ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ 2023: ಐಕ್ಯೂ, ಮೊಟೊ, ಹಾನರ್ ಫೋನ್‌ಗಳಿಗೆ ಬೃಹತ್ ಡಿಸ್ಕೌಂಟ್
ಸ್ಮಾರ್ಟ್‌ಫೋನ್‌ಗಳನ್ನು (Smartphone) ಖರೀದಿ ಮಾಡಲು ಎದುರು ನೋಡುತ್ತಿರುವವರಿಗೆ ಅದರಲ್ಲೂ ಉತ್ತಮ ಫೀಚರ್ಸ್ ಇರುವ ಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಲು ಮುಂದಾಗುವವರು ಈಗ ಐಕ್ಯೂ, ಮೊಟೊ, ಹಾನರ್ (Iqoo, Moto, Honor) ಸ್ಮಾರ್ಟ್‌ಫೋನ್‌ಗಳ ಕಡೆ ಕಣ್ಣಾಯಿಸಬಹುದು.
ಹೌದು, ಸ್ಮಾರ್ಟ್‌ಫೋನ್ ವಿಭಾಗದಲ್ಲಿ ನಿಮಗೆ ಅಗ್ಗದ ಬೆಲೆಯಿಂದ ದುಬಾರಿ ಬೆಲೆವರೆಗೆ ಫೋನ್‌ಗಳು ಲಭ್ಯ ಇವೆ. ಆದರೆ ಕೆಲವರು ಉತ್ತಮ ಫೋನ್ ಖರೀದಿ ಮಾಡಬೇಕು ಎಂದುಕೊಂಡರೂ ಸಹ ದುಬಾರಿ ಬೆಲೆ ನೋಡಿ ಹಿಂದೆ ಸರಿಯುವುದು ಸಾಮಾನ್ಯ ವಿಷಯ. ಆದರೆ, ಈಗ ನೀವು ಈ ವಿಶೇಷ ಸೇಲ್‌ನಲ್ಲಿ ಅಂದರೆ ಅಮೆಜಾನ್‌ನ ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ 2023 (Amazon Great India Festival Sale 2023) ನಲ್ಲಿ ದುಬಾರಿ ಬೆಲೆಯ ಫೋನ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದು. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ರಿಯಾಯಿತಿ ಇದೆ ಎಂದು ತಿಳಿಯೋಣ ಬನ್ನಿ.

ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ 2023 ಮೆಗಾ ಈವೆಂಟ್‌ನಲ್ಲಿ ಮೊಟೊರೊಲಾ, ಐಕ್ಯೂ, ಹಾನರ್ ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಿದೆ. ಅದರಲ್ಲೂ ಗ್ರಾಹಕರು ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ 2023 ಅಕ್ಟೋಬರ್ 8 ರಿಂದ ಕಿಕ್‌ಸ್ಟಾರ್ಟ್‌ಗೆ ಸಿದ್ಧವಾಗಿದೆ ಮತ್ತು ಇ-ಕಾಮರ್ಸ್ ದೈತ್ಯ ಈಗಾಗಲೇ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಡೀಲ್‌ಗಳನ್ನು ಅನಾವರಣಗೊಳಿಸುತ್ತಿದೆ. ಮೊಟೊರೊಲಾ ಮತ್ತು ಐಕ್ಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವಾರು ಡೀಲ್‌ಗಳನ್ನು ಘೋಷಣೆ ಮಾಡಿದೆ. ಈ ಹಬ್ಬದ ಋತುವಿನಲ್ಲಿ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಈ ಫೋನ್‌ಗಳ ಕಡೆ ಕಣ್ಣಾಯಿಸಬಹುದು.
ಹಾನರ್ 90 5G: ಈ ಫೋನ್ (Honor 90 5G) ಹಾನರ್ ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಫೋನ್ ಆಗಿದೆ. ಇದು 12 GB RAM ವರೆಗಿನ ಸಾಮರ್ಥ್ಯದಲ್ಲಿ ಕಂಡುಬರಲಿದ್ದು, ಎಲ್ಲಾ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ 29,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ. ಕಂಪನಿಯು ಈ ಫೋನ್‌ಗೆ 37,999 ರೂಪಾಯಿಗಳ ಸಾಮಾನ್ಯ ದರವನ್ನು ನಿಗದಿ ಮಾಡಿದೆ.
ಐಕ್ಯೂ ಸ್ಮಾರ್ಟ್‌ಫೋನ್‌ಗಳು: ಇ-ಕಾಮರ್ಸ್ ಅಮೆಜಾನ್ ಈಗಾಗಲೇ ಎಲ್ಲಾ ಐಕ್ಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖ ರಿಯಾಯಿತಿಗಳನ್ನು ನೀಡುವ ಹೊಸ ಲಿಸ್ಟ್ ಅನ್ನು ಪರಿಚಯಿಸಿದೆ. ಟೀಸರ್ ಪ್ರಕಾರ, ಐಕ್ಯೂ ನಿಯೋ 7 5G ಫೋನ್ 25,999 ರೂ.ಗಳಿಗೆ ಲಭ್ಯವಿದ್ದರೆ, ಐಕ್ಯೂ 11 5G ಸ್ಮಾರ್ಟ್‌ಫೋನ್ ಅನ್ನು 47,999 ರೂ.ಗಳಿಗೆ ಖರೀದಿ ಮಾಡಬಹುದು. ಜೊತೆಗೆ ಐಕ್ಯೂ Z6 ಲೈಟ್ 5G ಅನ್ನು 11,749ರೂ.ಗಳ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ.
ಇಷ್ಟೇ ಅಲ್ಲದೆ ಐಕ್ಯೂ Z7s 5G ಫೋನ್‌ಗೆ 15,499 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಐಕ್ಯೂ 9 5G ಗೆ 27,990ರೂ.ಗಳ ಬೆಲೆ ಇದೆ. ಜಿತೆಗೆ ಐಕ್ಯೂ 9 ಪ್ರೊ 5G ಅನ್ನು 37,990 ರೂ.ಗಳಿಗೆ ನೀವು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕಂಪನಿಯು ಐಕ್ಯೂ ನಿಯೋ 7 ಪ್ರೊ 5G ಮತ್ತು ಐಕ್ಯೂ Z7 ಪ್ರೊ 5G ಅನ್ನು ಸಹ ಈ ವೇಳೆ ಉಲ್ಲೇಖಿಸಿದೆ. ಆದರೆ ಈ ಫೋನ್‌ನ ಬೆಲೆಯನ್ನು ಈವರೆಗೂ ಬಹಿರಂಗಪಡಿಸಿಲ್ಲ.

ಮೊಟೊರೊಲಾ ಫೋನ್: ಇನ್ನು ಮೊಟೊರೊಲಾ ಕಂಪೆನಿಯ ಫೋನ್ ವಿಭಾಗದಲ್ಲಿ ಈಗಾಗಲೇ ಮೊಟೊರೊಲಾ ರೇಜರ್ 40 ಅಲ್ಟ್ರಾ ಹಾಗೂ ಮೊಟೊರೊಲಾ ರೇಜರ್40 ಫೋನ್‌ಗೆ ಆಫರ್ ನೀಡಲಾಗಿದೆ. ಅಂದರೆ ಅಲ್ಟ್ರಾ ಮಾದರಿಯನ್ನು ನೀವು 72,999 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಮೊಟೊರೊಲಾ ರೇಜರ್40 ಫೋನ್ ಅನ್ನು 44,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಗ್ರಾಹಕರು ಎಸ್‌ಬಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ ಈ ಫೋನ್‌ಗಳ ಮೇಲೆ 10 ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.


Click it and Unblock the Notifications








