ಡಿಸ್ಕೌಂಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಇಂದೇ ಕೊನೆಯ ದಿನ!
ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ ಇದ್ರೆ ಇದಕ್ಕೆ ಇಂದೇ ಸಕಾಲ.ಏಕೆಂದರೇ ಅಮೆಜಾನ್‌ನಲ್ಲಿ ಸದ್ಯ ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ ಸೇಲ್ ಮೇಳವು ಚಾಲ್ತಿಯಲ್ಲಿದೆ. ನಾಲ್ಕು ದಿನಗಳ ಈ ಸೇಲ್ ಮೇಳವು ಇಂದು (ಡಿ.25) ಕೊನೆಯಾಗಲಿದೆ. ಮೇಳದಲ್ಲಿ ಆಯ್ದ ನೂತನ ಫೋನ್‌ಗಳಿಗೆ ಬೆಸ್ಟ್ ಡಿಸ್ಕೌಂಟ್ ಲಭ್ಯ.

ಹೌದು, ಇ-ಕಾಮರ್ಸ್ ದೈತ್ಯ ಅಮೆಜಾನ್ ತಾಣವು ಆಯೋಜಿಸಿರುವ ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ ಸೇಲ್ ಮೇಳ ಇಂದು (ಡಿ.25) ಮುಕ್ತಾಯವಾಗಲಿದೆ. ಈ ಫೆಸ್ಟ್‌ನಲ್ಲಿ ಕೆಲವು ಆಯ್ದ ಹೊಸ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ ಎಕ್ಸ್‌ಚೇಂಜ್ ಡಿಸ್ಕೌಂಟ್, ನೋ-ಕಾಸ್ಟ್ EMI ಸೇರಿದಂತೆ ಇತರೆ ಸೌಲಭ್ಯಗಳು ಲಭ್ಯವಾಗಲಿವೆ. ಹಾಗಾದರೇ ಅಮೆಜಾನ್‌ನ ಈ ಸೇಲ್ ಮೇಳದಲ್ಲಿ ರಿಯಾಯಿತಿ ದರದಲ್ಲಿ ಲಭ್ಯ ಇರುವ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M51
ಅಮೆಜಾನ್‌ನ ಈ ಫ್ಯಾಬ್ ಸೇಲ್‌ನಲ್ಲಿ ಈ ಫೋನ್ 22,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು, 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಪಡೆದಿದೆ. ಜೊತೆಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ 7000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ.

ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್
ಶಿಯೋಮಿ ಕಂಪನಿಯ ಜನಪ್ರಿಯ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಫೋನ್ ಸೇಲ್ ಮೇಳದಲ್ಲಿ 15,999ರೂ. ಗಳಿಗೆ ಸಿಗಲಿದೆ. ಇನ್ನು ಈ ಫೋನ್ 18,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿತು. ಹಾಗೆಯೇ ಈ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 720 ಜಿ ಪ್ರೊಸೆಸರ್ ಮತ್ತು 64 ಎಂಪಿ ಕ್ವಾಡ್ ಕ್ಯಾಮೆರಾಗಳನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M21
ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು, 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಪಡೆದಿದೆ. ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಹಾಗೆಯೇ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಸೇಲ್‌ನಲ್ಲಿ ಈ ಫೋನ್ 13,999ರೂ. ದರದಲ್ಲಿ ಕಾಣಿಸಿಕೊಂಡಿದೆ.

ಐಫೋನ್ 11
ಜನಪ್ರಿಯ ಐಫೋನ್ 11 ಫೋನ್ ಸೇಲ್‌ನಲ್ಲಿ 51,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಐಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್ ಪಡೆದುಕೊಂಡಿದೆ. ಇದರೊಂದಿಗೆ ನೈಟ್‌ಮೋಡ್, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

ಒಪ್ಪೋ F17
ಒಪ್ಪೋ ಕಂಪನಿಯ ಇತ್ತೀಚಿನ ಹೊಸ ಒಪ್ಪೋ F17 ಫೋನ್ ಸಹ ಅಮೆಜಾನ್ ಸೇಲ್ ಮೇಳದಲ್ಲಿ ರಿಯಾಯಿತಿ ಪಡೆದಿದ್ದು, 16,990ರೂ. ಗಳಿಗೆ ಸಿಗಲಿದೆ. ಇನ್ನು ಈ ಫೋನ್ ಬೆಲೆಯು 20,990ರೂ.ಆಗಿದೆ. ಹಾಗೆಯೇ ಈ ಸ್ಲಿಮ್ ರಚನೆಯನ್ನು ಪಡೆದಿದ್ದು, ಜೊತೆಗೆ 4015mAh ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications