Home
ಸುದ್ದಿಜಾಲ

ಡಿಸ್ಕೌಂಟ್‌ ಬೆಲೆಯಲ್ಲಿ ಫೋನ್‌ ಖರೀದಿಸಲು ಅಮೆಜಾನ್‌ನಲ್ಲಿ ಮತ್ತೊಂದು ಅವಕಾಶ!

ಹಬ್ಬದ ಪ್ರಯುಕ್ತ ಅಮೆಜಾನ್ ಇ-ಕಾಮರ್ಸ್‌ ತಾಣ ಇತ್ತೀಚಿಗೆ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳವನ್ನು ಆಯೋಜಿಸಿತ್ತು. ಈ ಮೇಳದಲ್ಲಿ ಗ್ಯಾಜೆಟ್‌ ಉತ್ಪನ್ನಗಳಿಗೆ ಅತ್ಯುತ್ತಮ ಆಫರ್‌ಗಳನ್ನು, ಡಿಸ್ಕೌಂಟ್‌ಗಳನ್ನು ನೀಡಿತ್ತು. ಈ ಫೆಸ್ಟಿವಲ್‌ ಸೇಲ್ ವೇಳೆಯಲ್ಲಿ ನೀವು ಆಫರ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಚಾನ್ಸ್‌ ಮಿಸ್‌ ಮಾಡಿಕೊಂಡಿದ್ದಿರಾ?.ಡೋಂಟ್ ವರಿ, ಅಮೆಜಾನ್‌, ಮತ್ತೊಂದು ಅವಕಾಶ ಕಲ್ಪಿಸಿದೆ.

ಅಮೆಜಾನ್ ಫ್ಯಾಬ್

ಹೌದು, ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್ ಇದೀಗ ಅಮೆಜಾನ್ ಫ್ಯಾಬ್ ಫೋನ್ಸ್‌ ಫೆಸ್ಟ್‌ ಸೇಲ್‌ ಮೇಳವನ್ನು ಆಯೋಜಿಸಿದೆ. ಈ ಸೇಲ್ ಮೇಳವು ಇದೇ ಅಕ್ಟೋಬರ್ 5 ರಿಂದ ಶುರುವಾಗಿದ್ದು, ಇದೇ ಅಕ್ಟೋಬರ್ 9ರ ವರೆಗೂ (ನಾಳೆ) ನಡೆಯಲಿದೆ. ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇ‍ಷ ರಿಯಾಯಿರಿಗಳು ಲಭ್ಯವಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಗ್ರಾಹಕರಿಗೆ 10 ಪರ್ಸೆಂಟ್ ಡಿಸ್ಕೌಂಟ್‌ ಸಿಗಲಿದೆ. ಹಾಗಾದರೇ ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌ ಮೇಳದಲ್ಲಿ ಬೆಸ್ಟ್‌ ಆಫರ್‌ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 7

ಒನ್‌ಪ್ಲಸ್‌ 7

ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್ 6 GB RAM ವೇರಿಯಂಟ್‌ 32,999ರೂ.ಗಳಿಗೆ ಬಿಡುಗಡೆ ಆಗಿತ್ತು. ಸದ್ಯ ನಡೆಯುತ್ತಿರುವ ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌ ಮೇಳದಲ್ಲಿ 29,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 8GB RAM ವೇರಿಯಂಟ್‌ನ 'ಒನ್‌ಪ್ಲಸ್‌ 7' ಸ್ಮಾರ್ಟ್‌ಫೋನ್ ಆಫರ್‌ ಬೆಲೆಯು 34,999ರೂ.ಗಳಾಗಿದೆ. ಈ ಸ್ಮಾರ್ಟ್‌ಫೋನ್ ಮೀಡ್‌ನೈಟ್‌ ಗ್ರೇ ಮತ್ತು ರೆಡ್‌ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30

ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ30' ಸ್ಮಾರ್ಟ್‌ಫೋನಿನ 4GB RAM ಮತ್ತು 64 GB ವೇರಿಯಂಟ್ ಬೆಲೆಯು 14,990ರೂ.ಗಳಾಗಿದ್ದು, ಸದ್ಯ ಆಫರ್‌ನಲ್ಲಿ 12,499ರೂ.ಗಳಿಗೆ ಸಿಗಲಿದೆ. ಇನ್ನು ಗ್ಯಾಲ್ಯಾಕ್ಸಿ ಎಂ30' ಫೋನಿನ 3GB RAM ಮತ್ತು 32 GB ಸ್ಟೋರೇಜ್ ವೇರಿಯಂಟ್ 9,999ರೂ.ಗಳಿಗೆ ಲಭ್ಯವಾಗಲಿದೆ. ಗ್ರೇಡಿಯಂಟ್‌ ಬ್ಲ್ಯಾಕ್, ಗ್ರೇಡಿಯಂಟ್ ಬ್ಲೂ, ಮೆಟಾಲಿಕ್ ಬ್ಲೂ ಮತ್ತು ಸ್ಟೈನ್‌ಲೆಸ್‌ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಿವೆ.

ಶಿಯೋಮಿ ರೆಡ್ಮಿ 6A

ಶಿಯೋಮಿ ರೆಡ್ಮಿ 6A

2GB RAM ಮತ್ತು 32GB ಸ್ಟೋರೇಜ್ ವೇರಿಯಂಟ್‌ನ 'ರೆಡ್ಮಿ 6A' ಸ್ಮಾರ್ಟ್‌ಫೋನ್ 'ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌' ಮೇಳದಲ್ಲಿ 1,500ರೂ.ಗಳ ಡಿಸ್ಕೌಂಟ್‌ ಪಡೆದಿದ್ದು, 5,499ರೂ.ಗಳಿಗೆ ದೊರೆಯುತ್ತಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಪ್ರೈಸ್‌ 6,999ರೂ.ಗಳು ಆಗಿತ್ತು. ಬ್ಲೂ, ಬ್ಲ್ಯಾಕ್‌ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದ್ದು, ಮೀಡಿಯಾ ಟೆಕ್ ಹಿಲಿಯೊ A22 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ.

ಹುವಾವೆ ಮೇಟ್ 20 ಪ್ರೊ

ಹುವಾವೆ ಮೇಟ್ 20 ಪ್ರೊ

ಜನಪ್ರಿಯ ಹುವಾವೆ ಸಂಸ್ಥೆಯ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ 'ಹುವಾವೆ ಮೇಟ್‌ 20 ಪ್ರೊ' 20,000ರೂ.ಗಳ ಡಿಸ್ಕೌಂಟ್‌ ಪಡೆದಿದ್ದು, 49,990ರೂ.ಗಳಿಗೆ ಗ್ರಾಹಕರು ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ 69,990ರೂ.ಗಳಿಗೆ ಬಿಡುಗಡೆ ಆಗಿತ್ತು. ಫೋನ್‌ ಹಿಂಬದಿಯಲ್ಲಿ 40ಎಂಪಿ + 20ಎಂಪಿ + 8ಎಂಪಿ ಸೆನ್ಸಾರ್‌ನ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಟ್ವಿಲೈಟ್‌ ಬಣ್ಣದ ಆಯ್ಕೆ ಮಾತ್ರ ಹೊಂದಿದೆ.

ವಿವೋ ವೈ12

ವಿವೋ ವೈ12

ಚೀನಾ ಮೂಲದ 'ವಿವೋ ವೈ12' ಸ್ಮಾರ್ಟ್‌ಫೋನಿನ 3GB RAM ಮತ್ತು 64GB ವೇರಿಯಂಟ್‌ ಬಿಡುಗಡೆ ಬೆಲೆಯು 11,990ರೂ.ಗಳು ಆಗಿದೆ. ಆದರೆ ಅಮೆಜಾನ್ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್‌ ಮೇಳದಲ್ಲಿ 1,000ರೂ.ಗಳ ಡಿಸ್ಕೌಂಟ್‌ ಪಡೆದಿದ್ದು, 10,990ರೂ.ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆನ್ಸಾರ್‌ ಹೊಂದಿದ್ದು, ಅಕ್ವಾ ಬ್ಲೂ ಮತ್ತು ಬರ್ಗಂಡಿ ರೆಡ್‌ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Amazon hosting the Amazon Fab Phones Fest sale (5 October- 9 October). to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+