Home
ಸುದ್ದಿಜಾಲ

ಇಂದು ಅಮೆಜಾನ್‌ ಸೇಲ್‌ನ ಕಡೆಯ ದಿನ; ಈ ಫೋನ್‌ಗಳಿಗೆ ಬಂಪರ್ ಕೊಡುಗೆ!

ಇ-ಕಾಮರ್ಸ್‌ ದಿಗ್ಗಜ ಅಮೆಜಾನ್ ತಾಣವು ಒಂದಿಲ್ಲೊಂದು ವಿಶೇಷ ಸೇಲ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತ ಸಾಗಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ 'ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್' ಆಯೋಜಿಸಿದೆ. ಈ ಸೇಲ್ ಮೇಳವು ಆಗಷ್ಟ 5ರಿಂದ ಪ್ರಾರಂಭವಾಗಿದ್ದು, ಇಂದು (ಆಗಷ್ಟ 9ರಂದು) ಮುಕ್ತಾಯವಾಗಲಿದೆ. ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ವಾಚ್, ಸ್ಮಾರ್ಟ್‌ ಟಿವಿ ಸೇರಿದಂತೆ ಹಲವು ಗ್ಯಾಟ್ಜೆಟ್ಸ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. ಆಫರ್ ಇಂದು ಮುಗಿಯಲಿದ್ದು, ಹೀಗಾಗಿ ಡಿಸ್ಕೌಂಟ್‌ನಲ್ಲಿ ಫೋನ್‌ ಖರೀದಿಸುವವರಿಗೆ ಇಂದೇ ಕಡೆಯ ದಿನ.

ಪ್ಲಾಟ್‌ಫಾರ್ಮ್

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಇದೀಗ ಲೈವ್ ಆಗಿದೆ. ಐದು ದಿನಗಳ ಈ ಸೇಲ್ ಇಂದು ಮುಕ್ತಾಯವಾಗಲಿದೆ. ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಕಂಪನಿಯ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10% ಇನ್‌ಸ್ಟಂಟ್ ರಿಯಾಯಿತಿ ಲಭ್ಯವಾಗಲಿದೆ. ಈ ವಿಶೇಷ ಸೇಲ್‌ ಅನ್ನು ವಿಸ್ತರಿಸುವ ಸಾಧ್ಯತೆಗಳು ಇವೆ. ಹಾಗಾದರೇ ಅಮೆಜಾನ್ ಈ ವಿಶೇಷ ಸೇಲ್ ನಲ್ಲಿ ಭಾರೀ ರಿಯಾಯಿತಿ ಪಡೆದ ಸ್ಯಾಮ್‌ಸಂಗ್ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 11 ಕೊಡುಗೆ

ಐಫೋನ್ 11 ಕೊಡುಗೆ

ಆಪಲ್ ಐಫೋನ್ 11 49,999ರೂ. ಗೆ ಲಭ್ಯವಾಗಲಿದೆ. ಈ ವಾರ ಭಾರತದಲ್ಲಿ ಅಮೆಜಾನ್‌ನ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2021 ಮಾರಾಟದಲ್ಲಿ 49,999 (ಇದರ ಎಮ್‌ಆರ್‌ಪಿ 54,900ರೂ) ಆಗಿದೆ. ಅಮೆಜಾನ್‌ನ ಸೇಲ್‌ನಲ್ಲಿ ನೀವು ಪ್ರಮುಖ ಕ್ರೆಡಿಟ್ ಕಾರ್ಡ್ ಪೂರೈಕೆದಾರರೊಂದಿಗೆ ಲಭ್ಯವಿರುವ ಯಾವುದೇ ವೆಚ್ಚವಿಲ್ಲದ EMI ಪಾವತಿ ಆಯ್ಕೆಯನ್ನು ಕೂಡ ಆರಿಸಿಕೊಳ್ಳಬಹುದು.

ಐಫೋನ್ 12 ಆಫರ್

ಐಫೋನ್ 12 ಆಫರ್

ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಐಫೋನ್ 12 ಮೇಲೆ ರಿಯಾಯಿತಿ ನೀಡುತ್ತದೆ, ಪ್ರಸ್ತುತ 67,999ರೂ.ಗಳಿಗೆ ಲಭ್ಯ. (ಇದರ ಎಮ್‌ಆರ್‌ಪಿ 79,900ರೂ.) ಆಗಿದೆ. ಹಾಗೆಯೇ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ವಿನಿಮಯ ಮಾಡಿಕೊಂಡರೆ 13,400 ಹೆಚ್ಚುವರಿ ತ್ವರಿತ ರಿಯಾಯಿತಿ.

ಒನ್‌ಪ್ಲಸ್ 9 5ಜಿ ರಿಯಾಯಿತಿ

ಒನ್‌ಪ್ಲಸ್ 9 5ಜಿ ರಿಯಾಯಿತಿ

ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಮಾರಾಟವು ಒನ್‌ಪ್ಲಸ್ 9 5ಜಿ ಮೇಲೆ ನೇರ ರಿಯಾಯಿತಿ ನೀಡುತ್ತಿಲ್ಲ. ಆದರೆ ಚೆಕ್‌ಬಾಕ್ಸ್ ಆಧಾರಿತ ಕೂಪನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಚೆಕ್‌ಔಟ್‌ ವೇಳೆ 4,000ರೂ. ವರೆಗೂ ರಿಯಾಯಿತಿ ಪಡೆಯಬಹುದು. ಅಲ್ಲದೇ 13,400ರೂ.ಗಳ ವರೆಗೂ ಸ್ಮಾರ್ಟ್ ಫೋನ್ ವಿನಿಮಯ ಮಾಡಿಕೊಳ್ಳಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೆಚ್ಚುವರಿ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್ 20 (8GB, 256GB) ಪ್ರಸ್ತುತ ರಿಯಾಯಿತಿ ಪಡೆದಿದ್ದು, 54,999ರೂ.ಗಳ ಬೆಲೆಗೆ ಲಭ್ಯವಿದೆ. ಹಾಗೆಯೇ ಅಮೆಜಾನ್ ನೋ-ಕಾಸ್ಟ್ ಇಎಂಐ ಪಾವತಿ ಆಯ್ಕೆಯನ್ನು ನೀಡುತ್ತಿದೆ. ಇದರೊಂದಿಗೆ 13,400ರೂ. ವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ಪಡೆದಿದೆ. ಇನ್ನು ಈ ಫೋನ್ ಎಕ್ಸಿನೋಸ್ 990 SoC ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 64 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ನೊಂದಿಗೆ ಬರುತ್ತದೆ.

ನೋಕಿಯಾ ಜಿ 20 ಕೊಡುಗೆ

ನೋಕಿಯಾ ಜಿ 20 ಕೊಡುಗೆ

ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್‌ನಲ್ಲಿ ನೋಕಿಯಾ ಜಿ 20 ಅನ್ನು ಆಕರ್ಷಕ ರಿಯಾಯಿತಿ ಪಡೆದಿದ್ದು, 11,990ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಅಮೆಜಾನ್ 1000ರೂ . ಮೌಲ್ಯದ ಕೂಪನ್ ನೀಡುತ್ತಿದೆ. ಇನ್ನು ನೋಕಿಯಾ ಜಿ 20 ಫೋನ್ ದೊಡ್ಡ 6.5 ಇಂಚಿನ ಡಿಸ್ಪ್ಲೇ ಮತ್ತು 48 ಮೆಗಾ ಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ನೊಂದಿಗೆ ಬರುತ್ತದೆ.

Best Mobiles in India

English summary
Amazon Great Freedom Festival Sale 2021: Best Offers On These New Smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+