Home
ಸುದ್ದಿಜಾಲ

Amazon, Flipkart ದೀಪಾವಳಿ ಸೇಲ್‌; ಡಿಸ್ಕೌಂಟ್‌ನಲ್ಲಿ ಫೋನ್‌ ಖರೀದಿಸಲು ಸಕಾಲ!

ದೀಪಾವಳಿ ಹಬ್ಬದ ಪ್ರಯುಕ್ತ ಇ-ಕಾಮರ್ಸ್‌ ದೈತ್ಯ ತಾಣಗಳಾದ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್ ಪ್ಲಾಟ್‌ಫಾರ್ಮ್ ಗಳು ಭರ್ಜರಿ ಡಿಸ್ಕೌಂಟ್ ಕೊಡುಗೆಗಳನ್ನು ಘೋಷಿಸಿವೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ನೀಡಿದ್ದು, ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಸುಮಾರು 40,000 ರೂ. ವರೆಗೂ ಬಿಗ್ ರಿಯಾಯಿತಿ ತಿಳಿಸಿವೆ.

ಅಮೆಜಾನ್

ಹೌದು, ಜನಪ್ರಿಯ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ತಾಣಗಳು ದೀಪಾವಳಿ ಹಬ್ಬದ ಪ್ರಯುಕ್ತ ಈ ವಿಶೇಷ ಸೇಲ್‌ಗಳನ್ನು ಆಯೋಜಿಸಿವೆ. ಹಬ್ಬದ ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್, ಆಪಲ್, ಶಿಯೋಮಿ, ಮೊಟೊರೊಲಾ ಕಂಪನಿಗಳ ಆಯ್ದ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ರಿಯಾಯಿತಿ ಸಿಗಲಿವೆ. ಹಾಗಾದರೇ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್‌ನಲ್ಲಿ ಯಾವೆಲ್ಲಾ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌ ನೀಡಲಾಗಿದೆ ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮೊಟೊರೊಲಾ ರೇಜರ್ (2019)

ಮೊಟೊರೊಲಾ ರೇಜರ್ (2019)

ಮೊಟೊರೊಲಾ ರೇಜರ್ (2019) ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 84,999 ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಫೋಲ್ಡಬಲ್ ಫೋನ್ ಭಾರತದಲ್ಲಿ 1,24,999 ರೂಗಳಿಗೆ ಬಿಡುಗಡೆ ಮಾಡಲಾಯಿತು. ಇದರರ್ಥ ನೀವು ಈ ಮೊಟೊರೊಲಾ ಫೋನ್‌ನಲ್ಲಿ 40,000 ರೂ.ಗಳ ರಿಯಾಯಿತಿ ಪಡೆಯುತ್ತಿದ್ದೀರಿ. 14,850 ರೂ.ವರೆಗೆ ವಿನಿಮಯ ಕೊಡುಗೆಯೂ ಇದೆ, ಮತ್ತು ತಿಂಗಳಿಗೆ 3,542 ರೂಗಳ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಯೂ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20+

ಸ್ಯಾಮ್‌ಸಂಗ್ ಗ್ಯಾಲಕ್ಸಿ S20+

ಸ್ಯಾಮ್‌ಸಂಗ್ ಗ್ಯಾಲಕ್ಸಿ S20+ ಫೋನ್ 49,999 ರೂ.ಗೆ ಕಡಿಮೆ ದರದಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಫೋನ್‌ನ ವಿನಿಮಯಕ್ಕೆ 14,850 ರೂ.ಗಳವರೆಗೆ ರಿಯಾಯಿತಿ ನೀಡಲಿದೆ. ಈ ಫೋನ್ 8GB RAM + 128GB ಮತ್ತು 12GB RAM + 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+

ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಫೋನ್‌ ಅನ್ನು 59,999 ರೂ.ಗೆ ಕಡಿಮೆ ಪಟ್ಟಿ ಮಾಡಲಾಗಿದೆ. ಈ ವೇಳೆ ಫಿಪ್‌ಕಾರ್ಟ್ ನಿಮ್ಮ ಫೋನ್ ವಿನಿಮಯದ ಮೇಲೆ ಗ್ರಾಹಕರಿಗೆ 14,850 ರೂ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ನ ಬೆಲೆಯನ್ನು ಮತ್ತಷ್ಟು ಕಡಿಮೆ ಆಗಲಿದೆ.

ಐಫೋನ್‌ SE 2020

ಐಫೋನ್‌ SE 2020

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ, ಐಫೋನ್ SE 2020 32,999ರೂ.ಗಳಿಗೆ ಲಭ್ಯವಿದೆ. ಈ ಐಫೋನ್‌ಗೆ 14,350 ರೂ.ಗಳವರೆಗೆ ವಿನಿಮಯ ಕೊಡುಗೆ ಲಭ್ಯವಾಗಲಿದೆ. EMI ಆಯ್ಕೆಗಳು ಮತ್ತು ಕೆಲವು ಬ್ಯಾಂಕ್ ಕಾರ್ಡ್ ಕೊಡುಗೆಗಳೂ ಇವೆ.

ಆಸೂಸ್‌ ROG 3

ಆಸೂಸ್‌ ROG 3

ಭಾರತದಲ್ಲಿ ಆಸೂಸ್‌ ROG 3 ಬೆಲೆ ಇಳಿಕೆ ಕಂಡಿದ್ದು, ಬೇಸ್‌ ವೇರಿಯಂಟ್‌ 46,999 ರೂ.ಗೆ ನಿಗದಿಪಡಿಸಲಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 865 ಪ್ಲಸ್ 5 ಜಿ SoC, 144Hz ರಿಫ್ರೆಶ್ ದರವನ್ನು ಹೊಂದಿರುವ 6.59-ಇಂಚಿನ AMOLED ಡಿಸ್ಪ್ಲೇ ಮತ್ತು HDR10 + ಬೆಂಬಲವನ್ನು ಪಡೆಯುತ್ತೀರಿ. ಇದು 6,000mAh ಬ್ಯಾಟರಿಯನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಗ್ಯಾಲಕ್ಸಿ M51 ಪ್ರಸ್ತುತ ದೀಪಾವಳಿ ಸೇಲ್‌ನಲ್ಲಿ 22,499 ರೂ.ಗಳಿಗೆ ಲಭ್ಯವಾಗಲಿದೆ. ಅಮೆಜಾನ್‌ನಲ್ಲಿ ನೀವು 2,500 ರೂ.ಗಳ ರಿಯಾಯಿತಿ ಪಡೆಯುತ್ತಿರುವಿರಿ. ಸಿಟಿ, ಕೊಟಾಕ್ ಬ್ಯಾಂಕ್, ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳಿಗೆ ಫ್ಲಾಟ್ 3,000 ರೂ. ಸಿಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ AMOLED ಪ್ಯಾನಲ್, ಸ್ನಾಪ್‌ಡ್ರಾಗನ್ 730 ಜಿ SoC, ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿದೆ.

Best Mobiles in India

English summary
Diwali 2020 sale, e-commerce sites like Amazon and Flipkart are offering up to Rs 40,000 discount on a bunch of phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+