ಐಫೋನ್ XR ಖರೀದಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿಲ್ಲ!

|

ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ ಅತೀ ಅಗತ್ಯವಾದ ಡಿವೈಸ್‌ ಆಗಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ತರಹೇವಾರಿ ಆಯ್ಕೆಗಳಿವೆ. ಬಜೆಟ್‌ ಬೆಲೆಯಲ್ಲಿಯೇ ಅತ್ಯುತ್ತಮ ಫೀಚರ್ಸ್‌ ಹೊಂದಿರುವ ಬ್ರ್ಯಾಂಡೆಡ್‌ ಸ್ಮಾರ್ಟ್‌ಫೋನ್‌ಗಳನ್ನು ಸೆಲೆಕ್ಟ್ ಮಾಡುತ್ತಾರೆ. ಆದ್ರೆ ಕೇಲವರಿಗೆ ಐಫೋನ್‌ ಮೇಲೆ ಪ್ರೀತಿ. ಖರೀದಿಸಿದರೇ ಐಫೋನ್‌ ಖರೀದಿಸಬೇಕು ಎನ್ನುತ್ತಿರುತ್ತಾರೆ. ಹಾಗೇನಾದರೂ ನಿಮಗೂ ಐಫೋನ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಇದೇ ಅಗಷ್ಟ್‌ 11ರ ಒಳಗೆ ಖರೀದಿಸಿಬಿಡಿ.

ಐಫೋನ್ XR ಖರೀದಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿಲ್ಲ!

ಹೌದು, ಜನಪ್ರಿಯ ಅಮೆಜಾನ್ ಇ ಕಾಮರ್ಸ್‌ ಜಾಲತಾಣವು ಸ್ವಾತಂತ್ರ್ಯ ದಿನದ ಅಂಗವಾಗಿ ನಾಲ್ಕು ದಿನಗಳ 'ಫ್ರೀಡಂ ಸೇಲ್' ಮೇಳವನ್ನು ಆಯೋಜಿಸಿದೆ. ಈ ಮೇಳವು ಇದೇ ಅಗಷ್ಟ್‌ 8ರಂದು ಆರಂಭವಾಗಿದ್ದು, ಅಗಷ್ಟ್‌ 11ರ ವರೆಗೂ ನಡೆಯಲಿದೆ. ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಗ್ಯಾಜೆಟ್‌ ಉತ್ಪನ್ನಗಳಿಗೆ ಭರ್ಜರಿ ಆಫರ್‌ಗಳಿದ್ದು, ಹಾಗೆಯೇ ಆಪಲ್ ಐಫೋನ್‌ XR ಮಾಡೆಲ್‌ಗೂ ಬಂಪರ್ ಕೊಡುಗೆ ನೀಡಿದೆ.

ಐಫೋನ್ XR ಖರೀದಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಇನ್ನೊಂದಿಲ್ಲ!

64GB ಸ್ಟೋರೇಜ್ ಸಾಮರ್ಥ್ಯದ ಆಪಲ್‌ XR ಐಫೋನ್ ಈ ಮೊದಲು 76,900ರೂ ಬೆಲೆಯನ್ನು ಹೊಂದಿದ್ದು, ಆದ್ರೆ ಈಗ ನಡೆಯುತ್ತಿರುವ ಫ್ರೀಡಂ ಸೇಲ್'ನ ಆಫರ್‌ನಲ್ಲಿ 51,999ರೂ.ಗಳಿಗೆ ಲಭ್ಯವಾಗುತ್ತಿದೆ. ಹಾಗೆಯೇ ಐಫೋನ್ 128GB ವೇರಿಯಂಟ್‌ 56,999ರೂ.ಗಳಿಗೆ ಸೀಗುತ್ತಿದೆ. ಹಾಗಾದರೇ ಆಪಲ್ ಐಫೋನ್ XR ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!ಓದಿರಿ : ಕಡಿಮೆ ಬೆಲೆಗೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಟಿವಿ ಲಾಂಚ್!

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಐಫೋನ್ XR ಫೋನ್ 1792x828 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 326 ppi ಆಗಿದೆ. ಡಿಸ್‌ಪ್ಲೇಯ ಕಾಂಟ್ರಾಸ್ಟ್‍ ಅನುಪಾತವು 1400:1ರಷ್ಟಾಗಿದ್ದು, ಡಿಸ್‌ಪ್ಲೇಯು 150.9 x 75.7 x 8.3 mm ಸುತ್ತಳತೆಯನ್ನು ಪಡೆದುಕೊಂಡಿದೆ. 194 ಗ್ರಾಂ ತೂಕವನ್ನು ಹೊಂದಿದೆ.

ಪ್ರೊಸೆಸರ್ ಶಕ್ತಿ

ಪ್ರೊಸೆಸರ್ ಶಕ್ತಿ

ಆಪಲ್‌ ಐಫೋನ್ XR ಫೋನ್ Neural ಇಂಚಿನ್ ಜೊತೆಗೆ A12 ಬೈಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಐಫೋನ್‌ಗೆ iOS 12 ಆಪರೇಟಿಂಗ್ ಸಿಸ್ಟಮ್ ಹೆಚ್ಚಿನ ಬೆಂಬಲ ಒದಗಿಸಿದೆ. 64GB, 128GB ಮತ್ತು 256GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಆಯ್ಕೆಗಳನ್ನು ಹೊಂದಿದೆ. ಫೇಶಿಯಲ್ ರಿಕಾಗ್ನೈಸೇಶನ್ ಸೌಲಭ್ಯವನ್ನು ಪಡೆದುಕೊಂಡಿದೆ.

ಓದಿರಿ : ಪೇಟಿಎಮ್‌ ಆಪ್‌ನಲ್ಲಿ ಹಣ ವರ್ಗಾವಣೆ ಈಗ ಇನ್ನಷ್ಟು ಸುಲಭ!ಓದಿರಿ : ಪೇಟಿಎಮ್‌ ಆಪ್‌ನಲ್ಲಿ ಹಣ ವರ್ಗಾವಣೆ ಈಗ ಇನ್ನಷ್ಟು ಸುಲಭ!

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಐಫೋನ್ XR ಫೋನ್ ƒ/1.8 ಅಪರ್ಚರ್‌ ಸಾಮರ್ಥ್ಯದಲ್ಲಿ 12ಎಂಪಿ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾವು 5x ಡಿಜಿಟಲ್ ಝೂಮ್‌ ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 7ಎಂಪಿ ಸೆನ್ಸಾರ್‌ನ ಕ್ಯಾಮೆರಾ ನೀಡಲಾಗಿದ್ದು, 1080p HD ರೆಕಾರ್ಡಿಂಗ್ ಬೆಂಬಲಿಸಲಿದೆ. ಜೊತೆಗೆ ಹೈಬ್ರಿಡ್‌ IR ಫಿಲ್ಟರ್, ಆಟೋಫೋಕಸ್‌, ಎಚ್‌ಆರ್‌ಡಿ, ಸ್ಲೋ ಮೋಷನ್, ಪೋರ್ಟ್‌ರೇಟ್‌ ಮೋಡ್ ಆಯ್ಕೆಗಳು ಇವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಐಫೋನ್‌ 2,942mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ವಾಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದು, ಕೇವಲ 30ನಿಮಿಷದಲ್ಲಿ ಶೇ.50% ಬ್ಯಾಟರಿ ಪೂರ್ಣವಾಗಲಿದೆ. ಇಂಟರ್ನೆಟ್‌ ಬಳಕೆಯಲ್ಲಿ 15 ಗಂಟೆಗಳ ಬ್ಯಾಟರಿ ಬಾಳಿಕೆ ಒದಗಿಸಲಿದ್ದು, ವಿಡಿಯೊ ಪ್ಲೇಬ್ಯಾಕ್‌ನಲ್ಲಿ ಮಾಡಿದರೇ 16 ಗಂಟೆಗಳ ಬ್ಯಾಟರಿ ಶಕ್ತಿ ನೀಡಲಿದೆ.

ಓದಿರಿ : ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?ಓದಿರಿ : ಯೂಟ್ಯೂಬ್‌ನಲ್ಲಿರುವ ಈ ಸ್ಪೆಷಲ್ ಆಯ್ಕೆಗಳ ಬಗ್ಗೆ ನಿಮಗೆ ಗೊತ್ತಾ?

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಈ ಡಿವೈಸ್‌ IP67 ಸಾಮರ್ಥ್ಯದ ವಾಟರ್ ರೆಜಿಸ್ಟಂಟ್‌ ಸೌಲಬ್ಯವನ್ನು ಪಡೆದಿದ್ದು, ಫಿಂಗರ್‌ಪ್ರಿಂಟ್, ಫೇಸ್‌ಐಡಿ, ಬ್ಲೂಟೂತ್, ವೈಫೈ ಆಯ್ಕೆಗಳನ್ನು ಹೊಂದಿದೆ. ಆಂಬಿಯಂಟ್ ಲೈಟ್‌ ಸೆನ್ಸಾರ್, ಬಾರೊಮೀಟರ್, ಪ್ರೊಕ್ಸಿಮೀಟಿ ಸೆನ್ಸಾರ್‌, ವಾಯಿಸ್‌ ಓವರ್, ಸಿರಿ ವಾಯಿಸ್‌ ಅಸಿಸ್ಟಂಟ್, ಅಸಿಸ್ಟಿವ್ ಟಚ್, ಸ್ಪೀಕ್ ಸ್ಕ್ರೀನ್, ಸ್ವೀಚ್ ಕಂಟ್ರೋಲ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಓದಿರಿ : ಶಿಯೋಮಿ ಸ್ಮಾರ್ಟ್‌ಟಿವಿ ಸೇರಲಿದೆ 'ಜಿಯೋ ಸಿನಿಮಾ' ಆಪ್‌!.ಮನರಂಜನೆ ಡಬಲ್!ಓದಿರಿ : ಶಿಯೋಮಿ ಸ್ಮಾರ್ಟ್‌ಟಿವಿ ಸೇರಲಿದೆ 'ಜಿಯೋ ಸಿನಿಮಾ' ಆಪ್‌!.ಮನರಂಜನೆ ಡಬಲ್!

Best Mobiles in India

English summary
The 64GB variant of the Apple iPhone XR is available for Rs 51,999 on Amazon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X