ಡಿಸ್ಕೌಂಟ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಅಮೆಜಾನ್‌ನಲ್ಲಿ ಆಫರ್!

|

ಆನ್‌ಲೈನ್‌ ಶಾಪಿಂಗ್ ಪ್ರಿಯರ ನೆಚ್ಚಿನ ಪ್ಲಾಟ್‌ಫಾರ್ಮ್ ಅಮೆಜಾನ್ ಹಲವು ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಹಬ್ಬದ ದಿನಗಳು, ವಿಶೇಷ ದಿನಗಳಂದು ಹಾಗೂ ಮಂತ್ ಎಂಡ್‌ನ ದಿನಗಳಲ್ಲಿ ಅಮೆಜಾನ್ ವಿಶೇಷ ಸೇಲ್ ಆಯೋಜಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಆ ಪೈಕಿ ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್ ಸೇಲ್‌ ಹೊಸ ಫೋನ್‌ ಖರೀದಿಗೆ ಒಂದು ಉತ್ತಮ ಟೈಮ್ ಆಗಿ ಗುರುತಿಸಿಕೊಂಡಿದೆ.

ಅಮೆಜಾನ್

ಹೌದು, ಇ-ಕಾಮರ್ಸ್‌ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್‌ ಅಮೆಜಾನ್‌ ಫ್ಯಾಬ್‌ ಫೋನ್ ಫೆಸ್ಟ್ ಸೇಲ್‌ ಮೇಳವನ್ನು ಘೋಷಿಸಿದೆ. ಫೆ.22ರಿಂದ ಶುರುವಾಗಿರುವ ಈ ಸೇಲ್‌ ಫೆ.25ರ ವರೆಗೂ ಚಾಲ್ತಿ ಇರಲಿದೆ. ಇನ್ನು ಈ ಸೇಲ್‌ನಲ್ಲಿ ಫ್ಲ್ಯಾಗ್‌ಶಿಫ್ ಮಾದರಿಯ ಫೋನ್‌ಗಳ ಜೊತೆಗೆ ಇತ್ತೀಚಿಗಿನ ಕೆಲವು ಆಯ್ದ ನೂತನ ಸ್ಮಾರ್ಟ್‌ಫೋನ್‌ಗಳಿಗೂ ಆಕರ್ಷಕ ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಎಕ್ಸ್‌ಚೇಂಜ್ ಡಿಸ್ಕೌಂಟ್‌, ನೋ-ಕಾಸ್ಟ್‌ EMI ಸೇರಿದಂತೆ ಇತರೆ ಸೌಲಭ್ಯಗಳು ಲಭ್ಯವಾಗಲಿವೆ. ಹಾಗಾದರೇ ಅಮೆಜಾನ್‌ನ ಈ ಸೇಲ್‌ ಮೇಳದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M51

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M51

ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿದ್ದು, 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿದ್ದು, ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ.‌ ಹಾಗೆಯೇ 7000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಸೇಲ್‌ನಲ್ಲಿ ಈ ಫೋನ್‌ 21,749ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಐಫೋನ್ 12 ಮಿನಿ

ಐಫೋನ್ 12 ಮಿನಿ

ಐಫೋನ್ 12 ಮಿನಿ ಫೋನ್ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಅಮೆಜಾನ್ ಸೇಲ್‌ನಲ್ಲಿ ಈ ಫೋನ್ 64,990ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ.

ಶಿಯೋಮಿ ರೆಡ್ಮಿ ನೋಟ್ 9

ಶಿಯೋಮಿ ರೆಡ್ಮಿ ನೋಟ್ 9

ಶಿಯೋಮಿ ಈ ಜನಪ್ರಿಯ ಸ್ಮಾರ್ಟ್‌ಫೋನ್ 5020mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇದರೊಂದಿಗೆ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಸೇಲ್‌ನಲ್ಲಿ ಈ ಫೋನ್ ಡಿಸ್ಕೌಂಟ ಪಡೆದಿದ್ದು, 10,999ರೂ.ಗಳ ಬೆಲೆಯಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದ್ದು, ಕ್ರಮವಾಗಿ 64ಎಂಪಿ+8ಎಂಪಿ+5ಎಂಪಿ+5ಎಂಪಿ ಸೆನ್ಸಾರ್‌ನಲ್ಲಿವೆ. 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಸೇಲ್‌ನಲ್ಲಿ ಗ್ಯಾಲಕ್ಸಿ M31s ಫೋನ್ 18,499ರೂ.ಗಳಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
E-commerce giant Amazon has kickstarted a new sale on its platform as part of which it is offering discounts on smartphones and mobile accessories.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X