Amazon: ಅಮೆಜಾನ್ ವಿಶೇಷ ಸೇಲ್: 99ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ ಈ ವಸ್ತುಗಳು!
ಅಮೆಜಾನ್ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ (Smartphone, SmartTV) ಸೇರಿದಂತೆ ಅನೇಕ ಸ್ಮಾರ್ಟ್ ಡಿವೈಸ್‌ಗಳಿಗೆ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Great Indian Festival Sale 2023) ನಲ್ಲಿ ಎಲ್ಲಾ ವಸ್ತುಗಳಿಗೂ ವಿಶೇಷ ಆಫರ್ ನೀಡಲಾಗಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಅನ್ನು ಆರಂಭ ಆಗಿದ್ದು, ಈ ವರ್ಷದ ಸೇಲ್ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಅಂದರೆ ಗ್ರಾಹಕರಿಗೆ ನಂಬಲಾಗದ ಡಿಸ್ಕೌಂಟ್ (Discount) ಅನ್ನು ನೀಡಿದ್ದು, ಈ ಸಮಯದಲ್ಲಿ 99 ರೂ. ಅಡಿಯಲ್ಲಿ ನೀವು ಖರೀದಿಸಬಹುದಾದ ಪ್ರೊಡಕ್ಟ್‌ಗಳ ಲಿಸ್ಟ್ ಬಗ್ಗೆ ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ. ಅಂದರೆ, ಇವುಗಳ ಬೆಲೆ ಹಾಗೂ ವಿಶೇಷತೆ ಇಲ್ಲಿದೆ ನೋಡಿ.

ELV ವಾಲ್ ಮೌಂಟ್ ಮೊಬೈಲ್ ಹೋಲ್ಡರ್: ಇದು ಬಲವಾದ ಅಂಟಿಕೊಳ್ಳುವ ಪಟ್ಟಿಗಳೊಂದಿಗೆ ಕಾಣಿಸಿಕೊಂಡಿದ್ದು, ಎಲ್ಲಾ ರೀತಿಯ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಐಫೋನ್, ಮಿನಿ ಟ್ಯಾಬ್ಲೆಟ್‌ಗೂ ಸೂಕ್ತವಾಗಿದೆ. ಈ ಮೊಬೈಲ್ ಹೋಲ್ಡರ್‌ಗಳು ಪ್ರಸ್ತುತ 69 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯ ಆಗುತ್ತಿವೆ. ಇದರ ಸಾಮಾನ್ಯ ಬೆಲೆ 299ರೂ.ಗಳಾಗಿದೆ
ಇನ್ನು ಫೋನ್ ಹೋಲ್ಡರ್ ಇಂದಿನ ದಿನಗಳಲ್ಲಿ ಅಗತ್ಯವಾಗಿವೆ. ಇದು ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್‌ಗೆ ಹಾನಿಕಾರಕವಲ್ಲ, ಈ ವಾಲ್ ಫೋನ್ ಹೋಲ್ಡರ್ ಅನ್ನು ಚಾರ್ಜ್ ಮಾಡುವಾಗ ಡಿವೈಸ್‌ಗಳನ್ನು ಇಡಲು ಅನುಕೂಲವಾಗುವಂತೆ ಗೋಡೆಗೆ ಜೋಡಿಸಲು ವಿನ್ಯಾಸಗೊಳಿಸಲಾಗಿದೆ. ಇವುಗಳನ್ನು ಗೋಡೆಗೆ ಅಂಟಿಸಿದ ನಂತರ ನಯವಾದ ಮೇಲ್ಮೈಯನ್ನು ಖಚಿತಪಡಿಸಿಕೊಳ್ಳಿ.
STRIFF ಸ್ಪೈರಲ್ ಕೇಬಲ್ ಪ್ರೊಟೆಕ್ಟರ್ ಕಾರ್ಡ್ ಸೇವರ್: ಇದನ್ನು ಫೋನ್‌ಗಳನ್ನು ಚಾರ್ಜಿಂಗ್ ಮಾಡುವಾಗ ಬಳಕೆ ಮಾಡಬಹುದಾಗಿದೆ. ಬಾಳಿಕೆ ಬರುವ ಫ್ಲೆಕ್ಸಿಬಲ್ ವೈರ್ ವಿಂಡರ್ ಆಯ್ಕೆ ಹೊಂದಿದ್ದು, ಇದನ್ನು ನೀವು 79 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 499ರೂ.ಗಳಾಗಿದೆ. ಇನ್ನು ಸ್ಪೈರಲ್ ಟ್ಯೂಬ್ ಚಾರ್ಜಿಂಗ್ ಕೇಬಲ್ ಪ್ರೊಟೆಕ್ಟರ್‌ಗಳನ್ನು ಹೆಚ್ಚು ಹೊಂದಿಕೊಳ್ಳುವ ಸಿಲಿಕೋನ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಇವುಗಳನ್ನು ಸೆಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಆಪಲ್ ಹಾಗೂ ಆಂಡ್ರಾಯ್ಡ್ ವಾಚ್‌ಗಳು, ಕೇಬಲ್‌ಗಳು, ಪಿಸಿಗಳು ಸೇರಿದಂತೆ ಎಲ್ಲಾ ಡಿವೈಸ್‌ಗಳ ಕೇಬಲ್‌ಗಳನ್ನು ಸಂಪೂರ್ಣವಾಗಿ ರಕ್ಷಿಸಲು ಹಾಗೂ ಫೋನ್ ಚಾರ್ಜರ್ ಕಾರ್ಡ್ ಪ್ರೊಟೆಕ್ಟರ್ ಮತ್ತು ಫೋನ್ ಚಾರ್ಜರ್ ಸೇವರ್ ಆಗಿಯೂ ಇದನ್ನು ಬಳಕೆ ಮಾಡಬಹುದಾಗಿದೆ.
ಲ್ಯಾಪ್‌ಸ್ಟರ್ 5-ಇನ್-1 ಮಲ್ಟಿ-ಫಂಕ್ಷನ್ ಲ್ಯಾಪ್‌ಟಾಪ್ ಕ್ಲೀನಿಂಗ್ ಬ್ರಷ್ : ಇದರ ಮೂಲಕ ನೀವು ನಿಮ್ಮ ಲ್ಯಾಪ್‌ಟಾಪ್, ಕೀಬೋರ್ಡ್ ಮತ್ತು ಇಯರ್‌ಫೋನ್ ಗಳನ್ನು ಸ್ವಚ್ಛ ಮಾಡಬಹುದು. ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ವಿವರಗಳ ಪ್ರಕಾರ, ಮಲ್ಟಿ-ಫಂಕ್ಷನ್ ಲ್ಯಾಪ್‌ಟಾಪ್ ಕ್ಲೀನಿಂಗ್ ಬ್ರಷ್ ಅನ್ನು ಕೇವಲ 89 ರೂಗಳಲ್ಲಿ ಲಭ್ಯ ಇದೆ. ಇದರ ಸಾಮಾನ್ಯ ದರ 999 ರೂ.ಗಳಾಗಿದೆ.

ಈ ಕ್ಲೀನಿಂಗ್ ಬ್ರಷ್ ಕಿಟ್‌ನಲ್ಲಿ ಫ್ಲಾಕಿಂಗ್ ಸ್ಪಾಂಜ್, ಹೈ-ಡೆನ್ಸಿಟಿ ಬ್ರಷ್, ಮೆಟಲ್ ಪೆನ್ ಟಿಪ್ ಮತ್ತು ಕೀಕ್ಯಾಪ್ ಪುಲ್ಲರ್, ಡ್ಯುಯಲ್ ಹೆಡ್ ಹಿಡನ್ ಡಿಸೈನ್ ವಸ್ತುಗಳನ್ನು ನೀಡಲಾಗಿದೆ. ಅದರಲ್ಲೂ ಕೀಬೋರ್ಡ್ ಕ್ಲೀನಿಂಗ್ ಕಿಟ್ ಸರಳವಾದ ಕೀ ಪುಲ್ಲರ್ ಅನ್ನು ಸರಳಗೊಳಿಸಿದೆ. ಅಂದರೆ ಕೀ ಕ್ಯಾಪ್ ಅನ್ನು ಬದಲಾಯಿಸುವುದು ಯಾವುದೇ ಶ್ರಮದಾಯಕ ಕೆಲಸವಾಗುವುದಿಲ್ಲ.ಗ್ಯಾಜೆಟ್ ಕ್ಲೀನಿಂಗ್ ಕಿಟ್ ನಲ್ಲಿ ಕ್ಲೀನಿಂಗ್ ಹೆಡ್, ಮಲ್ಟಿ-ಪರ್ಪಸ್, ಕೀಬೋರ್ಡ್ ಮತ್ತು ಇಯರ್‌ಫೋನ್ ಕ್ಲೀನಿಂಗ್ ಮಾಡಬಹುದಾಗಿದೆ.


Click it and Unblock the Notifications








