Subscribe to Gizbot

ಅಮೆಜಾನ್‌ಗೆ ಟೋಪಿ ಹಾಕಿದ ಸಿಬ್ಬಂದಿ: ಶೋಕಿಗಾಗಿ ಮಾಡಿದ್ದೇನು..?

Written By:

ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬೆಳಯುತ್ತಿರುವ ಅಮೆರಿಕಾ ಮೂಲದ ಇ-ಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ ಹೆಸರಿಗೆ ಮಸಿ ಬಳಿಯುತ್ತಿದ್ದಹ ಕಂಪನಿ ಸಿಬ್ಬಂದಿಗಳ ತಂಡವೊಂದನ್ನು ರಾಜ್ಯದಲ್ಲಿ ಪೊಲೀಸರು ಬಂದಿಸಿದ್ದಾರೆ. ಅಮೆಜಾನ್ ಹೆಸರಿನಲ್ಲಿ ಗ್ರಾಹಕರಿಗೆ ಮತ್ತು ಕಂಪನಿಗೆ ವಂಚನೆ ಮಾಡುತ್ತಿದ್ದ ಐದು ಮಂದಿ ತಂಡವನ್ನು ಪೊಲೀಸರು ಸಾಕ್ಷಿ ಸಮೇತ ಬಂದಿದ್ದಾರೆ.

ಅಮೆಜಾನ್‌ಗೆ ಟೋಪಿ ಹಾಕಿದ ಸಿಬ್ಬಂದಿ: ಶೋಕಿಗಾಗಿ ಮಾಡಿದ್ದೇನು..?

ಆನ್‌ಲೈನಿನಲ್ಲಿ ಆರ್ಡರ್ ಮಾಡಿದ ಸಂದರ್ಭದಲ್ಲಿ ಮೊಬೈಲ್ ಬದಲಿಗೆ ಇಟ್ಟಿಗೆ ಬಂತು, ಸೋಪು ಬಂತು ಎನ್ನುವ ಘಟನೆಗಳನ್ನು ನಾವು ಮಾಧ್ಯಮಗಳಲ್ಲಿ ನೋಡಿರಬಹುದು. ಇದಕ್ಕೆ ಕಾರಣವಾಗಿದ್ದ ಅಮೆಜಾನ್ ಸಿಬ್ಬಂದಿಗಳು ಇಂದು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗ್ರಾಹಕರಿಗೆ ತಲುಪಿಸಬೇಕಾದ ವಸ್ತುಗಳನ್ನು ತಾವೇ ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಣವನ್ನು ಕಟ್ಟಿಲ್ಲ:

ಹಣವನ್ನು ಕಟ್ಟಿಲ್ಲ:

ಅಮೆಜಾನ್‌ ಕಂಪನಿಗೆ ಸೇರಿದ್ದ ಲಕ್ಷಾಂತರ ರೂ. ವಸ್ತುಗಳನ್ನು ಕಂಪನಿಯ ಸಿಬ್ಬಂದಿ ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಇದಲ್ಲದೇ ಅಮೆಜಾನ್‌ಗೆ ತಲುಪಿಸಬೇಕಾದ ಹಣವನ್ನು ನೀಡದೆ ವಂಚನೆ ಮಾಡಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಚಿಕ್ಕಮಗಳೂರಿನಲ್ಲಿ ಘಟನೆ:

ಚಿಕ್ಕಮಗಳೂರಿನಲ್ಲಿ ಘಟನೆ:

ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರಿನಲ್ಲಿ ಅಮೆಜಾನ್ ವಸ್ತುಗಳ ಸರಿಯಾಗಿ ಡೆಲಿವರಿಯಾಗದ ಮತ್ತು ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿರುವ ಪ್ರಕರಣಗಳು ಹೆಚ್ಚಾದ ಕಾರಣ ಅಮೆಜಾನ್ ಪೊಲೀಸ್ ದೂರು ನೀಡಿದೆ ಎನ್ನಲಾಗಿದೆ. ಪ್ರಕರಣದ ದಾಖಲಿಸಿಕೊಂಡ ಸಿಬ್ಬಂದಿ ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ತಮ್ಮ ಸ್ವಂತಕ್ಕೆ ಬಳಕೆ:

ತಮ್ಮ ಸ್ವಂತಕ್ಕೆ ಬಳಕೆ:

ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಅಮೆಜಾನ್ ನಿಂದ ತರಿಸಿಕೊಂಡು ಗ್ರಾಹಕರಿಗೆ ಶಾಕ್ ನೀಡಿ. ಆ ವಸ್ತುಗಳನ್ನು ಅಮೆಜಾನ್ ಸಿಬ್ಬಂದಿ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಕ್ಯಾಷ್ ಆನ್ ಡಿಲಿವರಿ ಆಯ್ಕೆಯಲ್ಲಿ ಬಂದ ಹಣವನ್ನು ಅಮೆಜಾನ್‌ಗೆ ಇದುವರೆಗೂ ಪಾವತಿಸದ ಸಿಬ್ಬಂದ ಮೋಜು ಮಸ್ತಿ ಮಾಡುತ್ತಿದ್ದರು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಕಾಂಪ್ಯಾಕ್ ಪವರ್ ಹೌಸ್ ಸ್ಮಾರ್ಟ್‌ಫೋನ್‌ ಯಾವುದು..?

English summary
amazon employee arrested in karnataka. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot