Home
ಸುದ್ದಿಜಾಲ

ಅಮೆಜಾನ್ ಪ್ರೈಮ್ ಡೇ ಸೇಲ್‌ಗೆ ದಿನಾಂಕ ಫಿಕ್ಸ್‌: ಗ್ಯಾಜೆಟ್‌ಗಳಿಗೆ 80% ವರೆಗೂ ಡಿಸ್ಕೌಂಟ್‌!

ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಸ್ಮಾರ್ಟ್‌ಗ್ಯಾಜೆಟ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡುವುದು ಸಾಮಾನ್ಯವಾದ ವಿಷಯ. ಅದಾಗ್ಯೂ ಈ ವಿಶೇಷ ಸೇಲ್‌ನಲ್ಲಿ ಮಾತ್ರ ನೀವು ಊಹೆ ಮಾಡಿರದ ಕಡಿಮೆ ಬೆಲೆಗೆ ಸ್ಮಾರ್ಟ್‌ ಡಿವೈಸ್‌ಗಳನ್ನು ಖರೀದಿ ಮಾಡಬಹುದು.

ಹೌದು, ಅಮೆಜಾನ್ ತನ್ನ 2023ರ ಅತಿದೊಡ್ಡ ಮಾರಾಟವಾದ ಅಮೆಜಾನ್ ಪ್ರೈಮ್ ಡೇಸ್ 2023 ಮಾರಾಟ (Amazon Prime Days 2023) ದ ಬಗ್ಗೆ ಘೋಷಣೆ ಮಾಡಿದ್ದು, ಇದರಲ್ಲಿ ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಭಾರೀ ಉಳಿತಾಯಕ್ಕೆ ಅನುವು ಮಾಡಿಕೊಲಾಗಿದೆ. ಈ ಸೇಲ್‌ನಲ್ಲಿ ಕೆಲವು ವಸ್ತುಗಳಿಗೆ 80 ರಷ್ಟು ರಿಯಾಯಿತಿ ಸಹ ಲಭ್ಯ ಆಗುತ್ತಿದ್ದು, ಈ ಸೇಲ್‌ ಯಾವಾಗ ಆರಂಭ, ಯಾವೆಲ್ಲಾ ಡಿವೈಸ್ ಗಳನ್ನು ಖರೀದಿ ಮಾಡಬಹುದು ಎಂಬಿತ್ಯಾದಿ ಅಗತ್ಯ ಮಾಹಿತಿಯನ್ನು ತಿಳಿಯಿರಿ.

ಅಮೆಜಾನ್ ಪ್ರೈಮ್ ಡೇ ಸೇಲ್‌ಗೆ ದಿನಾಂಕ ಫಿಕ್ಸ್‌:ಗ್ಯಾಜೆಟ್‌ಗಳಿಗೆ 80% ಡಿಸ್ಕೌಂಟ್‌

ಅಮೆಜಾನ್ ಪ್ರೈಮ್ ಡೇ ಸೇಲ್ 2023 ದಿನಾಂಕಗಳು: ಈ ವಿಶೇಷ ಸೇಲ್‌ ಅನ್ನು ಅಮೆಜಾನ್‌ ಜುಲೈ 15 ರಂದು 12:00 AM ಕ್ಕೆ ಪ್ರಾರಂಭ ಮಾಡಲಿದ್ದು, ಜುಲೈ 16, 2023 ರವರೆಗೆ ನಡೆಸುತ್ತದೆ. ಇದು ಭಾರತದಲ್ಲಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನ ಏಳನೇ ಆವೃತ್ತಿಯಾಗಿದೆ. ಈ ಮೊದಲು ಸಹ ಇದೇ ಸೇಲ್‌ ಅನ್ನು ಆಯೋಜನೆ ಮಾಡಲಾಗಿದ್ದು, ಅಮೆಜಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಈ ಅಮೆಜಾನ್ ಪ್ರೈಮ್ ಡೇ ಕಂಪನಿಯ ಅತಿದೊಡ್ಡ ವಾರ್ಷಿಕ ಮಾರಾಟಗಳಲ್ಲಿ ಒಂದಾಗಿದ್ದು, ಇದು ಕೇವಲ ತನ್ನ ಪ್ರೈಮ್ ಸದಸ್ಯರಿಗಾಗಿ ಮಾತ್ರ ಮೀಸಲಿರಿಸಿದೆ. ಈ ಮೂಲಕ ಸಾಮಾನ್ಯ ಜನರು ಈ ವಿಶೇಷ ಸೇಲ್‌ನಲ್ಲಿ ಭಾಗಿಯಾಗಲು ಸಾಧ್ಯ ಆಗುವುದಿಲ್ಲ ಎಂಬುದು ತಿಳಿದಿರಲಿ. ಅದರಲ್ಲೂ ಈ ಬಾರಿಯ ಸೇಲ್‌ನಲ್ಲಿ ಈ ಮೊದಲು ನೀಡುವುದಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪ್ರಮುಖ ಬ್ರ್ಯಾಂಡ್‌ಗಳ ವಸ್ತುಗಳಿಗೆ ನೀಡಲಾಗುತ್ತಿದೆ.

ಯಾವೆಲ್ಲಾ ಸ್ಮಾರ್ಟ್‌ ಡಿವೈಸ್‌ಗಳಿಗೆ ಆಫರ್‌?: ಅಮೆಜಾನ್ ಪ್ರೈಮ್ ಡೇ ಸೇಲ್ ದೊಡ್ಡ ಬ್ರಾಂಡ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ ಹಲವಾರು ಹೊಸ ಲಾಂಚ್‌ಗಳ ವರೆಗೂ ಆಫರ್‌ ನಿಡುತ್ತದೆ. ಅದರಲ್ಲಿ ಒನ್‌ಪ್ಲಸ್‌, ಐಕ್ಯೂ, ರಿಯಲ್‌ಮಿ, ಸ್ಯಾಮ್‌ಸಂ್‌, ಮೊಟೊ, ಬೋಟ್‌, ಸೋನಿ, ಆಲೆನ್‌ ಸೋಲಿ, ಲೈಫ್‌ಸ್ಟೈಲ್‌, ಟೈಟಾನ್‌, ಫೋಸಿಲ್‌, ಪುಮಾ, ಟಾಟಾ ಹಾಗೂ ಡಾಬರ್‌ ಸೇರಿದಂತೆ 400ಕ್ಕೂ ಹೆಚ್ಚು ಬ್ರಾಂಡ್‌ಗಳಿಂದ ಹೊಸ ಲಾಂಚ್‌ಗಳಾಗಲಿದ್ದು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ 2000 ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಲಾಂಚ್‌ ಆಗಲಿವೆ.

80% ರವರೆಗೆ ರಿಯಾಯಿತಿ: ಈ ಸೇಲ್‌ನಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಎಲೆಕ್ಟ್ರಾನಿಕ್ಸ್ ಮತ್ತು ಇತರೆ ಟೂಲ್ಸ್‌ಗಳ ಮೇಲೆ 75% ವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ ಹಾಗೆಯೇ ಫ್ಯಾಶನ್ ವಸ್ತುಗಳ ಮೇಲೆ 80% ವರೆಗೆ ರಿಯಾಯಿತಿ ನೀಡಲಾಗುತ್ತಿದ್ದು, ಸ್ಮಾರ್ಟ್ ಟಿವಿಗಳು ಮತ್ತು ಇತರೆ ಉಪಕರಣಗಳ ಮೇಲೆ 60% ವರೆಗೆ ಡಿಸ್ಕೌಂಟ್‌ ನೀಡಲಾಗುತ್ತದೆ.

ಅಮೆಜಾನ್ ಪ್ರೈಮ್ ಡೇ ಸೇಲ್‌ಗೆ ದಿನಾಂಕ ಫಿಕ್ಸ್‌:ಗ್ಯಾಜೆಟ್‌ಗಳಿಗೆ 80% ಡಿಸ್ಕೌಂಟ್‌

ಈ ನಡುವೆ ಅಮೆಜಾನ್ ಪೇ ಸಂಬಂಧ ಅಮೆಜಾನ್‌ ಮಾಹಿತಿ ನೀಡಿದ್ದು, ಹೋಟೆಲ್‌ಗಳು ಮತ್ತು ಅಂತರಾಷ್ಟ್ರೀಯ ವಿಮಾನಗಳ ಬುಕಿಂಗ್ ಮಾಡಬಹುದು ಎಂದು ತಿಳಿಸಿದೆ. ಹಾಗೆಯೇ ಇಂದಿನಿಂದ ಪ್ರೈಮ್ ಸದಸ್ಯರು ಎಲ್ಲಾ ಫ್ಲೈಟ್‌ಗಳು ಮತ್ತು ಹೋಟೆಲ್‌ಗಳು, ಹೋಂಸ್ಟೇಗಳು, ವಿಲ್ಲಾಗಳು ಮತ್ತು ಹೆಚ್ಚಿನವುಗಳಲ್ಲಿ ವಿಶೇಷ ಬೆಲೆಗಳಿಗೆ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳು: ಇದರೊಂದಿಗೆ ಈ ಸೇಲ್‌ನಲ್ಲಿ ಖರೀದಿದಾರರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಲ್ಲಿ ಮತ್ತಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು, ಇದರೊಂದಿಗೆ ಇಎಮ್‌ಐ ಮೂಲಕ ಖರೀದಿ ಮಾಡುವ ಗ್ರಾಹಕರು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು ಎಂದು ಅಮೆಜಾನ್ ಮಾಹಿತಿ ನೀಡಿದೆ.

Best Mobiles in India

English summary
Amazon has announced its biggest sale of 2023, the Amazon Prime Days 2023 sale, where Amazon Prime members can avail huge discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+