ನೋಕಿಯಾದ ಈ ಕೀ ಪ್ಯಾಡ್ ಫೋನಿಗೂ ಭರ್ಜರಿ ಡಿಸ್ಕೌಂಟ್; ನೀವು ವಾವ್ ಅನೋದು ಪಕ್ಕಾ!
ಜನಪ್ರಿಯ ಇ ಕಾಮರ್ಸ್ ವೆಬ್‌ಸೈಟ್‌ಗಳ ಪೈಕಿ ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಅಮೆಜಾನ್ ಎಲ್ಲ ವರ್ಗದ ಸ್ಮಾರ್ಟ್‌ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ನೀಡುತ್ತ ಮುನ್ನಡೆದಿದೆ. ಹಾಗೆಯೇ ಒಂದಿಲ್ಲೊಂದು ಮಾರಾಟ ಮೇಳ ಆಯೋಜಿಸುವ ಮೂಲಕ ಆನ್‌ಲೈನ್ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ ಅಮೆಜಾನ್ ಫೀಚರ್ ಫೋನ್ಸ್ ಮೇಳ (Amazon Feature Phones Mela) ಆಯೋಜಿಸಿದ್ದು, ಫೀಚರ್/ಕೀ ಪ್ಯಾಡ್ ಮೊಬೈಲ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಅವುಗಳ ಪೈಕಿ ನೋಕಿಯಾ 105 ಕ್ಲಾಸಿಕ್ ಮೊಬೈಲ್ ಆಕರ್ಷಕ ಡಿಸ್ಕೌಂಟ್ ಪಡೆದಿದೆ.
ಹೌದು, ಅಮೆಜಾನ್ ತಾಣದಲ್ಲಿ ಅಮೆಜಾನ್ ಫೀಚರ್ ಫೋನ್ಸ್ ಮೇಳ (Amazon Feature Phones Mela) ಈಗ ಲೈವ್ ಇದ್ದು, ಕೆಲವು ಫೀಚರ್ ಫೋನ್ ಡಿಸ್ಕೌಂಟ್ ಪಡೆದಿವೆ. ಆ ಪೈಕಿ ಎವರ್‌ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ (Nokia) ಸಂಸ್ಥೆಯ ನೋಕಿಯಾ 105 ಕ್ಲಾಸಿಕ್ ಕೀ ಪ್ಯಾಡ್ ಫೋನ್ ಶೇ, 21% ರಷ್ಟು ನೇರ ರಿಯಾಯಿತಿ ಪಡೆದಿದ್ದು, ಈ ಫೋನ್ 1,269 ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ.

ಇನ್ನು ನೋಕಿಯಾ 105 ಕ್ಲಾಸಿಕ್ ಕೀ ಪ್ಯಾಡ್ ( Keypad Phone ) ಫೋನ್ 2024 ಆವೃತ್ತಿಯದಾಗಿದ್ದು, ಡ್ಯುಯಲ್ ಸಿಮ್ ಜೊತೆಗೆ ಚಾರ್ಜರ್ ಸೌಲಭ್ಯ ಪಡೆದುಕೊಂಡಿದೆ. ಈ ಫೋನ್ ಚಾರ್ಕೋಲ್ ಹಾಗೂ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ ಬಿಲ್ಟ್ ಇನ್ ಸ್ನೇಕ್ ಗೇಮ್ ಸಹ ಪಡೆದುಕೊಂಡಿದೆ. ಹಾಗಾದರೇ ನೋಕಿಯಾ 105 ಕ್ಲಾಸಿಕ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ನೋಕಿಯಾ 105 ಕ್ಲಾಸಿಕ್ ಫೋನ್ ಫೀಚರ್ಸ್
ನೋಕಿಯಾ 105 ಕ್ಲಾಸಿಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಫೋನ್ ವೈರ್‌ಲೆಸ್ ಎಫ್‌ಎಂ ರೇಡಿಯೊಗೆ (Wireless FM radio) ಸಪೋರ್ಟ್ ಪಡೆದುಕೊಂಡಿದ್ದು, ರೇಡಿಯೋ ಸೇವೆ ಪಡೆದುಕೊಳ್ಳಲು ಬಳಕೆದಾರರಿಗೆ ಹೆಡ್‌ಸೆಟ್ ಹಾಕುವ ಅಗತ್ಯವಿಲ್ಲ. ಹಾಗೆಯೇ ಈ ಫೋನ್ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ (Single SIM and Dual SIM) ಆಯ್ಕೆ ಪಡೆದುಕೊಂಡಿದೆ.
ಈ ಫೋನ್ (Inbuilt UPI app) ಯುಪಿಐ (UPI) ಪೇಮೆಂಟ್ ಆಯ್ಕೆ ಪಡೆದಿರುವುದು ಹೈಲೈಟ್ ಅಂಶಗಳಲ್ಲಿ ಒಂದು.ಇದರೊಂದಿಗೆ ಈ ಫೋನ್ 800 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದು ದೀರ್ಘ ಅವಧಿಯ ಬ್ಯಾಕಅಪ್ ನೀಡಲಿದೆ.
ನೋಕಿಯಾ 105 ಫೋನ್ ಫೀಚರ್ಸ್
ನೋಕಿಯಾ 105 ಮೊಬೈಲ್ 1.77 ಇಂಚಿನ QQVGA ಡಿಸ್‌ಪ್ಲೇ ರಚನೆ ಅನ್ನು ಒಳಗೊಂಡಿದೆ. ಅಲ್ಲದೇ ಇದು ಆಡಿಯೋ ಕರೆ ರೆಕಾರ್ಡಿಂಗ್ ಫೀಚರ್ಸ್ ಪಡೆದಿದ್ದು, ಇದರೊಂದಿಗೆ ಈ ಮೊಬೈಲ್ ಎಂಪಿ3 ಪ್ಲೇಯರ್ ಸೌಲಭ್ಯ ಅನ್ನು ಹೊಂದಿದೆ. ಅದೇ ರೀತಿ ಈ ಮೊಬೈಲ್ 1,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಹೊಂದಿದೆ. ಇನ್ನು ಈ ಫೋನ್ 11.5 x 5 x 1.4 cm ಸುತ್ತಳತೆ ಪಡೆದಿದ್ದು, 73g ತೂಕ ಪಡೆದುಕೊಂಡಿದೆ.
ನೋಕಿಯಾ 105 ಮೊಬೈಲ್ 18 ದಿನಗಳ ಸ್ಟ್ಯಾಂಡ್ ಬೈ ಸಮಯ ಒದಗಿಸಲಿದ್ದು, ಹಾಗೆಯೇ 12 ಗಂಟೆಗಳ ಟಾಕ್‌ಟೈಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಇದು ವಾಯರ್‌ಲೇಸ್ ಎಫ್‌ಎಮ್ ರೇಡಿಯೋ ಸೌಲಭ್ಯ ಸಹ ಹೊಂದಿದೆ. ಇದರೊಂದಿಗೆ ಈ ಫೋನ್ ಚಾರ್ಕೋಲ್ ಮತ್ತು ರೆಡ್ ಬಣ್ಣದ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಅಮೆಜಾನ್‌ನಲ್ಲಿ ಖರೀದಿ ಮಾಡಬಹುದು.


Click it and Unblock the Notifications








