Home
ಸುದ್ದಿಜಾಲ

ಆಫರ್‌ನಲ್ಲಿ ಹೊಸ ಐಫೋನ್‌ ಖರೀದಿಸಲು ಸದ್ಯ ಅಮೆಜಾನ್‌ನಲ್ಲಿ ಬೆಸ್ಟ್‌ ಟೈಮ್‌!

ಇ-ಕಾಮರ್ಸ್‌ ವಲಯದ ದೈತ್ಯ ಎಂದು ಗುರುತಿಸಿಕೊಂಡಿರುವ ಅಮೆಜಾನ್ ತಾಣವು ಸದಾ ಒಂದಿಲ್ಲೊಂದು ಸೇಲ್‌ ಮೂಲಕ ಆಫರ್ ನೀಡುತ್ತಲೆ ಸಾಗಿದೆ. ಅದರಲ್ಲಿಯೂ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ವಿಶೇಷ ಆಫರ್‌ ನೀಡುವುದರಲ್ಲಿ ಸದಾ ಮುಂದೆ. ಪ್ರಮುಖ ಸೇಲ್‌ ಮೇಳಗಳು ಹಾಗೂ ಕೆಲವು ಸ್ಪೆಷಲ್‌ ದಿನಗಳಂದು ನೂತನ ಸ್ಮಾರ್ಟ್‌ಫೋನ್‌ಗಳಿಗೂ ಸಹ ವಿಶೇಷ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತದೆ. ಅಮೆಜಾನ್‌ ಪ್ಲಾಟ್‌ಫಾರ್ಮ್‌ ನಲ್ಲಿ ಈಗ ಅಂತಹ ಸಮಯ ಬಂದಿದ್ದು, ಜನಪ್ರಿಯ ಐಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಕೊಡುಗೆ ಘೋಷಿಸಿದೆ.

ಡಿಸ್ಕೌಂಟ್

ಹೌದು, ಅಮೆಜಾನ್‌ ಇ-ಕಾಮರ್ಸ್‌ ತಾಣದಲ್ಲಿ ಇದೀಗ 'ಆಪಲ್‌ ಡೇಸ್ ಸೇಲ್' ಮೇಳವು ಸದ್ಯ ಚಾಲ್ತಿಯಲ್ಲಿದೆ. ಈ ಸೇಲ್ ಮೇಳವು ಇದೇ ಮಾರ್ಚ್ 17ರಂದು ಮುಕ್ತಾಯವಾಗಲಿದ್ದು, ಈ ವೇಳೆ ಆಪಲ್‌ ಐಫೋನ್‌ಗಳಿಗೆ ಭಾರಿ ರಿಯಾಯಿತಿ ಇದೆ. ಮುಖ್ಯವಾಗಿ ಐಫೋನ್ 11 ಸರಣಿಯ ಫೋನ್‌ಗಳಿಗೆ ಹಾಗೂ ಐಫೋನ್ 12 ಸರಣಿಯ ಐಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್ ಲಭ್ಯ ಇದೆ. ಸಾಮಾನ್ಯ ರಿಯಾಯಿತಿಯ ಹೊರತಾಗಿ, ಅಮೆಜಾನ್ ಎಚ್‌ಡಿಎಫ್‌ಸಿ ಕಾರ್ಡ್ ಹೊಂದಿರುವವರಿಗೆ ಇನ್ನಷ್ಟು ಸಿಹಿಗೊಳಿಸಲು ಬ್ಯಾಂಕ್ ಕೊಡುಗೆಗಳನ್ನು ಸಹ ಒದಗಿಸುತ್ತಿದೆ.

ಖರೀದಿದಾರ

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಗ್ರಾಹಕರು 6000 ರೂ.ವರೆಗೆ ತ್ವರಿತ ರಿಯಾಯಿತಿ ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಐಪ್ಯಾಡ್ ಖರೀದಿಸಲು ಬಯಸುವ ಗ್ರಾಹಕರಿಗೆ 3000ರೂ.ರಿಯಾಯಿತಿ ಸಿಗಲಿದೆ. ಹಾಗೆಯೇ ಖರೀದಿದಾರರು ಎಚ್‌ಡಿಎಫ್‌ಸಿ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳನ್ನು ಸಹ ಆರಿಸಿಕೊಳ್ಳಬಹುದು. ಹಾಗಾದರೇ ಆಪಲ್ ಸೇಲ್ ಮೇಳದಲ್ಲಿ ಯಾವೆಲ್ಲಾ ಐಫೋನ್‌ಗಳಿಗೆ ಡಿಸ್ಕೌಂಟ್ ಇದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಐಫೋನ್ 12 ಮಿನಿ ಫೋನ್‌ಗೆ ಆಫರ್

ಐಫೋನ್ 12 ಮಿನಿ ಫೋನ್‌ಗೆ ಆಫರ್

ಐಫೋನ್ 12 ಮಿನಿ ಫೋನ್ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಆಫರ್‌ನಲ್ಲಿ ಐಫೋನ್ 12 ಮಿನಿ ಫೋನಿನ ಬೆಲೆಯು 67,100ರೂ. ಆಗಿದೆ.

ಐಫೋನ್‌ 11 ಪ್ರೊ ಫೋನ್‌ಗೆ ಆಫರ್

ಐಫೋನ್‌ 11 ಪ್ರೊ ಫೋನ್‌ಗೆ ಆಫರ್

ಆಪಲ್‌ ಐಫೋನ್‌ 11 ಪ್ರೊ ಸ್ಮಾರ್ಟ್‌ಫೋನ್ 5.8 ಇಂಚಿನ ಸೂಪರ್‌ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಮೂರು ಕ್ಯಾಮೆರಾಗಳು ಸಹ 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. 12 ಎಂಪಿ ಅಲ್ಟ್ರಾ-ವೈಡ್, ವೈಡ್ ಮತ್ತು ಟೆಲಿಫೋಟೋ ಕ್ಯಾಮೆರಾಗಳನ್ನು ಹೊಂದಿರುವ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ; ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಮತ್ತು 60 ಕೆಪಿಎಸ್ ವರೆಗೆ 4 ಕೆ ವಿಡಿಯೋ. ಮುಂಭಾಗದಲ್ಲಿ, ಪೋರ್ಟ್ರೇಟ್ ಮೋಡ್, 4 ಕೆ ವಿಡಿಯೋ, ಮತ್ತು ಸ್ಲೊ-ಮೊ ಹೊಂದಿರುವ 12 ಎಂಪಿ ಟ್ರೂಡೆಪ್ತ್ ಕ್ಯಾಮೆರಾ ಇದೆ. ಹಾಗೆಯೇ 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಆಪಲ್‌ ಡೇಸ್ ಸೇಲ್‌ನಲ್ಲಿ ಈ ಫೋನಿನ (64GB) ಬೆಲೆಯು 79,900ರೂ. ಆಗಿದೆ.

Best Mobiles in India

English summary
Apple is offering discounts on the latest iPhone 12 series along with the top variants of the iPhone 11 series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+