1 ಟ್ರಿಲಿಯನ್ ಮೌಲ್ಯದ ಆಪಲ್ ಅನ್ನು ಹಿಂದಿಕ್ಕಲಿದೆಯಂತೆ ಈ ಕಂಪೆನಿ!!
ಇತ್ತೀಚಿಗಷ್ಟೆ ವಿಶ್ವದ ಮೊದಲ ಒಂದು ಟ್ರಿಲಿಯನ್ ಮುಖಬೆಲೆಯ ಟೆಕ್ ಕಂಪನಿ ಎಂಬ ಹೆಗ್ಗಳಿಕೆ ಪಡೆದ ಆಪಲ್ ಕಂಪನಿಯ ಖುಷಿ ಮತ್ತಷ್ಟು ದಿನಗಳು ಉಳೀಯುವ ಸಾಧ್ಯತೆಗಳು ಕ್ಷೀಣಿಸುತ್ತಿದೆ. ಆಪಲ್ ಕಂಪೆನಿಯ ಸಾಧನೆ ಬೆನ್ನಲ್ಲೇ ಇ ಕಾಮರ್ಸ್ ದಿಗ್ಗಜ ಅಮೆಜಾನ್ ಇದೀಗ ಒಂದು ಟ್ರಿಲಿಯನ್ ತಲುಪುವ ಮತ್ತೊಂದು ಕಂಪನಿಯಾಗಲಿದೆ ಎಂದು ವರದಿಗಳು ಹೇಳುತ್ತಿವೆ.
ಹೌದು, ಕಳೆದ ಒಂದು ವರ್ಷದಲ್ಲಿ ಅಮೆಜಾನ್ ಶೇರುಗಳ ಬೆಲೆ ದಾಖಲೆ ಓಟ ಕಂಡಿದ್ದು, ಭವಿಷ್ಯದಲ್ಲಿಯೂ ಅಮೇಜಾನ್ ಐಎನ್ಸಿ ಸಂಸ್ಥೆಯ ಷೇರುಗಳ ಬೆಲೆ ಗಗನಕ್ಕೇರಲಿವೆ ಎಂದು ವರದಿಗಳು ಹೇಳಿವೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಸಂಸ್ಥೆಯ ಷೇರುಗಳ ಮಾರುಕಟ್ಟೆ ಬೆಲೆ 1,998.10 ತಲುಪಿದ್ದು, ಈಗಾಲೇ 971.96 ಬಿಲಿಯನ್ ಡಾಲಲ್ ಮುಖಬೆಲೆ ಹೊಂದಿದೆ.

ಬಂಡವಾಳ ಹೂಡಿಕೆ ಸಂಸ್ಥೆಯಾದ ಮೋರ್ಗನ್ ಸ್ಟಾನ್ಲಿ ಹೇಳಿರುವಂತೆ, ಕೆಲವೇ ದಿನಗಳಲ್ಲಿ ಅಮೆಜಾನ್ ಕೂಡಾ ಒಂದು ಟ್ರಿಲಿಯನ್ ಮೌಲ್ಯ ಹೊಂದಿರುವ ಎರಡನೇ ಸಂಸ್ಥೆ ಎಂದು ಅಮೆಜಾನ್ ಗುರುತಿಸಿಕೊಳ್ಳಲಿದೆ. ಅಮೆಜಾನ್ ಅತ್ಯಂತ ವೇಗದಲ್ಲಿ ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತದ್ದು, ಧನಾತ್ಮಕ ರೂಪದಲ್ಲಿ ಅಮೆಜಾನ್ ಸಾಗುತ್ತಿದೆ ಎಂದು ಸ್ಟಾನ್ಲಿ ತನ್ನ ಶೇರುದಾರರಿಗೆ ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಮೆಜಾನ್ 25 ಬಿಲಿಯನ್ ಡಾಲರ್ ಲಾಭದಲ್ಲಿದ್ದು, 2020ರ ಒಳಗೆ ಅಮೆಜಾನ್ ಸಂಸ್ಥೆಯು 45 ಬಿಲಿಯನ್ ಡಾಲರ್ ಲಾಭ ಗಳಿಸುವ ಸೂಚನೆಯಿದೆ. ಒಂದು ವೇಳೆ ಬಂಡವಾಳ ಹೂಡಿಕೆ ಸಂಸ್ಥೆ ಮಾರ್ಗನ್ ಸ್ಟಾನ್ಲಿ ಶೇರಿನ ಊಹೆ ನಿಜವಾದರೆ ಅಮೆಜಾನ್ ತನ್ನ ಮೌಲ್ಯವನ್ನು 1.2 ಟ್ರಿಲಿಯನ್ ಡಾಲರ್ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

1976ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ಆಪಲ್ ಸಂಸ್ಥೆ 1997ರಲ್ಲಿ ದಿವಾಳಿ ಹಂತಕ್ಕೆ ತಲುಪಿತ್ತು. ಆದರೆ, 2011ರ ವೇಳೆಗೆ ಅಮೆರಿಕದಲ್ಲಿ ಅತಿದೊಡ್ಡ ಸಂಸ್ಥೆ ಎನಿಸಿಕೊಂಡಿದ್ದ ಆಪಲ್ ಈ ತಿಂಗಳ ಆರಂಭದಲ್ಲಿ 1.07 ಟ್ರಿಲಿಯನ್ ಡಾಲರ್ ಕಂಪೆನಿಯಾಗಿ ಹೊರಹೊಮ್ಮಿತ್ತು.ಹಾಗಾಗಿ,ಇತಿಹಾಸದಲ್ಲೇ 1 ಟ್ರಿಲಿಯನ್ ಮೌಲ್ಯ ಹೊಂದಿದ ಟೆಕ್ ಸಂಸ್ಥೆ ಎಂದು ಆಪಲ್ ಗುರುತಿಸಿಕೊಂಡಿತು.
ಓದಿರಿ: 'ಆಪರ್ಚುನಿಟಿ ರೋವರ್' ಸಂಪರ್ಕ ಕಳೆದುಕೊಂಡ ನಾಸಾ!..ಮಂಗಳನ ನೌಕೆ ಅಂತ್ಯ?


Click it and Unblock the Notifications








