Home
ಸುದ್ದಿಜಾಲ

ನಾಳೆಯಿಂದ Amazon Great Freedom Festival Sale ಶುರು!..ಸಖತ್‌ ಆಫರ್‌!

ಇ ಕಾಮರ್ಸ್‌ ದೈತ್ಯ ಅಮೆಜಾನ್ ಒಂದಿಲ್ಲೊಂದು ಬೊಂಬಾಟ್‌ ಸೇಲ್‌ಗಳನ್ನು ಆಯೋಜಿಸುವ ಮೂಲಕ ಆನ್‌ಲೈನ್‌ ಶಾಪಿಂಗ್‌ ಗ್ರಾಹಕರನ್ನು ಸೆಳೆಯುತ್ತದೆ. ಅಮೆಜಾನ್ ಇದೀಗ ಆನ್‌ಲೈನ್ ಶಾಪಿಂಗ್ ಗ್ರಾಹಕರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ವಿಶೇಷ ಸೇಲ್‌ವೊಂದನ್ನು ಆಯೋಜಿಸಿದೆ. ಅದುವೇ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2024 (Amazon Great Freedom Festival Sale 2024). ಅಂದಹಾಗೆ ಈ ಮಾರಾಟವು ನಾಳೆಯಿಂದ ಅದ್ಧೂರಿಯಾಗಿ ಪ್ರಾರಂಭ ಆಗಲಿದ್ದು, ಗ್ರಾಹಕರು ಹುಬ್ಬೇರಿಸುವಂತಹ ಆಫರ್‌ಗಳು, ಕೊಡುಗೆಗಳು ಲಭ್ಯ ಆಗಲಿವೆ.

ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಅತ್ಯುತ್ತಮ ರಿಯಾಯಿತಿ ದರದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2024 (Amazon Great Freedom Festival Sale 2024) ಸೂಕ್ತ ಎನಿಸಲಿದೆ. ಅಮೆಜಾನ್ ಈ ಮಾರಾಟ ಮೇಳದಲ್ಲಿ ಕೆಲವು ಆಯ್ದ ಸ್ಮಾರ್ಟ್ ಫೋನ್ ಮತ್ತು ಇತರೆ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಲಭ್ಯ ಇರಲಿದೆ. ಹಾಗೆಯೇ ಸೇಲ್‌ ಸಮಯದಲ್ಲಿ ಅಮೆಜಾನ್ ಘೋಷಿಸದ ಬ್ಯಾಂಕ್ ಕೊಡುಗೆಗಳು ಕೂಡ ದೊರೆಯುತ್ತವೆ.

ನಾಳೆಯಿಂದ Amazon Great Freedom Festival Sale ಶುರು!..ಸಖತ್‌ ಆಫರ್‌!

ಅದರಲ್ಲಿಯೂ ಪ್ರಮುಖವಾಗಿ ಸ್ಯಾಮ್‌ಸಂಗ್, ರೆಡ್ಮಿ, ಶಿಯೋಮಿ, ರಿಯಲ್‌ಮಿ, ಪೊಕೊ, ಒಪ್ಪೋ, ಹಾನರ್‌, ಒನ್‌ಪ್ಲಸ್‌, ಐಕ್ಯೂ ಸೇರಿದಂತೆ ಇತರೆ ಮೊಬೈಲ್‌ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಿಗೂ ಆಕರ್ಷಕ ಡಿಸ್ಕೌಂಟ್‌ ಲಭ್ಯ ಆಗಲಿವೆ. ಹಾಗಾದರೇ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ Z9 ಲೈಟ್‌ 5G

ಇತ್ತೀಚಿನ ಐಕ್ಯೂ Z9 ಲೈಟ್‌ 5G (iQOO Z9 Lite 5G) ಫೋನ್‌ ಅಮೆಜಾನ್‌ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ ಆಕರ್ಷಕ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 6300 5G ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಅಲ್ಲದೇ ಇದು 4GB RAM + 128GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 5000mAh ಬ್ಯಾಟರಿ ಬ್ಯಾಕ್‌ಅಪ್‌ ಸಹ ಹೊಂದಿದೆ. ಈ ಪೋನ್‌ ಕೊಡುಗೆಯಲ್ಲಿ 9,999ರೂ. ಗಳಿಗೆ ಲಭ್ಯ ಎಂದು ಅಮೆಜಾನ್‌ ಆಫರ್‌ ಪೇಜ್‌ನಲ್ಲಿ ಕಾಣಿಸಿದೆ.

ಒನ್‌ಪ್ಲಸ್‌ 12R ಮೊಬೈಲ್‌

ಇದು 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,264 x 2,780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಹಾಗೆಯೇ ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಆಗಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದು 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಪೋನ್‌ ಕೊಡುಗೆಯಲ್ಲಿ 39,999ರೂ. ಗಳಿಗೆ ಲಭ್ಯ ಎಂದು ಅಮೆಜಾನ್‌ ಆಫರ್‌ ಪೇಜ್‌ನಲ್ಲಿ ಕಾಣಿಸಿದೆ.

ಐಫೋನ್‌ 15 ಮೊಬೈಲ್‌

ಐಫೋನ್‌ 15 ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್‌ ಬೆಂಬಲ ಸಹ ಹೊಂದಿದೆ. ಹಾಗೆಯೇ ಇದು A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ಮಾಡಲಿದ್ದು, ಇದಕ್ಕೆ ಬೆಂಬಲವಾಗಿ ios 17 ಓಎಸ್‌ ಸಪೋರ್ಟ್ ಕೂಡಾ ಪಡೆದಿದೆ. ಇನ್ನು ಐಫೋನ್‌ 15 ಫೋನ್‌ ಎರಡು ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಐಫೋನ್‌ ಅಮೆಜಾನ್‌ ಸೇಲ್‌ನಲ್ಲಿ 69,900ರೂ. ಗಳಿಗೆ ಲಭ್ಯ ಎಂದು ಅಮೆಜಾನ್‌ ಆಫರ್‌ ಪೇಜ್‌ನಲ್ಲಿ ಕಾಣಿಸಿದೆ.

Best Mobiles in India

English summary
Amazon Great Freedom Festival Sale Starts Tomorrow. Check Offers, Mobile deals, discounts and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+