Home
ಸುದ್ದಿಜಾಲ

ಅಮೆಜಾನ್‌ನಲ್ಲಿ ಯಾವ ಫೋನ್‌ಗೆ ಏನೆಲ್ಲಾ ಆಫರ್‌ ಇದೆ?, ಕಂಪ್ಲೀಟ್‌ ವಿವರ ಇಲ್ಲೇ ಇದೆ!

ಪ್ರಮುಖ ಇ-ಕಾಮರ್ಸ್‌ ಆಗಿರುವ ಅಮೆಜಾನ್‌ನ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್‌ಗೆ (Amazon Great Indian Festival 2023 Sale) ದಿನಗಣನೆ ಆರಂಭ ಆಗಿದೆ. ಈ ನಡುವೆ ಸಾಕಷ್ಟು ಸ್ಮಾರ್ಟ್‌ ಡಿವೈಸ್‌ಗಳಿಗೆ ದೊಡ್ಡ ಮಟ್ಟದಲ್ಲಿ ಆಫರ್‌ ಘೋಷಣೆ ಮಾಡಿರುವ ಅಮೆಜಾನ್‌ ಗ್ರಾಹಕರನ್ನು ಇತ್ತ ಮುಖ ಮಾಡುವಂತೆ ಮಾಡಿದೆ.

ಹೌದು, ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಅಗತ್ಯ ಟೂಲ್ಸ್‌ಗಳ ಅಮೆಜಾನ್‌ ಅತ್ಯುತ್ತಮ ಡೀಲ್‌ಗಳನ್ನು ಘೋಷಣೆ ಮಾಡಿದೆ. ಅಂದರೆ ಒನ್‌ಪ್ಲಸ್‌ನಿಂದ ನಡೆಸಲ್ಪಡುವ ಅಮೆಜಾನ್‌ ಸ್ಮಾರ್ಟ್‌ಫೋನ್‌ ಡ್ರೀಮ್‌ ಟೀಮ್‌ (Smartphone Dream Team) ಅನ್ನು ಪರಿಚಯಿಸಿದೆ. ಇದು ಸ್ಮಾರ್ಟ್‌ಫೋನ್‌ಗಳು ಮತ್ತು ಇತರೆ ಟೂಲ್ಸ್‌ ಸಂಗ್ರಹವನ್ನು ಹೊಂದಿದ್ದು, ನಿಮಗೆ ಆಕರ್ಷಕ ದರದಲ್ಲಿ ಲಭ್ಯ ಆಗಲಿವೆ.

ಅಮೆಜಾನ್‌ನಲ್ಲಿ ಯಾವ ಫೋನ್‌ಗೆ ಏನೆಲ್ಲಾ ಆಫರ್‌ ಇದೆ?,ಕಂಪ್ಲೀಟ್‌ ವಿವರ ಇಲ್ಲೇ ಇದೆ!

ಈ ವಿಶೇಷ ಸೇಲ್‌ನಲ್ಲಿ ಜನಪ್ರಿಯ ಬ್ರಾಂಡ್‌ಗಳಾದ ಒನ್‌ಪ್ಲಸ್, ಸ್ಯಾಮ್‌ಸಂಗ್‌, ರಿಯಲ್‌ಮಿ, ಶಿಯೋಮಿ. ಆಪಲ್‌, ಐಕ್ಯೂ, ಹಾನರ್‌ ಟೆಕ್‌ , ಮೊಟೊರೊಲಾ (OnePlus, Samsung, Realme, Xiaomi. Apple, IQOO, Honor Tech, Motorola) ಸೇರಿದಂತೆ ಅನೇಕ ಕಂಪೆನಿಗಳ ಡಿವೈಸ್‌ಗಳು ನೀವು ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಲಭ್ಯ ಇರಲಿವೆ. ಈ ಮೂಲಕ ನೀವು ಅತ್ಯುತ್ತಮ ಸ್ಮಾರ್ಟ್‌ಫೋನ್‌ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟಂತೆ ಆಗಿದೆ.

ಅಮೆಜಾನ್ ಸ್ಮಾರ್ಟ್‌ಫೋನ್ ಡ್ರೀಮ್ ಟೀಮ್‌ನಲ್ಲಿನ ಸ್ಮಾರ್ಟ್‌ಫೋನ್‌ ಆಫರ್‌ ವಿವರ:
ಆಪಲ್‌ ಐಫೋನ್ 13 (128GB) ಫೋನ್‌ ಅನ್ನು ನೀವು ಬ್ಯಾಂಕ್ ರಿಯಾಯಿತಿ ಮತ್ತು ವಿನಿಮಯ ಬೋನಸ್ ಜೊತೆಗೆ ಕೇವಲ 39,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G (6GB RAM, 128GB ) ಫೋನ್‌ ಸಹ ಅಗ್ಗದ ಬೆಲೆಗೆ ಲಭ್ಯ ಅಂದರೆ ಬ್ಯಾಂಕ್ ರಿಯಾಯಿತಿ ಸೇರಿದಂತೆ ನೀವು ಈ ಫೋನ್‌ ಅನ್ನು 14,999 ರೂ.ಗಳಿಗೆ ಖರೀದಿ ಮಾಡಬಹುದು.

ಇದರೊಂದಿಗೆ ಸ್ಯಾಮ್‌ಸಂಗ್‌ನ ಮತ್ತೊಂದು ಫೋನ್‌ ಆಗಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 FE ಫೋನ್ ಅನ್ನು ಇಂದು ಲಾಂಚ್‌ ಮಾಡಲಾಗಿದ್ದು, ಈ ವಿಶೇಷ ಸೇಲ್‌ನಲ್ಲಿ ಈ ಫೋನ್‌ ಸಹ ಅಗ್ಗದ ಬೆಲೆಗೆ ಲಭ್ಯ ಇರಲಿದೆ. ಜೊತೆಗೆ ಐಕ್ಯೂ Z7 ಪ್ರೊ 5G (8GB RAM, 128GB) ಫೋನ್‌ ಅನ್ನು ನೀವು ಬ್ಯಾಂಕ್ ರಿಯಾಯಿತಿ ಮತ್ತು ಕೂಪನ್ ಕೊಡುಗೆ ಸೇರಿದಂತೆ 21,499 ರೂ.ಗಳಿಗೆ ಖರೀದಿ ಮಾಡಬಹುದು.

ರಿಯಲ್‌ಮಿ ನಾರ್ಜೋ 60X 5G (6GB RAM, 128GB) ಫೋನ್‌ಸಹ ಈ ವೇಳೆ ಅಗ್ಗದ ದರದಲ್ಲಿ ಕಾಣಿಸಿಕೊಂಡಿದೆ. ಅಂದರೆ ಬ್ಯಾಂಕ್‌ ಕೊಡುಗೆ ಸೇರಿದಂತೆ ಈ ಫೋನ್‌ ಅನ್ನು ನೀವು 10,800ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಇದೇ ಸರಣಿಯ ಫೋನ್‌ ಆಗಿರುವ ರಿಯಲ್‌ಮಿ ನಾರ್ಜೋ N53 (4GB RAM, 64GB) ಫೋನ್‌ ಅನ್ನು 7,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಹಾನರ್‌ 90 5G (8GB + 256GB) ಫೋನ್‌ ಸಹ ಈ ವೇಳೆ ಆಫರ್‌ ಬೆಲೆಗೆ ಲಭ್ಯ ಇದೆ. ಅಂದರೆ, ಬ್ಯಾಂಕ್ ರಿಯಾಯಿತಿ ಸೇರಿದಂತೆ ನೀವು ಈ ಫೋನ್‌ ಅನ್ನು 29,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಹಾಗೂ ಐಟೆಲ್‌ P55 5G ಫೋನ್‌ ಅನ್ನು ಬ್ಯಾಂಕ್ ರಿಯಾಯಿತಿ ಸೇರಿದಂತೆ 8,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಲಾವಾ ಅಗ್ನಿ 2 5G (8GB RAM, 256GB) ಫೋನ್‌ ಅನ್ನು ಬ್ಯಾಂಕ್ ರಿಯಾಯಿತಿ ಸೇರಿದಂತೆ 17,999ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.

ಮೊಟೊರೊಲಾ ರೇಜರ್‌ 40 ಅಲ್ಟ್ರಾ 5G (8GB RAM, 256GB) ಫೋನ್‌ ಅನ್ನು ಸಹ ಈ ವೇಳೆ ಬ್ಯಾಂಕ್ ರಿಯಾಯಿತಿ ಸೇರಿದಂತೆ 72,999 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಇದೇ ಸಮಯದಲ್ಲಿ ನೀವು ರೆಡ್ಮಿ 12 5G (4GB RAM, 128GB) ಫೋನ್‌ ಅನ್ನು ಬ್ಯಾಂಕ್ ರಿಯಾಯಿತಿ ಸೇರಿದಂತೆ 10,800 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, 10,800 ರೂ.ಗಳಿಗೆ ಖರೀದಿ ಮಾಡಬಹುದು.

ಇದರೊಂದಿಗೆ ನೀವು ರೆಡ್ಮಿ 12C (4GB RAM, 64) ಫೋನ್‌ ಅನ್ನು 7,299ರೂ.ಗಳಿಗೆ ಹಾಗೂ ಒನ್‌ಪ್ಲಸ್‌ 11R 5G (8GB RAM, 128GB) ಫೋನ್‌ ಅನ್ನು ಬ್ಯಾಂಕ್ ರಿಯಾಯಿತಿ ಮತ್ತು ಕೂಪನ್ ಕೊಡುಗೆ ಸೇರಿದಂತೆ 34,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಒನ್‌ಪ್ಲಸ್‌ ನಾರ್ಡ್‌ CE 3 ಲೈಟ್‌ 5G (8GB RAM, 128GB) ಫೋನ್‌ ಅನ್ನು ಬ್ಯಾಂಕ್ ರಿಯಾಯಿತಿ ಮತ್ತು ಕೂಪನ್ ಕೊಡುಗೆ ಸೇರಿದಂತೆ 17,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಮೊಬೈಲ್ ಟೂಲ್ಸ್‌ಗಳ ಮೇಲೆ ಏನೆಲ್ಲಾ ಆಫರ್ ಇದೆ? : ಹೆಡ್‌ಸೆಟ್‌ಗಳ ಮೇಲೆ 80% ವರೆಗೆ ಡಿಸ್ಕೌಂಟ್ ಇದ್ದು, ಪವರ್ ಬ್ಯಾಂಕ್‌ಗಳು ಕೇವಲ 549ರೂ.ಗಳಿಂದ ಆರಂಭಿಕ ಬೆಲೆ ಹೊಂದಿರಲಿವೆ. ಹಾಗೂ ಕೇಬಲ್‌ಗಳು ಮತ್ತು ಚಾರ್ಜರ್‌ಗಳಿಗೆ 80% ವರೆಗೆ ರಿಯಾಯಿತಿ ನೀಡಲಾಗಿದ್ದು, ಫೋನ್‌ಕೇಸ್‌ಗಳ ಬೆಲೆ ಕೇವಲ 69ರೂ.ಗಳಿಗೆ ಆರಂಭ ಆಗಲಿದೆ. ಇಷ್ಟೇ ಅಲ್ಲದೆ ಸ್ಕ್ರೀನ್ ಪ್ರೊಟೆಕ್ಟರ್‌ಗಳು 149ರೂ.ಗಳಿಂದ ಆರಂಭ ಆಗಲಿದ್ದು, ಈ ಮೂಲಕ ಸ್ಮಾರ್ಟ್‌ಫೋನ್‌ ಹೊಂದಿರುವವರು ಅಗ್ಗದ ದರದಲ್ಲಿ ಅತ್ಯುತ್ತಮ ಪರಿಕರಗಳನ್ನು ಖರೀದಿ ಮಾಡಬಹುದಾಗಿದೆ.

ಅಮೆಜಾನ್‌ನಲ್ಲಿ ಯಾವ ಫೋನ್‌ಗೆ ಏನೆಲ್ಲಾ ಆಫರ್‌ ಇದೆ?,ಕಂಪ್ಲೀಟ್‌ ವಿವರ ಇಲ್ಲೇ ಇದೆ!

ಬ್ಯಾಂಕ್ ಕೊಡುಗೆಗಳೇನು?: ಈ ವಿಶೇಷ ಸೇಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿದ್ರೆ ನಿಮಗೆ 10% ವರೆಗೆ ತ್ವರಿತ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಆಂಡ್ರಾಯ್ಡ್‌ನ ಎಲ್ಲಾ 5G ಸ್ಮಾರ್ಟ್‌ಫೋನ್‌ಗಳಲ್ಲಿ 3 ತಿಂಗಳವರೆಗೆ ನೋ ಕಾಸ್ಟ್‌ ಇಎಮ್‌ಐ ಸಹ ಲಭ್ಯ ಇದ್ದು, ಕೂಪನ್ ಕೊಡುಗೆಗಳು, ವಿನಿಮಯ ಕೊಡುಗೆಗಳು ಸಹ ಈ ವಿಶೇಷ ಸೇಲ್‌ನಲ್ಲಿ ಲಭ್ಯ ಇರಲಿವೆ.

Best Mobiles in India

English summary
Amazon has announced the best deals on smartphones and other essential tools. That means Amazon has introduced the Smartphone Dream Team powered by OnePlus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+