ಅಮೆಜಾನ್‌ ಫೆಸ್ಟಿವಲ್ ಸೇಲ್‌: ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ಡಿಸ್ಕೌಂಟ್‌!

|

ಅಮೆಜಾನ್‌ ತನ್ನ ಫೆಸ್ಟಿವಲ್ ಸೇಲ್‌ನಲ್ಲಿ ಆಫರ್‌ ಮೇಲೆ ಆಫರ್‌ ನೀಡಿದೆ. ಈಗ ಅಮೆಜಾನ್‌ ಆಪಲ್‌, ಹೆಚ್‌ಪಿ, ಡೆಲ್,ಲೆನೊವಾ, ಸ್ಯಾಮ್‌ಸಂಗ್‌ ಸೇರಿದಂತೆ ಇನ್ನಿತರ ಪ್ರಮುಖ ಬ್ರಾಂಡ್‌ಗಳ ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಈ ಹಬ್ಬಗಳ ಋತುವಿನ ಸೇಲ್‌ನಲ್ಲಿ ನೀವು ಆಕರ್ಷಕ ಬೆಲೆಯಲ್ಲಿ ಉತ್ತಮ ಲ್ಯಾಪ್‌ಟಾಪ್‌ಗಳನ್ನು ಕೊಂಡುಕೊಳ್ಳಬಹುದಾಗಿದೆ. ಹಾಗಿದ್ರೆ ಮತ್ಯಾಕೆ ತಡ, ಬನ್ನಿ ಅಮೆಜಾನ್‌ ರಿಯಾಯಿತಿ ನೀಡಿ ಮಾರಾಟ ಮಾಡುತ್ತಿರುವ ಪ್ರಮುಖ ಲ್ಯಾಪ್‌ಟಾಪ್‌ಗಳ ಆಫರ್‌ ಬೆಲೆ ಹಾಗೂ ಮೂಲ ಬೆಲೆಯ ವಿವರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಅಸುಸ್ ವಿವೊ ಬುಕ್ 15

ಅಸುಸ್ ವಿವೊ ಬುಕ್ 15

ಈ ಲ್ಯಾಪ್‌ಟಾಪ್‌ನ್ನು ಅಮೆಜಾನ್‌ ಹೆಚ್ಚಿನ ರಿಯಾಯಿತಿ ನೀಡಿ ಮಾರುತ್ತಿದೆ.ಇದರ ಸಾಮಾನ್ಯ ಬೆಲೆ 80,990 ರೂ. ಇದ್ದು, ಈಗ ಇದನ್ನು ಕೇವಲ 44,990 ರೂ.ಗಳಿಗೆ ಕೊಂಡುಕೊಳ್ಳಹುದಾಗಿದೆ. ಇಂಟೆಲ್ i7 10ನೇ ಜನ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್‌ 16 GB RAM ಹಾಗೂ 512 GB SSD ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಲೆನೊವೊ ಐಡಿಯಾಪ್ಯಾಡ್ 3

ಲೆನೊವೊ ಐಡಿಯಾಪ್ಯಾಡ್ 3

ಈ ಲ್ಯಾಪ್‌ಟಾಪ್‌ನ ಸಾಮಾನ್ಯ ಬೆಲೆ 49,999 ರೂ. ಇದ್ದು, ಇದನ್ನು ಅಮೆಜಾನ್‌ 44,999 ರೂ.ಗಳಿಗೆ ಮಾರಾಟ ಮಾಡಲಿದೆ. ಈ ಡಿವೈಸ್‌ ಇಂಟೆಲ್ 11 ನೇ ಜನ್ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ. ಇದು 8 GB RAM ಹಾಗೂ 512 GB SD ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ.

ಅಸೂಸ್ ವಿವೊ ಬುಕ್ 15

ಅಸೂಸ್ ವಿವೊ ಬುಕ್ 15

ಮತ್ತೊಂದು ಅಸೂಸ್ ವಿವೊ ಬುಕ್ 15 ನ ಬೆಲೆ ಮೂಲ ಬೆಲೆ 46,990 ರೂ. ಇದ್ದು, ಅಮೆಜಾನ್‌ ಕೇವಲ 24,990 ರೂ.ಗಳಿಗೆ ಮಾರಾಟ ಮಾಡಲಿದೆ. ಇದು AMD R3 3000 ಸರಣಿಯ ಪ್ರೊಸೆಸರ್‌ನಲ್ಲಿ ರನ್‌ ಆಗಲಿದ್ದು, 8GB RAM ಮತ್ತು 256 GB SSD ಸ್ಟೋರೇಜ್‌ ಆಯ್ಕೆ ಪಡೆದಿದೆ.

ಫ್ಯೂಜಿತ್ಸು CH ಸರಣಿ (Fujitsu CH Series)

ಫ್ಯೂಜಿತ್ಸು CH ಸರಣಿ (Fujitsu CH Series)

ಈ ಲ್ಯಾಪ್‌ಟಾಪ್‌ಗೆ ಅಮೆಜಾನ್‌ ನ ಸಾಮಾನ್ಯ ಬೆಲೆ 1,00,590 ರೂ.ಗಳಿದ್ದು, ಇದನ್ನು ರಿಯಾಯಿತಿ ದರದಲ್ಲಿ 59,990 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್‌ GTX 1650 Ti, RTX 3000 ಮತ್ತು ಇನ್ನಿತರ ಆಯ್ಕೆಗಳನ್ನು ಒಳಗೊಂಡಿದೆ.

ಎಲ್‌ಜಿ ಗ್ರಾಮ್‌ 16

ಎಲ್‌ಜಿ ಗ್ರಾಮ್‌ 16

ಅಮೆಜಾನ್‌ ತನ್ನ ಆಫರ್‌ನಲ್ಲಿ ಈ ಲ್ಯಾಪ್‌ಟಾಪ್‌ನ್ನು1,05,990 ರೂ.ಗಳಿಗೆ ಮಾರಾಟ ಮಾಡುತ್ತಿದೆ. ಇದರ ಸಾಮಾನ್ಯ ದರ 1,51,000 ರೂ.ಗಳು. ಇದು ಇಂಟೆಲ್ i7 12ನೇ ಜನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16 GB RAM ಹಾಗೂ 512 GB SSD ಸ್ಟೋರೇಜ್‌ ಆಯ್ಕೆ ಪಡೆದಿದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3

ಅಮೆಜಾನ್‌ ಈ ಲ್ಯಾಪ್‌ಟಾಪ್‌ನ್ನು 52,990 ರೂ.ಗಳ ರಿಯಾಯಿತಿ ದರದಲ್ಲಿ ನೀಡಲಿದ್ದು, ಇದರ ಸಾಮಾನ್ಯ ಬೆಲೆ 68,990 ರೂ.ಗಳಾಗಿವೆ. ಈ ಲ್ಯಾಪ್‌ಟಾಪ್ ಇಂಟೆಲ್ i5 12ನೇ ಜನ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 8 GB RAM ಹಾಗೆಯೇ 512 GB SSD ಸ್ಟೋರೇಜ್‌ ಇದರಲ್ಲಿದೆ.

ಲೆನೊವೊ ಐಡಿಯಾಪ್ಯಾಡ್ 3 ಗೇಮಿಂಗ್ ಲ್ಯಾಪ್‌ಟಾಪ್

ಲೆನೊವೊ ಐಡಿಯಾಪ್ಯಾಡ್ 3 ಗೇಮಿಂಗ್ ಲ್ಯಾಪ್‌ಟಾಪ್

ಈ ಲ್ಯಾಪ್‌ಟಾಪ್‌ನ್ನು ಅಮೆಜಾನ್‌ನಲ್ಲಿ ನೀವು ಕೇವಲ 49,990 ರೂ.ಗಳಿಕೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 82,490 ರೂ.ಗಳು. ಇಂಟೆಲ್ i5 11ನೇ ಜನ್ ಪ್ರೊಸೆಸರ್ ನಲ್ಲಿ ರನ್‌ ಆಗುವ ಇದು, 8 GB RAM ಮತ್ತು 512 GB SSD ಸ್ಟೋರೇಜ್‌ ಬೆಂಬಲ ಪಡೆದಿದೆ.

ಹೆಚ್‌ಪಿ ವಿಕ್ಟಸ್ ಗೇಮಿಂಗ್ ಲ್ಯಾಪ್‌ಟಾಪ್

ಹೆಚ್‌ಪಿ ವಿಕ್ಟಸ್ ಗೇಮಿಂಗ್ ಲ್ಯಾಪ್‌ಟಾಪ್

ಈ ಡಿವೈಸ್‌ನ ಸಾಮಾನ್ಯ ಬೆಲೆ 71,343 ರೂ.ಗಳಾಗಿದ್ದು, ಇದನ್ನು ಅಮೆಜಾನ್‌ ನ ಫೆಸ್ಟಿವಲ್‌ ಸೇಲ್‌ನಲ್ಲಿ 52,990 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು AMD Ryzen 5 5600H ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 8 GB RAM ಹಾಗೂ 512 GB SSD ಸ್ಟೋರೇಜ್‌ ಪಡೆದಿದೆ.

ಅಸೂಸ್ ಟಪ್‌ ಗೇಮಿಂಗ್ A15

ಅಸೂಸ್ ಟಪ್‌ ಗೇಮಿಂಗ್ A15

ಇದರ ಮೂಲ ಬೆಲೆ 98,990 ರೂ.ಗಳಿದ್ದು, ಇದನ್ನು ನೀವು ಈ ಆಫರ್‌ನಲ್ಲಿ ಕೇವಲ 71,990 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಲ್ಯಾಪ್‌ಟಾಪ್‌ ಸಹ AMD Ryzen 5 5600H ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 8 GB RAM ಮತ್ತು 512 GB SSD ನ ಆಂತರಿಕ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಏಸರ್‌ ನಿಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್

ಏಸರ್‌ ನಿಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್

ಈ ಲ್ಯಾಪ್‌ಟಾಪ್‌ನ ಸಾಮಾನ್ಯ ಬೆಲೆ 99,999 ರೂ. ಇದ್ದು,ಇದಕ್ಕೆ ಅಮೆಜಾನ್‌ ಭಾರೀ ರಿಯಾಯಿತಿ ನೀಡಿ ಕೇವಲ 55,990 ರೂ.ಗಳಿಗೆ ಮಾರಾಟ ಮಾಡುತ್ತಿದೆ.ಇದು ಇಂಟೆಲ್ i5 11ನೇ ಜನ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 8 GB RAM ಮತ್ತು 512 GB SSD ಸ್ಟೋರೇಜ್‌ ಪಡೆದಿದೆ.

Best Mobiles in India

English summary
Amazon has given huge discounts on laptops from Apple, HP, Dell, Lenovo, Samsung and other major brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X