ಡಿಸ್ಕೌಂಟ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಅಮೆಜಾನ್‌ನಲ್ಲಿದೆ ಅವಕಾಶ!

|

ನೀವೆನಾದರೂ ಡಿಸ್ಕೌಂಟ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಆಲೋಚನೆ ಮಾಡಿದದ್ದರೇ, ಅದಕ್ಕಿಗ ಸಕಾಲ ಕೂಡಿ ಬಂದಿದೆ. ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್ ಇದೀಗ ಮತ್ತೆ 'ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್‌' ಸೇಲ್‌ ಮೇಳವನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಇತ್ತೀಚಿನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಭಾರಿ ರಿಯಾಯಿತಿಯಲ್ಲಿ ಲಭ್ಯ ಇವೆ ಜತೆಗೆ ಎಕ್ಸ್‌ಚೇಂಜ್ ಕೊಡುಗೆ ಮತ್ತು ಬ್ಯಾಂಕ್‌ಗಳ ಆಫರ್‌ ಸಹ ಸಿಗಲಿವೆ.

ಅಮೆಜಾನ್

ಹೌದು, ಅಮೆಜಾನ್ ತಾಣವು ಆಯೋಜಿಸಿರುವ ನಾಲ್ಕಯ ದಿನಗಳ 'ಫ್ಯಾಬ್‌ ಫೋನ್ ಫೆಸ್ಟ್‌' ಸೇಲ್‌ ಇಂದು (ನವೆಂಬರ್ 26) ಶುರುವಾಗಿದ್ದು, ಇದೇ ನವೆಂಬರ್ 29ರ ವರೆಗೂ ನಡೆಯಲಿದೆ. ಈ ಸೇಲ್ ಮೇಳದಲ್ಲಿ ವಿವೋ, ಒಪ್ಪೊ, ಶಿಯೋಮಿ, ಸೇರಿದಂತೆ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯ ಇವೆ. ಸುಮಾರು 8,000ರೂ.ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆ ಮತ್ತು ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಹ ಲಭ್ಯವಾಗುತ್ತವೆ. ಹಾಗಾದರೇ ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್‌ ಸೇಲ್‌ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ಲಭ್ಯವಾಗಲಿದೆ ಎನ್ನುವದನ್ನು ಮುಂದೆ ನೋಡೋಣ ಬನ್ನಿರಿ.

ಒಪ್ಪೊ ಸ್ಮಾರ್ಟ್‌ಫೋನ್‌ಗಳು

ಒಪ್ಪೊ ಸ್ಮಾರ್ಟ್‌ಫೋನ್‌ಗಳು

ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್‌ ಸೇಲ್‌ ಮೇಳದಲ್ಲಿ ಆಯ್ದ ಒಪ್ಪೊ ಸ್ಮಾರ್ಟ್‌ಫೋನ್‌ಗಳಿಗೆ ಸುಮಾರು 16,000ರೂ.ಗಳ ವರೆಗೆ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5,000ರೂ.ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯವಾಗಲಿದೆ.

ವಿವೋ ಸ್ಮಾರ್ಟ್‌ಫೋನ್‌ಗಳು

ವಿವೋ ಸ್ಮಾರ್ಟ್‌ಫೋನ್‌ಗಳು

ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್‌ ಸೇಲ್‌ ಮೇಳದಲ್ಲಿ ವಿವೋ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೂ ಹೆಚ್ಚಿನ ಡಿಸ್ಕೌಂಟ್‌ ನೀಡಿದ್ದು, ಸುಮಾರು 11,000ರೂ.ಗಳ ವರೆಗೂ ಡಿಸ್ಕೌಂಟ್ ಲಭ್ಯವಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1,000ರೂ. ಎಕ್ಸ್‌ಚೇಂಜ್ ಕೊಡುಗೆ ಸಹ ಡಿಸ್ಕೌಂಟ್‌ನೊಂದಿಗೆ ಜೊತೆಯಾಗಲಿದೆ. ಹಾಗೆಯೇ ಈ ವೇಳೆ ವಿವೋದ ಹೊಸ ವಿವೋ ಯು20 ಸ್ಮಾರ್ಟ್‌ಫೋನ್ ಫಸ್ಟ್‌ ಸೇಲ್ (ನವೆಂಬರ್ 28) ಸಹ ನಡೆಯಲಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ಗಳು

ಶಿಯೋಮಿ ಸ್ಮಾರ್ಟ್‌ಫೋನ್‌ಗಳು

ಶಿಯೋಮಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೂ ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್‌ ಸೇಲ್‌ ಮೇಳದಲ್ಲಿ ಭರ್ಜರಿ ರಿಯಾಯಿತಿ ನೀಡಲಾಗಿದೆ. ರೆಡ್ಮಿ ವೈ3, ಶಿಯೋಮಿ ಮಿ A3 ಮತ್ತು ರೆಡ್ಮಿ 7A ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಆಫರ್‌ ಪಡೆದಿವೆ. ಹಾಗೂ ಇದೇ ಸೇಲ್‌ ವೇಳೆ ಶಿಯೋಮಿ ರೆಡ್ಮಿ ನೋಟ್ 8 ಮತ್ತು ರೆಡ್ಮಿ ನೋಟ್‌ 8 ಪ್ರೊ (ನವೆಂಬರ್ 26 & 27) ಫ್ಲ್ಯಾಶ್‌ ಸೇಲ್‌ ಸಹ ನಡೆಯಲಿದೆ.

ಆಪಲ್‌ ಐಫೋನ್‌ಗಳು

ಆಪಲ್‌ ಐಫೋನ್‌ಗಳು

ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್‌ ಸೇಲ್‌ ಮೇಳದಲ್ಲಿ ಆಪಲ್‌ ಐಫೋನ್‌ಗಳಿಗೂ ಆಫರ್‌ ಲಭ್ಯ ಇದೆ. ಮೇಳದಲ್ಲಿ ಐಫೋನ್ 11 ಐಫೋನ್‌ ಎಕ್ಸ್‌ ಮತ್ತು ಐಫೋನ್‌ ಎಕ್ಸ್‌ಆರ್‌' ಫೋನ್‌ಗಳಿಗೆ ರಿಯಾಯಿತಿ ಕೊಡುಗೆಗಳು ಇವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸುಮಾರು 7,000ರೂ.ಗಳ ವರೆಗೂ ಇನ್‌ಸ್ಟಂಟ್‌ ಡಿಸ್ಕೌಂಟ್‌ ಲಭ್ಯ.

ಹಾನರ್ ಮತ್ತು ಆಕ್ಸಸರಿಸ್‌

ಹಾನರ್ ಮತ್ತು ಆಕ್ಸಸರಿಸ್‌

ಅಮೆಜಾನ್‌ ತಾಣದ ಈ ಸೇಲ್‌ ಮೇಳದಲ್ಲಿ ಹುವಾವೆ ಹಾನರ್ ಸ್ಮಾರ್ಟ್‌ಫೋನ್‌ಗಳಿಗೂ ಹೆಚ್ಚಿನ ಕೊಡುಗೆ ಲಭ್ಯ ಇದೆ. ಇವುಗಳೊಂದಿಗೆ ಮೊಬೈಲ್‌ ಆಕ್ಸಸರಿಸ್‌ಗಳು 99ರೂ.ಗಳ ಆರಂಭಿಕ ಬೆಲೆಯಿಂದ ಲಭ್ಯವಾಗುತ್ತವೆ. ಬ್ಲೂಟೂತ್‌ ಮತ್ತು ವಾಯರ್‌ ಹೆಡ್‌ಫೋನ್‌ಗಳಿಗೆ ಶೇ.75% ವರೆಗೂ ವಿಶೇಷ ಡಿಸ್ಕೌಂಟ್‌ ದೊರೆಯುತ್ತದೆ. ಪವರ್‌ಬ್ಯಾಂಕ್‌ 499ರೂ.ಗಳಿಂದ ಲಭ್ಯವಾಗಲಿವೆ.

Most Read Articles
Best Mobiles in India

English summary
Amazon India announced the launch of ‘Fab Phones Fest’. During the four-day sale, Amazon India will host offers and discounts across smartphone brands. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X