Home
ಸುದ್ದಿಜಾಲ

Amazon ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2023: ಈ ಸ್ಪೀಕರ್‌ ಬೆಲೆ ಕೇವಲ ಇಷ್ಟೇ!

ಇನ್ನೇನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence day celebration) ದೇಶಾದ್ಯಂತ ಅದ್ಧೂರಿಯಾಗಿ ನಡೆಯಲಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು(E-commerce site) ಸ್ಮಾರ್ಟ್ ಡಿವೈಸ್‌ಗಳ ಮೇಲೆ ಭಾರಿ ಡಿಸ್ಕೌಂಟ್‌ (Discount) ಅನ್ನು ಘೋಷಣೆ ಮಾಡಿದ್ದು, ಈ ಮೂಲಕ ದುಬಾರಿ ಬೆಲೆಯ ಸ್ಮಾರ್ಟ್‌ ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅದರಂತೆ ಈ ಅತ್ಯುತ್ತಮ ಸ್ಪೀಕರ್‌ ಸಹ ಕಡಿಮೆ ಬೆಲೆಗೆ ಲಭ್ಯ ಇರಲಿದೆ.

ಹೌದು, ಈಗಾಗಲೇ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2023 (Amazon Great Freedom Festival 2023) ಮೂಲಕ ಗ್ರಾಹಕರು ಅಗ್ಗದ ದರದಲ್ಲಿ ಅತ್ಯುತ್ತಮ ಡಿವೈಸ್‌ಗಳನ್ನು ಖರೀದಿ ಮಾಡಲು ಸಕಾಲ. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆ ವೇಳೆ ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಲು ಈ ಮೂಲಕ ಸಂಭ್ರಮ ಪಡಲು ಅಮೆಜಾನ್‌ (Amazon) ಅವಕಾಶ ಮಾಡಿಕೊಟ್ಟಿದೆ. ಅಂದರೆ ಅಮೆಜಾನ್ ಬೇಸಿಕ್ಸ್ ಮಲ್ಟಿಮೀಡಿಯಾ ಹೈಲಿ ಪೋರ್ಟಬಲ್ ಸ್ಪೀಕರ್‌ ಮೇಲೆ ಬೃಹತ್‌ ರಿಯಾಯಿತಿ ನೀಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ವಿವರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Amazon ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2023: ಈ ಸ್ಪೀಕರ್‌ ಬೆಲೆ ಕೇವಲ ಇಷ್ಟೇ!

ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2023: ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ನಡೆಯುತ್ತಿದ್ದು, ಈ ಸೇಲ್‌ನಲ್ಲಿ ನೀವು ವ್ಯಾಪಕ ಶ್ರೇಣಿಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದು. ಎಲೆಕ್ಟ್ರಾನಿಕ್ ಉತ್ಪನ್ನಗಳ ಹೊರತಾಗಿ ಮನೆ ಮತ್ತು ಅಡಿಗೆ ಉಪಕರಣಗಳ ಮೇಲೂ ಸಹ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಅದರಂತೆ ಊ ಸ್ಪೀಕರ್‌ಗೂ ರಿಯಾಯಿತಿ ನೀಡಲಾಗಿದೆ.

ಅಮೆಜಾನ್ ಬೇಸಿಕ್ಸ್ ಪೋರ್ಟಬಲ್ ಮಲ್ಟಿಮೀಡಿಯಾ ಸ್ಪೀಕರ್ (Amazon Basics Portable Multimedia Speaker) ಡೆಸ್ಕ್‌ಟಾಪ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಸೂಕ್ತವಾಗಿದೆ. ಈ ವೇಳೆ ನೀವು ಉತ್ತಮ ಸಂಗೀತದ ಆನಂದ ಪಡೆಯಲು ಪೋರ್ಟಬಲ್ ಸ್ಪೀಕರ್‌ಗಳನ್ನು ಹುಡುಕುತ್ತಿದ್ದರೆ ಇದು ಬೆಸ್ಟ್‌ ಎನ್ನಬಹುದು. ಈ ಡಿವೈಸ್‌ನಲ್ಲಿ ಯಾವುದೇ ನ್ಯೂನತೆಗಳಿಲ್ಲದೆ ಸ್ಪಷ್ಟವಾದ ಧ್ವನಿಯನ್ನು ಆಲಿಸಬಹುದಾಗಿದ್ದು, ಹಲವು ಸಮಯಗಳಲ್ಲಿ ಇದನ್ನು ಬಳಕೆ ಮಾಡಬಹುದು. ಅಂದರೆ ಮನೆಯಲ್ಲಿ ಏನಾದರೂ ಸಮಾರಂಭ ಇದ್ದಾಗ ಮೋಜು ಮಾಡಲು ಇದು ಸಹಾಯಕ.

ಉಳಿದಂತೆ ಈ ಸ್ಪೀಕರ್‌ ಸ್ಫಟಿಕ-ಸ್ಪಷ್ಟ ಧ್ವನಿ ಗುಣಮಟ್ಟ ಮತ್ತು ಡೀಪ್‌ ಬಾಸ್ ಆಯ್ಕೆ ಹೊಂದಿದ್ದು, ಇದರ ಸೌಂಡ್‌ಗೆ ನೀವು ಹೆಜ್ಜೆ ಹಾಕದೆ ಇರಲಾರಿರಿ. ಅಷ್ಟು ಮಾತ್ರವಲ್ಲದೆ ಇವುಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಇನ್ನು ಅಮೆಜಾನ್ ಈ ಅಗ್ಗದ ಬೆಲೆಯ ಡಿವೈಸ್‌ಗೆ ಖರೀದಿಸಿದ ದಿನಾಂಕದಿಂದ ಒಂದು ವರ್ಷದ ವಾರಂಟಿಯನ್ನು ಸಹ ನೀಡುತ್ತಿದೆ.

ಉಳಿದಂತೆ ಈ ಸ್ಪೀಕರ್‌ಗಳ ಅಗಲ 15 ಸೆಂಟಿಮೀಟರ್‌ ಇದ್ದು, ಎತ್ತರ 20 ಸೆಂಟಿಮೀಟರ್‌ಗಳಿದೆ. ಜೊತೆಗೆ ಇವುಗಳ ಆಯಾಮ ‎20 x 15 x 20 ಸೆಂಟಿಮೀಟರ್‌ ಆಗಿದೆ. ಈ ಸೈಜ್‌ನೊಂದಿಗೆ ಇವು ಕೇವಲ 350 ಗ್ರಾಂ ತೂಕ ಹೊಂದಿವೆ. ಉಳಿದಂತೆ ಕನೆಕ್ಟಿವಿಟಿಗಾಗಿ ಬ್ಲೂಟೂತ್ ಆಯ್ಕೆ ಪಡೆದಿದ್ದು, ಇದು ರೀಚಾರ್ಜಬಲ್ ಅಲ್ಲ ಎಂಬುದು ನಿಮಗೆ ತಿಳಿದಿರಲಿ.

Amazon ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2023: ಈ ಸ್ಪೀಕರ್‌ ಬೆಲೆ ಕೇವಲ ಇಷ್ಟೇ!

ಅಮೆಜಾನ್ ಬೇಸಿಕ್ಸ್ ಮಲ್ಟಿಮೀಡಿಯಾ ಸ್ಪೀಕರ್‌ ಬೆಲೆ ಹಾಗೂ ಲಭ್ಯತೆ: ಈ ಸ್ಪೀಕರ್‌ನ ಸಾಮಾನ್ಯ ದರ 1,299ರೂ.ಗಳಾಗಿದೆ. ಆದರೆ ನೀವು ಈ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ 69% ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಕೇವಲ 399ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇಷ್ಟು ಆತ್ರವಲ್ಲದೆ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಇಚ್ಚಿಸಿದರೆ ನೀವು ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು.

Best Mobiles in India

English summary
Amazon Great Freedom Festival 2023 is the time for consumers to buy the best devices at cheap prices. Especially Amazon Basics Portable Multimedia Speaker has huge discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+