ಸಂಕ್ರಾಂತಿ ಹಿನ್ನೆಲೆ ಅಮೆಜಾನ್‌ನಿಂದ ಬೊಂಬಾಟ್ ಆಫರ್; ಗ್ಯಾಜೆಟ್‌ಗಳಿಗೆ ಭಾರೀ ರಿಯಾಯಿತಿ
ಪ್ರಮುಖ ಇ ಕಾಮರ್ಸ್ ತಾಣವಾದ ಅಮೆಜಾನ್ ಭಾರತೀಯರ ಪ್ರಮುಖ ಹಬ್ಬಗಳಂದು ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡುವುದು ಸಂಪ್ರದಾಯ. ಇದರ ನಡುವೆಯೇ ಈಗ ಪೊಂಗಲ್ ಮತ್ತು ಸಂಕ್ರಾಂತಿ ಶಾಪಿಂಗ್ ಸ್ಟೋರ್ ಅನ್ನು ಅನಾವರಣ ಮಾಡಿದೆ. ಇದರಲ್ಲಿ ಪ್ರಮುಖ ಬ್ರ್ಯಾಂಡ್‌ನ ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಈ ಮೂಲಕ ನೀವು ಕೈಕೆಟಕುವ ದರದಲ್ಲಿ ಬೇಕಾದ ಡಿವೈಸ್‌ಗಳನ್ನು ನಿಮ್ಮ ಮನೆಗೆ ತರಿಸಿಕೊಳ್ಳಬಹುದು.

ಹೌದು, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ತನ್ನ 'ಪೊಂಗಲ್ ಮತ್ತು ಸಂಕ್ರಾಂತಿ ಶಾಪಿಂಗ್ ಸ್ಟೋರ್' ಮಾರಾಟದ ಬಗ್ಗೆ ಘೋಷಣೆ ಮಾಡಲಾಗಿದ್ದು, ಗ್ರಾಹಕರು ಜನವರಿ 18, 2023 ರವರೆಗೆ ಫಿಲಿಪ್ಸ್, ಸ್ಕೈಬ್ಯಾಗ್ಸ್, ಸಫಾರಿ, ಕ್ಯಾಡ್ಬರಿ, ಒನ್‌ಪ್ಲಸ್, ಅಸುಸ್ ಮತ್ತು ಇತರ ಬ್ರ್ಯಾಂಡ್‌ಗಳಿಗೆ ಅತ್ಯಧಿಕ ಆಫರ್ ನೀಡಲಾಗಿದೆ. ಹಾಗಿದ್ರೆ ಯಾವೆಲ್ಲಾ ಪ್ರಮುಖ ಡಿವೈಸ್‌ಗಳಿಗೆ ಈ ಆಫಲ್ ಲಭ್ಯ ಎನ್ನುವ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಫೋನ್
ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G (6GB+128GB) ಸ್ಮಾರ್ಟ್‌ಫೋನ್ ಅನ್ನು ನೀವು ಅಮೆಜಾನ್‌ನಲ್ಲಿ 18,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ಆಕ್ಸಿಜನ್‌ಓಎಸ್ 12.1 ನ ಬೆಂಬಲ ಪಡೆದುಕೊಂಡಿದ್ದು, ಸುಧಾರಿತ ವಿದ್ಯುತ್ ದಕ್ಷತೆ ಮತ್ತು ತ್ವರಿತ ಆಪ್ ಲೋಡಿಂಗ್‌ನಂತಹ ಹೊಸ ಫೀಚರ್ಸ್ ಅನ್ನು ಹೊಂದಿದೆ.

ರೆಡ್ಮಿ ಸ್ಮಾರ್ಟ್‌ಟಿವಿ
32 ಇಂಚಿನ ರೆಡ್ಮಿ ಟಿವಿ ನಿಮಗೆ 13,999 ರೂ. ಗಳ ಆಫರ್‌ನಲ್ಲಿ ಲಭ್ಯವಾಗಲಿದೆ. ಈ ಟಿವಿ ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ ಟಿವಿ 11 ಅನ್ನು ರನ್ ಮಾಡುತ್ತದೆ. ಹಾಗೆಯೇ ಟಿವಿಯು ಡ್ಯುಯಲ್ ಬ್ಯಾಂಡ್ ವೈ ಫೈ ಬೆಂಬಲ ಪಡೆದುಕೊಂಡಿದ್ದು, ಇನ್‌ಬಿಲ್ಟ್ ಕ್ರೋಮಾಕಾಸ್ಟ್ ಆಯ್ಕೆ ಹೊಂದಿದೆ.

ಅಲೆಕ್ಸಾ ವಾಯ್ಸ್ ರಿಮೋಟ್ ಫೈರ್ ಟಿವಿ ಸ್ಟಿಕ್ ಲೈಟ್
ಅಲೆಕ್ಸಾ ವಾಯ್ಸ್ ರಿಮೋಟ್ ಅನ್ನು ನೀವು 2,999 ರೂ. ಗಳ ಆಫರ್ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಟಿಕ್ ಲೈಟ್ ಮೂಲಕ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ ಹಾಟ್‌ಸ್ಟಾರ್, ಝೀ5, ವೂಟ್ ಸೆಲೆಕ್ಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಿಗೆ ಎಂಟ್ರಿ ನೀಡುತ್ತದೆ.

ಅಸುಸ್‌ವಿವೋಬುಕ್‌ಪ್ರೊ 16
ಅಸುಸ್ ವಿವೋಬುಕ್‌ಪ್ರೊ 16 ಅನ್ನು 99,990 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i9-11900H 11 ನೇ ಜನ್ ಪ್ರೊಸೆಸರ್ ಅನ್ನು ಹೊಂದಿದ್ದು, ವೃತ್ತಿಪರರಿಗೆ ಅಗತ್ಯವಾದ ಡಿವೈಸ್ ಆಗಿದೆ.

ಬೌಲ್ಟ್ ಡೈವ್+ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್
ಬೌಲ್ಟ್ ಡೈವ್+ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್ ಅನ್ನು 1,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್ ಬ್ಲೂಟೂತ್ ಕಾಲ್ ಫೀಚರ್ಸ್ ಆಯ್ಕೆ ಹೊಂದಿದ್ದು, 1.85-ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದೆ. ಜೊತೆಗೆ 500 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹೊಂದಿದ್ದು, 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳು ಈ ವಾಚ್‌ನಲ್ಲಿದೆ.

ಕಿಂಡಲ್ ಪೇಪರ್ ವೈಟ್ (8GB)
ಕಿಂಡಲ್ ಪೇಪರ್ ವೈಟ್ (8GB) ಅನ್ನು ನೀವು 13,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ 6.8 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 10 ವಾರಗಳವರೆಗೆ ಬ್ಯಾಟರಿ ಬ್ಯಾಕಪ್ ಹೊಂದಿದೆ. ನೇರ ಸೂರ್ಯನ ಬೆಳಕಿನಲ್ಲೂ ಸಹ ನಿಜವಾದ ಕಾಗದವನ್ನು ಹಿಡಿದುಕೊಂಡು ಓದುವ ಅನುಭವ ಸಿಗಲಿದೆ.


Click it and Unblock the Notifications








