ಭರ್ಜರಿ ಡಿಸ್ಕೌಂಟ್‌ನಲ್ಲಿ ಐಫೋನ್ 11 ಖರೀದಿಸಲು ಇದುವೇ ಸಕಾಲ!

|

ಸದಾ ಒಂದಿಲ್ಲೊಂದು ಆಫರ್‌ಗಳಿಂದ ಗುರುತಿಸಿಕೊಂಡಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್ ಆನ್‌ಲೈನ್‌ ಶಾಪಿಂಗ್ ಪ್ರಿಯರ ಫೇವರೇಟ್‌ ತಾಣವೆನಿಸಿದೆ. ಪ್ರೈಮ್‌ ಡೇ ಸೇಲ್ ಮೇಳವನ್ನು ಆಯೋಜಿಸಿ ಗ್ರಾಹಕರ ಗಮನ ಸೆಳೆದಿದ್ದ ಅಮೆಜಾನ್ ತಾಣವು ಈಗ 'ಫ್ರೀಡಂ ಸೇಲ್' ಮೇಳವನ್ನು ಆಯೋಜಿಸಿ ಮತ್ತೆ ಗ್ರಾಹಕರ ಆಕರ್ಷಿಸಿದೆ. ಈ ಸೇಲ್‌ ಮೇಳದಲ್ಲಿ ಐಫೋನ್‌ಗಳಿಗೆ ಭಾರಿ ಡಿಸ್ಕೌಂಟ್‌ ನೀಡಲಾಗಿದೆ.

ಕಾಮರ್ಸ್

ಹೌದು, ಅಮೆಜಾನ್ ಇ-ಕಾಮರ್ಸ್ ತಾಣವು ಫ್ರೀಡಂ ಸೇಲ್ ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಈ ಮೇಳವು ಇದೇ ಅಗಷ್ಟ 8 ರಿಂದ ಶುರುವಾಗಿದ್ದು, ಅಗಷ್ಟ 11ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ ಮೇಳದಲ್ಲಿ ಆಪಲ್‌ ಕಂಪೆನಿಯ ನೂತನ ಐಫೋನ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಮುಖ್ಯವಾಗಿ ಐಫೋನ್ 11 ಸ್ಮಾರ್ಟ್‌ಫೋನ್‌ ಭಾರಿ ಡಿಸ್ಕೌಂಟ್‌ ಲಭ್ಯವಾಗಿದೆ. ಹಾಗಾದರೇ ಅಮೆಜಾನ್ ಫ್ರೀಡಂ ಸೇಲ್ ಮೇಳದಲ್ಲಿ ಭಾರಿ ಡಿಸ್ಕೌಂಟ್ ಪಡೆಯುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಆಪಲ್

ಅಮೆಜಾನ್‌ನಲ್ಲಿ ಈ ಸೇಲ್ ಮೇಳದಲ್ಲಿ ಆಪಲ್ ಐಫೋನ್ 11 (64GB, ಬ್ಲ್ಯಾಕ್) 62,900ರೂ.ಗೆ ಲಭ್ಯ. ಇದರ ಬೆಲೆಯು 68,300ರೂ.ಗಳಾಗಿತ್ತು. ಇನ್ನು 128GB ವೇರಿಯಂಟ್‌ ಐಫೋನ್ 11 68,900ರೂ. ಗೆ ಪಡೆಯಬಹುದು. ಹಾಗೆಯೇ 256GB ವೇರಿಯಂಟ್‌ 84,100ರೂ.ಗಳಿಗೆ ಸಿಗಲಿದೆ. ಎಸ್‌ಬಿಐ ಡೆಬಿಟ್ ಕಾರ್ಡ್‌ ಹಾಗೂ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೇ ಶೇ.10 ಪರ್ಸೆಂಟ್ ಡಿಸ್ಕೌಂಟ್‌ ಬೆಲೆಯಲ್ಲಿ ಸಿಗಲಿದೆ. ಹಾಗಾದರೇ ಐಫೋನ್ 11 ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡಿರಿ.

ಸಂಸ್ಥೆಯು

ಆಪಲ್ ಸಂಸ್ಥೆಯು ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

ಐಫೋನ್‌

ಹಾಗೆಯೇ ಅಮೆಜಾನ್ ಫ್ರೀಡಂ ಸೇಲ್ ಮೇಳದಲ್ಲಿ ಆಪಲ್‌ನ ಐಫೋನ್‌ 8 ಪ್ಲಸ್‌ ಸಹ ಡಿಸ್ಕೌಂಟ್ ಪಡೆದಿದೆ. 64GB ಆಂತರಿಕ ಸ್ಟೋರೇಜ್‌ನ ವೇರಿಯಂಟ್‌ ಫೋನ್ ಇದೀಗ 39,900 ರೂ.ಗಳಿಗೆ ಸಿಗಲಿದೆ. ಐಫೋನ್ 8 ಪ್ಲಸ್ ಸಹ ಎಸ್‌ಬಿಐ ಕ್ರೆಡಿಟ್ ಕಾರ್ಡ್ ರಿಯಾಯಿತಿ ಯೋಜನೆಗೆ ಅರ್ಹವಾಗಿದೆ. ವಿನಿಮಯದ ಮೂಲಕ, ನೀವು ಐಫೋನ್ 8 ಪ್ಲಸ್‌ನಲ್ಲಿ, 11,200 ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

Best Mobiles in India

English summary
Amazon Freedom Sale is live with a big discount on Apple’s iPhone 11.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X