಲಾದ ಅವರ ಖಾಸಗಿ ವಾಯಿಸ್‌ ರೇಕಾರ್ಡ್‌ ಅನ್ನು ಸಂಪೂರ್ಣ ಡಿಲೀಟ್‌ ಮಾಡಬಹುದಾಗಿದೆ. ಅಲೆಕ್ಸಾ ಆಪ್‌ನಲ್ಲಿ, ಅಲೆಕ್ಸಾ ಪ್ರೈವೆಸಿ ಸೆಟ್ಟಿಂಗ್‌ ಆಯ್ಕೆಯಲ್ಲಿ ಡಿಲೀಟ್‌ ಆಯ್ಕೆ ನೀಡಲಾಗಿದ್ದು, ಇದರ ಪ್ರಯೋಜನ ಪಡೆಯಬಹುದು.

'ಅಮೆಜಾನ್ ಅಲೆಕ್ಸಾ'ದಲ್ಲಿ ಬಹುಶಃ ಇಂಥದೊಂದು ಫೀಚರ್‌ ನೀವು ನಿರೀಕ್ಷಿಸಿರಲಿಲ್ಲ!

ಅಮೆಜಾನ್‌ ಹೊಸ ಡಿಲೀಟ್‌ ಫೀಚರ್‌ 'ಅಲೆಕ್ಸಾ ಡಿಲೀಟ್‌ ವಾಟ್‌ ಐ ಜಸ್ಟ್‌ ಸೇಡ್‌', ಅಥವಾ 'ಅಲೆಕ್ಸಾ ಡಿಲೀಟ್‌ ಎವರಿಥಿಂಗ್‌ ಐ ಸೇಡ್‌ ಟುಡೇ' ಆಯ್ಕೆಗಳನ್ನು ಹೊಂದಿದ್ದು, ವಾಯಿಸ್‌ ಕಮಾಂಡ್‌ ಮೂಲಕ ಬಳಕೆದಾರರು ಪ್ರತಿ ದಿನದ ಸಂವಹನದ ವಾಯಿಸ್‌ ರೇಕಾರ್ಡ್‌ಗಳನ್ನು ಡಿಲೀಟ್‌ ಮಾಡಿಕೊಳ್ಳಬಹುದು ಅಥವಾ ಆ ಕ್ಷಣಕ್ಕೆ ಬೇಕಾದರೇ ತಕ್ಷಣವೇ ಡಿಲೀಟ್‌ ಮಾಡುವ ಆಯ್ಕೆ ಸಹ ನೀಡದೆ.

ಓದಿರಿ : '5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?ಓದಿರಿ : '5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?

ಹಾಗೆಯೇ ಅಮೆಜಾನ್‌ 'ಅಲೆಕ್ಸಾ ಪ್ರೈವೆಸಿ ಹಬ್‌' ಪರಿಚಯಿಸುವ ಲೆಕ್ಕಾಚಾರದಲ್ಲಿದ್ದು, ಇದರಲ್ಲಿ ಅಮೆಜಾನ್ ಇಕೋ ಡಿವೈಸ್‌ಗಳ ಡಿಸೈನ್‌ ಮತ್ತು ಫೀಚರ್‌ ಕಂಟ್ರೋಲ್‌ ಮಾಡಬಹುದ ಆಯ್ಕೆಗಳನ್ನು ಹೊಂದಿರಲಿದೆ. ಒಟ್ಟಾರೇ ಅಲೆಕ್ಸಾ ಆಪ್‌ನಲ್ಲಿ ದಾಖಲಾಗಿರುವ ವಾಯಿಸ್‌ ರೇಕಾರ್ಡ್‌ಗಳನ್ನು ಡಿಲೀಟ್‌ ಮಾಡಲು ನೀಡಿರುವ ಈ ಆಯ್ಕೆ ಅಮೆಜಾನ್‌ ಸ್ಮಾರ್ಟ್‌ ಡಿವೈಸ್‌ ಬಳಕೆದಾರರಿಗೆ ಭಾರಿ ಖುಷಿ ನೀಡಿದೆ.

ಓದಿರಿ : 'ಅಮೆಜಾನ್‌ ಇಕೋ ಶೋ 5' ಲಾಂಚ್‌!.ಭಾರತದಲ್ಲಿ ಬೆಲೆ 8,999ರೂ!ಓದಿರಿ : 'ಅಮೆಜಾನ್‌ ಇಕೋ ಶೋ 5' ಲಾಂಚ್‌!.ಭಾರತದಲ್ಲಿ ಬೆಲೆ 8,999ರೂ!

Best Mobiles in India

English summary
Amazon Alexa users can now say -- Alexa, delete everything I said today – to delete all the corresponding voice recordings. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X