Home
ಸುದ್ದಿಜಾಲ

Amazon Great Indian Festival: ಜನಪ್ರಿಯ ಇಯರ್‌ಫೋನ್‌ಗಳ ಮೇಲೆ 73% ಡಿಸ್ಕೌಂಟ್!

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ಸೇಲ್‌ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಈಗಾಗಲೇ ಲೈವ್‌ ಆಗಿದೆ. ಕಳೆದ ಎರಡು ದಿನಗಳಿಂದ ಶಾಪಿಂಗ್‌ ಪ್ರಿಯರಿಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಬಿಗ್‌ ಆಫರ್‌ಗಳನ್ನು ನೀಡುತ್ತಿದೆ. ಇದಕ್ಕೆ ಇಯರ್‌ಫೋನ್‌ಗಳು ಕೂಡ ಹೊರತಾಗಿಲ್ಲ, ಇಯರ್‌ಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಅಮೆಜಾನ್‌ ಬಂಪರ್‌ ಆಫರ್‌ ನೀಡುತ್ತಿದೆ.

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ (Amazon Great Indian Festival) ಸೇಲ್‌ನಲ್ಲಿ ಟ್ರೂಲಿ ವಾಯರ್‌ಲೆಸ್‌ ಸ್ಟೀರಿಯೊ ಇಯರ್‌ಫೋನ್‌ಗಳ ಮೇಲೆ ಡಿಸ್ಕೌಂಟ್‌ ಸಿಗುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳ ಇಯರ್‌ಫೋನ್‌ ಖರೀದಿಸೋರಿಗೆ ಇದು ಬೆಸ್ಟ್‌ ಟೈಂ ಆಗಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2023ರಲ್ಲಿ ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾದ ಇಯರ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Amazon Great Indian Festival: ಜನಪ್ರಿಯ ಇಯರ್‌ಫೋನ್‌ಗಳ ಮೇಲೆ 73% ಡಿಸ್ಕೌಂಟ್!

ರಿಯಲ್‌ಮಿ ಬಡ್ಸ್‌ ಏರ್‌ 5 ಪ್ರೊ
ರಿಯಲ್‌ಮಿ ಬಡ್ಸ್‌ ಏರ್‌ 5 ಪ್ರೊ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಬರೋಬ್ಬರಿ 41% ಡಿಸ್ಕೌಂಟ್‌ ಪಡೆದಿದೆ. ಆದರಿಂದ ಇದನ್ನು ನೀವು ಕೇವಲ 4,699ರೂ ಬೆಲೆಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಬ್ಯಾಂಕ್‌ ಮತ್ತು ಕ್ಯಾಶ್‌ಬ್ಯಾಕ್‌ ಆಫರ್‌ಗಳೊಂದಿಗೆ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಆಡಿಯೊ ವೇರಬಲ್ಸ್‌ 360ಡಿಗ್ರಿ ಸ್ಪಾಟಿಯಲ್ ಆಡಿಯೊ ಎಫೆಕ್ಟ್‌ನೊಂದಿಗೆ ಬರಲಿದ್ದು, 50dB ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಬೆಂಬಲಿಸಲಿದೆ. ಇದು 40 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ.

ಒನ್‌ಪ್ಲಸ್‌ ಬಡ್ಸ್ Z2
ಒನ್‌ಪ್ಲಸ್‌ ಬಡ್ಸ್ Z2 ಅಮೆಜಾನ್‌ ಸೇಲ್‌ನಲ್ಲಿ 33% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಇಯರ್ ಫೋನ್‌ 5,999ರೂ.ಗಳಿಗೆ ಬದಲಾಗಿ ಕೇವಲ 3,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಇಯರ್‌ಫೋನ್‌ 11mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದು 40dB ವರೆಗಿನ ನಾಯ್ಸ್‌ ಕ್ಯಾನ್ಸಲೇಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 38 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಂ ಅನ್ನು ಕೂಡ ನೀಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಲೈವ್
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಲೈವ್ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ವಿಶೇಷ ಆಫರ್‌ ಪಡೆದುಕೊಂಡಿದೆ. ಇದರ ಮೇಲೆ ಬರೋಬ್ಬರಿ 73% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ನೀವು ಇದನ್ನು ಕೇವಲ 4,299ರೂ ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಒಳಗೊಂಡಿದೆ. ಜೊತೆಗೆ ಈ ಇಯರ್‌ಫೋನ್‌ಗಳು ಒಟ್ಟು 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದನ್ನು ನೀವು ಮಿಸ್ಟಿಕ್ ಕಪ್ಪು ಮತ್ತು ಮಿಸ್ಟಿಕ್ ಕಂಚಿನ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ರಿಯಲ್‌ಮಿ ಬಡ್ಸ್‌ ಏರ್‌ 3
ರಿಯಲ್‌ಮಿ ಬಡ್ಸ್‌ ಏರ್‌ 3 ಅಮೆಜಾನ್‌ ಸೇಲ್‌ನಲ್ಲಿ 33% ಡಿಸ್ಕೌಂಟ್‌ ಪಡೆದಿದೆ. ಇದರಿಂದ ಈ ಇಯರ್‌ಫೋನ್‌ ಅನ್ನು 3,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಫೋನ್‌ 42dB ವರೆಗೆ ANC ಯನ್ನು ಬೆಂಬಲಿಸಲಿದೆ. ಇದು 10mm ಡೈನಾಮಿಕ್ ಬಾಸ್ ಬೂಸ್ಟ್ ಡ್ರೈವರ್‌ಗಳನ್ನು ಒಳಗೊಂಡಿದೆ. ಜೊತೆಗೆ ಒಂದು ಗಂಟೆಯ ಸಿಂಗಲ್‌ ಚಾರ್ಜ್‌ನಲ್ಲಿ 30 ಗಂಟೆಗಳವರೆಗೆ ತಡೆರಹಿತ ಪ್ಲೇಬ್ಯಾಕ್ ಟೈಂ ನೀಡಲಿದೆ. ಇದನ್ನು ನೀವು ಕಪ್ಪು, ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

JBL ಟ್ಯೂನ್ 230NC
JBL ಟ್ಯೂನ್ 230NC ಇಯರ್‌ಫೋನ್‌ ಕೂಡ ಅಮೆಜಾನ್‌ ಸೇಲ್‌ನಲ್ಲಿ ಬಂಪರ್‌ ಆಫರ್‌ ಪಡೆದುಕೊಂಡಿದೆ. ಇದು ಬರೋಬ್ಬರಿ 50% ಡಿಸ್ಕೌಂಟ್‌ ಪಡೆದಿದ್ದು, ಕೇವಲ 3,988ರೂ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಇಯರ್‌ಬಡ್ಸ್‌ ಸಕ್ರಿಯ ಶಬ್ದ ರದ್ದತಿ ಫೀಚರ್ಸ್‌ನೊಂದಿಗೆ ಬರಲಿದೆ. ಇದು ಒಟ್ಟು 40 ಗಂಟೆಗಳವರೆಗೆ ಪ್ಲೇ ಬ್ಯಾಕ್‌ ಟೈಂ ನೀಡಲಿದೆ. ಈ ಇಯರ್‌ಫೋನ್‌ ಅನ್ನು ಕಪ್ಪು, ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Amazon Great Indian Festival: Best TWS Earphones deals on upto 73% discount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+