ಅಮೆಜಾನ್ ದೀಪಾವಳಿ ಸೇಲ್!..ಡಿಸ್ಕೌಂಟ್‌ನಲ್ಲಿ ಸಿಗಲಿವೆ ಸ್ಮಾರ್ಟ್‌ಫೋನ್‌ಗಳು!
ದಸರಾ ಹಬ್ಬದ ಪ್ರಯುಕ್ತ ಇತ್ತೀಚಿಗಷ್ಟೆ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಮೇಳವನ್ನು ಆಯೋಜಿಸಿ ಶಾಪಿಂಗ್ ಪ್ರಿಯರನ್ನು ಸೆಳೆದಿದ್ದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಇದೀಗ ಮತ್ತೊಮ್ಮೆ ಮೆಗಾ ಸೇಲ್ ಶುರು ಮಾಡಿದೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಬರಲಿದ್ದು, ಈ ಹಬ್ಬದ ಸಲುವಾಗಿಯೇ ಅಮೆಜಾನ್ ಇದೀಗ ಮತ್ತೆ 'ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಮೇಳವನ್ನು ಆರಂಭಿಸಿದೆ.

ಹೌದು, ಅಮೆಜಾನ್ ದೀಪಾವಳಿ ಹಬ್ಬಕ್ಕೆಂದೆ 'ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಅನ್ನು ಮತ್ತೆ ಆಯೋಜಿಸಿದ್ದು, ಐದು ದಿನಗಳ ಈ ಮೇಳವು ಇಂದು (ಅಕ್ಟೋಬರ್ 21ರಂದು) ಆರಂಭವಾಗಿದೆ. ಈ ಮೇಳದಲ್ಲಿ ಗ್ಯಾಜೆಟ್ಸ್ ಉತ್ಪನ್ನಗಳಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತಿದ್ದು, ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಲಭ್ಯವಾಗಲಿವೆ. ಇದರೊಂದಿಗೆ ನೋ ಕಾಸ್ಟ್ EMI ಸೇರಿದಂತೆ ಅಮೆಜಾನ್ ಸ್ಕ್ರೀನ್ ರಿಪ್ಲೆಸ್‌ಮೆಂಟ್ ಆಫರ್ ಸಹ ನೀಡುತ್ತದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಹೆಚ್ಚಿನ ರಿಯಾಯಿತಿ ಪಡೆದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ 7
ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 6 GB RAM ವೇರಿಯಂಟ್ 32,999ರೂ.ಗಳಿಗೆ ಬಿಡುಗಡೆ ಆಗಿತ್ತು. ಸದ್ಯ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ 29,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 8GB RAM ವೇರಿಯಂಟ್‌ನ ಆಯ್ಕೆಯಲ್ಲಿಯೂ ಈ ಸ್ಮಾರ್ಟ್‌ಫೋನ್ ಲಭ್ಯವಿದ್ದು, ಮೀಡ್‌ನೈಟ್ ಗ್ರೇ ಮತ್ತು ರೆಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30
ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಂ30' ಸ್ಮಾರ್ಟ್‌ಫೋನಿನ 4GB RAM ಮತ್ತು 64 GB ವೇರಿಯಂಟ್ ಬೆಲೆಯು 14,990ರೂ.ಗಳಾಗಿದ್ದು, ಸದ್ಯ ಆಫರ್‌ನಲ್ಲಿ 11,990ರೂ.ಗಳಿಗೆ ಸಿಗಲಿದೆ. ಇನ್ನು ಗ್ಯಾಲ್ಯಾಕ್ಸಿ ಎಂ30' ಫೋನಿನ 3GB RAM ಮತ್ತು 32 GB ಸ್ಟೋರೇಜ್ ವೇರಿಯಂಟ್ 9,999ರೂ.ಗಳಿಗೆ ಲಭ್ಯವಾಗಲಿದೆ. ಗ್ರೇಡಿಯಂಟ್ ಬ್ಲ್ಯಾಕ್, ಗ್ರೇಡಿಯಂಟ್ ಬ್ಲೂ, ಮೆಟಾಲಿಕ್ ಬ್ಲೂ ಮತ್ತು ಸ್ಟೈನ್‌ಲೆಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಿವೆ.

ವಿವೋ ವಿ15 ಪ್ರೊ
ವಿವೋ ವಿ15 ಪ್ರೊ ಮೀಡ್‌ರೇಂಜ್ ಸ್ಮಾರ್ಟ್‌ಫೋನ ಭಾರತದಲ್ಲಿ 28,990ರೂ.ಗಳಿಗೆ ಬಿಡುಗಡೆ ಆಗಿತ್ತು. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಇದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಹಾಗೆಯೇ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ವಿಶೇಷವಾಗಿದೆ. ಸದ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ 7,000ರೂ ಬೆಲೆ ಇಳಿಕೆ ಕಂಡಿದ್ದು, ಗ್ರಾಹಕರು 21,990 ರೂ.ಗಳಿಗೆ ಖರೀದಿಸಬಹುದಾಗಿದೆ.

ಶಿಯೋಮಿ ವೈ3
ಶಿಯೋಮಿಯ ವೈ3 ಸ್ಮಾರ್ಟ್‌ಫೋನ್ ಬೇಸಿಕ್ 3GB RAM ವೇರಿಯಂಟ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ 7,999ರೂ.ಗಳಿಗೆ ಲಭ್ಯವಿದೆ. ಈ ಫೋನ್ 9,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿತ್ತು. ಆದ್ರೆ ಇದೀಗ 2,000ರೂ ಇಳಕೆ ಆಗಿದೆ. 32GB ಸ್ಟೋರೇಜ್ ಜೊತೆಗೆ 32ಎಂಪಿ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಹಾನರ್ 8C
ಹುವಾವೆ ಸಂಸ್ಥೆಯ ಜನಪ್ರಿಯ 'ಹಾನರ್ 8C' ಸ್ಮಾರ್ಟ್‌ಫೋನ್ ಸಹ ಬೆಸ್ಟ್ ಡೀಲ್‌ನಲ್ಲಿ ಲಭ್ಯವಾಗಲಿದೆ. 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಸ್ಮಾರ್ಟ್‌ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳದಲ್ಲಿ ಸದ್ಯ 8,999ರೂ.ಗಳಿಗೆ ಸಿಗಲಿದೆ. ಈ ಫೋನ್ 11,999ರೂ.ಗಳಿಗೆ ಲಾಂಚ್ ಆಗಿತ್ತು ಮತ್ತು ಇತ್ತೀಚಿಗೆ ಬೆಲೆ ಇಳಿಕೆಯನ್ನು ಕಂಡು 10,999ರೂ.ಗಳಿಗೆ ಲಭ್ಯವಾಗಿತ್ತು.


Click it and Unblock the Notifications








