Home
ಸುದ್ದಿಜಾಲ

ಈ ಸ್ಮಾರ್ಟ್ ಡೋರ್ ಲಾಕ್‌ಗಳಿಂದ ನಿಮ್ಮ ಮನೆ ಇನ್ನಷ್ಟು ಸೇಫ್‌; ಅಮೆಜಾನ್‌ನಲ್ಲಿ ಭರ್ಜರಿ ಆಫರ್‌ !

ಮನೆ ಹಾಗೂ ಆಫೀಸ್‌ಗಳಲ್ಲಿ ಸಿಸಿಟಿವಿ ಹಾಗೂ ಇನ್ನಿತರೆ ಡಿವೈಸ್‌ಗಳು ಹೆಚ್ಚಿನ ಭದ್ರತೆಯನ್ನು ಖಾತ್ರಿಪಡಿಸುತ್ತವೆ. ಆದರೂ ಸಹ ಕೆಲವು ಭಾರಿ ಇವುಗಳಿಗೂ ಮೋಸ ಮಾಡಿ ಮನೆಗೆ ನುಗ್ಗುವ ಕಳ್ಳರು ಬೇಕಾದದ್ದನ್ನು ದೋಚಿಕೊಂಡು ಹೋಗುತ್ತಾರೆ. ಆದರೆ, ಈ ರೀತಿಯ ಹೊಸ ಸ್ಮಾರ್ಟ್‌ ಡಿವೈಸ್‌ ಬಳಕೆಯಿಂದ ನಿಮ್ಮ ಮನೆ ಹಾಗೂ ಆಫೀಸ್‌ನಲ್ಲಿ ಮತ್ತಷ್ಟು ಭದ್ರತೆ ಪಡೆಯಬಹುದಾಗಿದೆ.

ಹೌದು, ಸ್ಮಾರ್ಟ್ ಡಿವೈಸ್‌ಗಳು ಇಂದು ಎಲ್ಲಾ ವಲಯದಲ್ಲೂ ಬಳಕೆ ಆಗುತ್ತಿವೆ. ಈ ಹಿಂದೆ ಮನೆಗೆ ಸಾಂಪ್ರದಾಯಿಕ ಬೀಗ ಹಾಕಲಾಗುತ್ತಿತ್ತು. ಕಾಲಾನಂತರದಲ್ಲಿ ಇದರಲ್ಲೂ ಹೊಸ ಟೆಕ್ನಾಲಜಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಮೂಲಕ ಬಳಕೆದಾರರು ಉತ್ತಮ ಅನುಭವ ಪಡೆಯುತ್ತಿದ್ದಾರೆ. ಇದರ ಭಾಗವಾಗಿಯೇ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಸ್ಮಾರ್ಟ್ ಡೋರ್ ಲಾಕ್‌ಗಳಿಗೆ(smart door locks) ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ. ಅದೂ ಸಹ ಇವು 10,000ರೂ.ಗಳ ಒಳಗೆ ಲಭ್ಯ ಆಗುತ್ತಿವೆ. ಹಾಗಿದ್ರೆ, ಬನ್ನಿ ಇವುಗಳ ಸಂಪೂರ್ಣ ವಿವರ ತಿಳಿಯೋಣ.

ಈ ಸ್ಮಾರ್ಟ್ ಡೋರ್ ಲಾಕ್‌ಗಳಿಂದ ನಿಮ್ಮ ಮನೆ ಇನ್ನಷ್ಟು ಸೇಫ್‌...

ಗೋದ್ರೇಜ್ ಅಡ್ವಾಂಟಿಸ್: ಗೋದ್ರೇಜ್ ಲಾಕ್‌ನ ಅಮೆಜಾನ್‌ನಲ್ಲಿ 8,230ರೂ.ಗಳ ಬೆಲೆ ಪಡೆದುಕೊಂಡಿದೆ. ಈ ಡಿವೈಸ್‌ ಅನ್ನು ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದರೆ 1500 ರೂಪಾಯಿ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ ಕಡಿಮೆ ಇಎಮ್‌ಐ ಆಯ್ಕೆಗಳನ್ನೂ ಸಹ ಪಡೆದಿದೆ. ಇದು ಟಚ್ ಸ್ಕ್ರೀನ್ ಆಯ್ಕೆ ಹೊಂದಿದ್ದು, ಈ ಲಾಕ್ ಅನ್ನು ಪಿನ್ ಅಥವಾ RFID ಮೂಲಕ ಬಳಕೆ ಮಾಡಬಹುದು.

LAVNA ಸ್ಮಾರ್ಟ್ ಡೋರ್ ಲಾಕ್: ಈ ಸ್ಮಾರ್ಟ್‌ ಡಿವೈಸ್‌ 8,167ರೂ.ಗಳ ಬೆಲೆ ಹೊಂದಿದೆ. ಈ ಡಿವೈಸ್‌ ಗೂ ಸಹ ಬ್ಯಾಂಕ್‌ ಆಫರ್‌ ನೀಡಲಾಗಿದ್ದು, 1,750ರೂ.ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ 367ರೂ.ಗಳ ನೋ-ಕಾಸ್ಟ್ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ. ಈ ವಿಶೇಷ ಡಿವೈಸ್‌ ಫಿಂಗರ್‌ಪ್ರಿಂಟ್ ಬೆಂಬಲ ಪಡೆದಿದ್ದು, ಬಳಕೆದಾರರ ಬೆರಳಿನಿಂದ ಓಪನ್‌ ಮಾಡಬಹುದು. ಇದರೊಂದಿಗೆ OTP ಯನ್ನೂ ಸಹ ಬಳಸಿ ಲಾಕ್ ಅನ್ನು ತೆರೆಯಬಹುದು.

ವೇಲೆನ್ಸಿಯಾ-ಫಿಲಿಪ್ ಸ್ಮಾರ್ಟ್ ಡೋರ್: ಈ ಸ್ಮಾರ್ಟ್ ಡೋರ್ ಲಾಕ್ 7,628ರೂ.ಗಳ ಬೆಲೆ ಹೊಂದಿದೆ. ಈ ಲಾಕ್ ಅನ್ನು ನೋ ಕಾಸ್ಟ್‌ ಇಎಮ್‌ಐ ಮೂಲಕ ಖರೀದಿ ಮಾಡಲು ಸಹ ಅನುವು ಮಾಡಿಕೊಡಲಾಗಿದೆ. ಅಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ನ ಕಾರ್ಡ್‌ಗಳ ಮೇಲೆ 1,500ರೂ.ವರೆಗೆ ಬ್ಯಾಂಕ್ ರಿಯಾಯಿತಿ ಲಭ್ಯ ಇರಲಿದೆ. ಇದು ಫಿಂಗರ್‌ಪ್ರಿಂಟ್ ಮೂಲಕ ಕೆಲಸ ಮಾಡಲಿದ್ದು, ಪಿನ್ ಅಥವಾ RFID ಕಾರ್ಡ್ ಮೂಲಕ ಅನ್‌ಲಾಕ್ ಮಾಡಬಹುದು. ಹೆಚ್ಚುವರಿಯಾಗಿ, ಡಬಲ್ ಸುರಕ್ಷತೆ ಲಾಕ್ ಬೆಂಬಲ ಆಯ್ಕೆ ಸಹ ಇದೆ.

ಓಝೋನ್ ಸ್ಮಾರ್ಟ್ ಮೇನ್‌ ಡೋರ್‌: ಈ ಡಿವೈಸ್‌ ಈ ಮೇಲೆ ತಿಳಿಸಿದ ಎಲ್ಲಾ ಡಿವೈಸ್‌ಗಿಂತ ಭಿನ್ನ ಫೀಚರ್ಸ್‌ ಪಡೆದಿಕೊಂಡಿದೆ. ಇದರ ಬೆಲೆ 9,600ರೂ.ಗಳ ಬೆಲೆ ಹೊಂದಿದೆ. ಜೊತೆಗೆ ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 1,250ರೂ.ಗಳ ರಿಯಾಯಿತಿ ಲಭ್ಯವಾಗಲಿದೆ. ಇಷ್ಟು ಮಾತ್ರವಲ್ಲದೆ 432ರೂ.ಗಳ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ.

ಈ ಸ್ಮಾರ್ಟ್ ಡೋರ್ ಲಾಕ್‌ಗಳಿಂದ ನಿಮ್ಮ ಮನೆ ಇನ್ನಷ್ಟು ಸೇಫ್‌...

ಈ ಸ್ಮಾರ್ಟ್ ಡೋರ್ ಲಾಕ್‌ ಪಿನ್‌ನಿಂದ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ವರೆಗೆ ಎಲ್ಲವನ್ನೂ ಒಳಗೊಂಡಿದೆ. ಇದು ಗೌಪ್ಯತೆ ಲಾಕ್ ಮತ್ತು ಸ್ವಯಂ ಸುರಕ್ಷತೆಯನ್ನು ಬೆಂಬಲಿಸಲಿದ್ದು, ನಾಲ್ಕು ಬಾರಿ ತಪ್ಪಾದ ಪಾಸ್ವರ್ಡ್ ಅನ್ನು ನಮೂದಿಸಿದಾಗ ಧ್ವನಿಸುವ ಎಚ್ಚರಿಕೆಯನ್ನು ನೀಡಲಿದೆ. ಈ ಮೂಲಕ ಅನಾಮಿಕ ವ್ಯಕ್ತಿಗಳು ಯಾರಾದರೂ ನಿಮ್ಮ ಮನೆಯ ಡೋರ್‌ ಓಪನ್‌ ಮಾಡಲು ಮುಂದಾದಾಗ ತಕ್ಷಣವೇ ಎಚ್ಚೆತ್ತುಕೊಳ್ಳಬಹುದು.

Best Mobiles in India

English summary
Amazon, the leading e-commerce site, offers huge discounts on smart door locks. That too these are becoming available within Rs 10,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+