'ಆಪರ್ಚುನಿಟಿ ರೋವರ್' ಸಂಪರ್ಕ ಕಳೆದುಕೊಂಡ ನಾಸಾ!..ಮಂಗಳನ ನೌಕೆ ಅಂತ್ಯ?

|

2004 ಜನವರಿ 25 ರಂದು ಮಂಗಳನ ಅಂಗಳಕ್ಕೆ ಇಳಿದಿದ್ದ ನಾಸಾದ ಆಪರ್ಚುನಿಟಿ ರೋವರ್ ಅಲ್ಲಿನ ಭಾರೀ ಚಂಡಮಾರುತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. 15 ವರ್ಷಗಳಿಂದ ಮಂಗಳದ ನೆಲದಲ್ಲಿ ಓಡಾಡುತ್ತಾ ಗ್ರಹದ ಸಂಶೋಧನೆ ನಡೆಸಿ ನಾಸಾಕ್ಕೆ ಮಾಹಿತಿ ರವಾನಿಸುತ್ತಿದ್ದ ರೋವರ್ ಕೆಟ್ಟು ಹೋಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

2018ನೇ ವರ್ಷದ ಜೂ.10ರ ಅನಂತರ ಆಪರ್ಚುನಿಟಿ ರೋವರ್ ನಾಸಾದೊಂದಿಗೆ ಸಂಪರ್ಕ ಸಾಧಿಸಿಲ್ಲ ಎಂದು ಹೇಳಲಾಗಿದ್ದು, ಧೂಳಿನ ಚಂಡಮಾರುತದಿಂದಾಗಿ ಹಾಳಾಗಿದೆ ಎನ್ನಲಾಗಿದೆ. ಸೌರ ಫ‌ಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿ ಸುತ್ತಿರಬಹುದು, ಇದರಿಂದಾಗಿ ರೋವರ್ ಹಾನಿಗೀಡಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

'ಆಪರ್ಚುನಿಟಿ ರೋವರ್' ಸಂಪರ್ಕ ಕಳೆದುಕೊಂಡ ನಾಸಾ!..ಮಂಗಳನ ನೌಕೆ ಅಂತ್ಯ?

ಮಂಗಳ,ಲ್ಲಿನ ತಾಪಮಾನ -100 ಡಿಗ್ರಿ ಫ್ಯಾ. ತನಕ ಹೋಗುತ್ತದೆ. ಇಂತಹ ಕಡಿಮೆ ತಾಪಮಾನದಲ್ಲಿ ಎಲೆಕ್ಟ್ರಿಕ್ ಸರ್ಕ್ನೂಟ್‌ನಲ್ಲಿನ ಲೋಹಗಳು ಸಂಕುಚಿತಗೊಳ್ಳುತ್ತವೆ. ಆದರೆ, ಚಂಡ ಮಾರುತದಿಂದಾಗಿ ರೋವರ್‌ನ ಸೌರ ಫ‌ಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿಸುತ್ತಿರಬಹುದು ಎಂದು ನಾಸಾದ ವಿಜ್ಞಾನಿಗಳು ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಮಂಗಳ ಗ್ರಹದಲ್ಲಿ ಕಳೆದ ಎರಡು ತಿಂಗಳ ಹಿಂದೆ ಬೀಸಿದ ಧೂಳಿನ ಚಂಡಮಾರುತದಿಂದಾಗಿ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿರಬಹುದು. ಮಂಗಳ ಗ್ರಹದಲ್ಲಿ ಎರಡು ವರ್ಷಗಳಿಗೊಮ್ಮೆ ಧೂಳಿನ ಚಂಡಮಾರುತ ಸಾಮಾನ್ಯವಾಗಿರುತ್ತದೆ. ಆದರೆ, ಈ ಬಾರಿ ಹಿಂದೆಂದೂ ಆಗಿರದಷ್ಟು ತೀವ್ರ ಸ್ವರೂಪದಲ್ಲಿತ್ತು ಎಂದು ವಿಜ್ಞಾನಿ ಸ್ಟೀವ್‌ ಸ್ಕ್ವೇರೆಸ್ ಅವರು ಹೇಳಿದ್ದಾರೆ.

'ಆಪರ್ಚುನಿಟಿ ರೋವರ್' ಸಂಪರ್ಕ ಕಳೆದುಕೊಂಡ ನಾಸಾ!..ಮಂಗಳನ ನೌಕೆ ಅಂತ್ಯ?

2003ರ ಜೂನ್‌ನಲ್ಲಿ ಗಾಲ್ಫ್ ಕಾರ್ಟ್‌ ಗಾತ್ರದ ರೋಬೋ ಆಪರ್ಚುನಿಟಿಯನ್ನು ನಾಸಾ ಉಡಾಯಿಸಿತ್ತು. 2004ರ ಜನವರಿಯಲ್ಲಿ ಅದು ಮಂಗಳದಲ್ಲಿ ಇಳಿದಿತ್ತು. ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಮಂಗಳ ಗ್ರಹದ ಮೇಲ್ಮೆ„ನಲ್ಲಿ ಓಡಾಡುತ್ತಿದ್ದ ರೋವರ್‌ನೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಕೈಲಾದಷ್ಟು ಪ್ರಯತ್ನ ಮಾಡುತ್ತಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಓದಿರಿ: ಭಾರತದಲ್ಲಿ 'ಇ-ಕಾಮರ್ಸ್' ಸಂಸ್ಥೆಗಳ ಹೈಟೆಕ್ ವಂಚನೆ ಬೆಳಕಿಗೆ!..ದಂಡ ವಿಧಿಸಿದ ಸರ್ಕಾರ!!

Best Mobiles in India

English summary
Dust that ‘killed’ Nasa Opportunity Rover came from mysterious alien volcanoes, scientists discover. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X