Home
ಸುದ್ದಿಜಾಲ

ಈ ಸ್ಮಾರ್ಟ್‌ ಲೈಟ್‌ಗೂ ಬಿಗ್‌ ಡಿಸ್ಕೌಂಟ್‌!..ಇದನ್ನು ಆನ್‌-ಆಫ್‌ ಮಾಡುವ ಅಗತ್ಯ ಇಲ್ಲ!

ಇ-ಕಾಮರ್ಸ್‌ ದೈತ್ಯ ಅಮೆಜಾನ್ ಒಂದಿಲ್ಲೊಂದು ಆಕರ್ಷಕ ಸೇಲ್‌ಗಳನ್ನು ಆಯೋಜಿಸುವ ಮೂಲಕ ಆನ್‌ಲೈನ್‌ ಗ್ರಾಹಕರನ್ನು ಸೆಳೆಯುತ್ತ ಸಾಗಿದೆ. ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಅಮೆಜಾನ್‌ ಇದೀಗ ಆನ್‌ಲೈನ್ ಶಾಪಿಂಗ್ ಗ್ರಾಹಕರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಮಾರಾಟ ಮೇಳವೊಂದನ್ನು ಆಯೋಜಿಸಿದೆ. ಅದುವೇ 'ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2023'.

ಹೌದು, ಜನಪ್ರಿಯ ಅಮೆಜಾನ್‌ ಆಯೋಜಿಸಿರುವ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಇದೀಗ ಲೈವ್‌ ಇದೆ. ಈ ಮಾರಾಟ ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌, ಟಿವಿ, ಗೃಹ ಬಳಕೆಯ ಉತ್ಪನ್ನಗಳು ಸೇರಿದಂತೆ ಕೆಲವು ಎಲೆಕ್ಟ್ರಾನಿಕ ಎಲ್‌ಇಡಿ ಬಲ್ಬ್‌ಗಳ ಮೇಲೂ ಸಖತ್‌ ಕೊಡುಗೆ ನಿಡಿದೆ. ಅಂದಹಾಗೆ ಈ ಮಾರಾಟ ಮೇಳವು ಇದೇ ಆಗಷ್ಟ್‌ 8 ರ ವರೆಗೂ ಚಾಲ್ತಿ ಇರಲಿದೆ.

ಈ ಸ್ಮಾರ್ಟ್‌ ಲೈಟ್‌ಗೂ ಬಿಗ್‌ ಡಿಸ್ಕೌಂಟ್‌!..ಆನ್‌-ಆಫ್‌ ಮಾಡುವ ಅಗತ್ಯ ಇಲ್ಲ!

ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ ಬೆಲೆಗೆ ಸ್ಮಾರ್ಟ್ LED ಬಲ್ಬ್‌ಗಳು ಲಭ್ಯ ಇವೆ. ಸ್ಮಾರ್ಟ್‌ ಬಲ್ಬ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸುತ್ತವೆ. ಸ್ಮಾರ್ಟ್‌ ಬಲ್ಬ್‌ಗಳು ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್‌ ವಾಯಿಸ್‌ ಕಮಾಂಡ್‌ ಸೌಲಭ್ಯ ಪಡೆದಿವೆ. ಹಾಗಾದರೆ ಅಮೆಜಾನ್‌ ಸೇಲ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದ ಸ್ಮಾರ್ಟ್‌ ಬಲ್ಬ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.

ಹ್ಯಾಲೊನಿಕ್ಸ್ ಪ್ರೈಮ್ ಪ್ರಿಜ್ ಸ್ಮಾರ್ಟ್ ವೈ-ಫೈ LED ಬಲ್ಬ್ - ಆಫರ್‌ ಹೀಗಿದೆ : ಅಮೆಜಾನ್‌ ಸೇಲ್‌ನಲ್ಲಿ ಈ ಹ್ಯಾಲೊನಿಕ್ಸ್ ಪ್ರೈಮ್ ಪ್ರಿಜ್ ಸ್ಮಾರ್ಟ್ ವೈ-ಫೈ LED ಬಲ್ಬ್ ಶೇ. 80% ರಷ್ಟು ರಿಯಾಯಿತಿ ಪಡೆದಿದ್ದು, 499ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಇನ್ನು ಈ ಬಲ್ಬ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡಕ್ಕೂ ಸೆಟ್‌ ಆಗುವ ಸ್ಮಾರ್ಟ್ LED ಬಲ್ಬ್ ಆಗಿದೆ. ಈ ಸ್ಮಾರ್ಟ್ LED ವೈ-ಫೈಗೆ ಕನೆಕ್ಟ್ ಮಾಡಬಹುದಾಗಿದೆ.

ಯಾವುದೇ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಅದರ ಬಹುಮುಖ ಕಾರ್ಯಗಳನ್ನು ನಿಯಂತ್ರಿಸಲು ಇದು ಬಳಕೆದಾರರನ್ನು ಅನುಮತಿಸುತ್ತದೆ. ಯಾವುದೇ ಸಮಯದಲ್ಲಿ ಆನ್ ಮತ್ತು ಆಫ್ ಮಾಡಲು ನೀವು ಸುಲಭವಾಗಿ LED ಯನ್ನು ಸಕ್ರಿಯ ಮಾಡಬಹುದು. ಮುಸ್ಸಂಜೆಯಲ್ಲಿ ಸ್ವಯಂಚಾಲಿತವಾಗಿ ಆನ್ ಮಾಡಲು ಮತ್ತು ಮುಂಜಾನೆ ಆಫ್ ಮಾಡಲು ಬಳಕೆದಾರರು ಸೆಟ್ ಮಾಡಬಹುದಾಗಿದೆ.

ಸಿಸ್ಕಾ 7 ವ್ಯಾಟ್ ಸ್ಮಾರ್ಟ್ LED ಬಲ್ಬ್ ಕೊಡುಗೆ ಏನು : ಅಮೆಜಾನ್‌ ಸೇಲ್‌ನಲ್ಲಿ ಸಿಸ್ಕಾ 7 ವ್ಯಾಟ್ ಸ್ಮಾರ್ಟ್ LED ಬಲ್ಬ್‌ ಶೇ. 70% ರಷ್ಟು ರಿಯಾಯಿತಿ ಪಡೆದಿದ್ದು, 599ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಸಿಸ್ಕಾ 7-ವ್ಯಾಟ್ ಸ್ಮಾರ್ಟ್ LED ಬಲ್ಬ್‌ನ ಬಹುಮುಖ್ಯ ಹೈಲೈಟ್‌ ಅಂಶ ಅಂದರೇ ಮೂರು ಮಿಲಿಯನ್ ಶೇಡ್ಸ್‌ ಇರುವ ಆಯ್ಕೆ. ಬಳಕೆದಾರರು ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್‌ ಅನ್ನು ಬಳಸುವುದರಿಂದ ಆಯ್ಕೆ ಮಾಡಬಹುದು.

ಸಿಸ್ಕಾ 7-ವ್ಯಾಟ್ ಸ್ಮಾರ್ಟ್ ಎಲ್ಇಡಿ ಬಲ್ಬ್ ಬಳಕೆದಾರರಿಗೆ ತಮ್ಮ ಮನೆಯ ಬೆಳಕನ್ನು ವಿಶ್ವದ ಯಾವುದೇ ಮೂಲೆಯಿಂದಾದರೂ ಕಂಟ್ರೋಲ್ ಮಾಡಲು ಇದು ಅನುಮತಿಸುತ್ತದೆ. ಇದು ನಿಮ್ಮ Wi-Fi ಗೆ ಸಂಪರ್ಕಿಸುತ್ತದೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ನಿಮ್ಮ ಬೆಳಕಿನ ಪ್ರತಿಯೊಂದು ಅಂಶವನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ.

ವಿಪ್ರೊ ಗಾರ್ನೆಟ್ 9W ಸ್ಮಾರ್ಟ್ ಬಲ್ಬ್ ಕೊಡುಗೆಯ ಮಾಹಿತಿ ಹೀಗಿದೆ : ಅಮೆಜಾನ್‌ ಸೇಲ್‌ನಲ್ಲಿ ವಿಪ್ರೊ ಗಾರ್ನೆಟ್ 9W ಸ್ಮಾರ್ಟ್ ಬಲ್ಬ್ ಶೇ. 74% ರಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು 679ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಮೊಬೈಲ್‌ನಲ್ಲಿ ವಿಪ್ರೋ ನೆಕ್ಸ್ಟ್ ಆಪ್‌ ಮೂಲಕ ವಿಪ್ರೋ ಗಾರ್ನೆಟ್ 9 ಡಬ್ಲ್ಯೂ ಸ್ಮಾರ್ಟ್ ಬಲ್ಬ್ ಬೆಳಕನ್ನು ಗ್ರಾಹಕರು ನಿಯಂತ್ರಿಸಬಹುದು.

ವಿಪ್ರೊ ಗಾರ್ನೆಟ್ 9W ಸ್ಮಾರ್ಟ್ ಬಲ್ಬ್ ನಲ್ಲಿ 2700K ಮತ್ತು ಕೂಲ್ ಡೇ ವೈಟ್ 6500K ನಡುವೆ ಯಾವುದೇ ಕಲರ್ ಶೇಡ್‌ಗೆ ಸೆಟ್ ಮಾಡಲು ಬಳಕೆದಾರರಿಗೆ ಅವಕಾಶ ಲಭ್ಯ. ಸಂಜೆಯ ವೇಳೆ ಆಟೋಮ್ಯಾಟಿಕ್‌ ಆಗಿ ಲಯಟ್ ಆನ್ ಮಾಡಲು ಮತ್ತು ಸೂರ್ಯೋದಯದಲ್ಲಿ ಲೈಟ್‌ ಆಟೋ ಆಫ್ ಮಾಡಲು ಬಳಕೆದಾರರು ಆಪ್‌ ಮೂಲಕ ಸೆಟ್ ಮಾಡಬಹುದು. ಈ ಸ್ಮಾರ್ಟ್‌ ಬಲ್ಬ್‌ ಸಹ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯ ಕೂಡಾ ಪಡೆದುಕೊಂಡಿದೆ.

Best Mobiles in India

English summary
Amazon Great Freedom Sale: Massive deal on these Smart LED Bulbs. check features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+