Home
ಸುದ್ದಿಜಾಲ

Amazon Great Indian Festival sale ಡೇಟ್‌ ಫಿಕ್ಸ್‌; ಈ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌!

ಆನ್‌ಲೈನ್‌ ಶಾಪಿಂಗ್ ಪ್ರಿಯರು ಬಹಳ ಕುತೂಹಲದಿಂದ ಕಾಯುತ್ತಿದ್ದ ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2024 (Amazon Great Indian Festival sale 2024) ಮಾರಾಟದ ದಿನಾಂಕ ಈಗ ಘೋಷಣೆ ಮಾಡಲಾಗಿದೆ. ಈ ಸ್ಪೆಷಲ್‌ ಸೇಲ್‌ನಲ್ಲಿ ಗ್ರಾಹಕರು ನಿರೀಕ್ಷೆ ಮಾಡಿರದ ಅತ್ಯುತ್ತಮ ಬೆಲೆಗೆ ಮೊಬೈಲ್‌ಗಳು, ಸ್ಮಾರ್ಟ್‌ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024 (Amazon Great Indian Festival sale 2024) ಭಾರತದಲ್ಲಿ ಸೆಪ್ಟೆಂಬರ್ 27 ರಂದು ಪ್ರಾರಂಭವಾಗಲಿದೆ. ಇನ್ನು ಅಮೆಜಾನ್‌ ಪ್ರೈಮ್‌ ಸದಸ್ಯರು ಸೆಪ್ಟೆಂಬರ್ 26 ರಂದು ಆರಂಭಿಕ ಪ್ರವೇಶವನ್ನು ಪಡೆಯುತ್ತಾರೆ. ಅಂದಹಾಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ 2024 ಕೂಡಾ ಸೆಪ್ಟೆಂಬರ್ 27 ರಂದೇ ಪ್ರಾರಂಭ ಆಗಲಿದೆ.

Amazon Great Indian Festival ಡೇಟ್‌ ಫಿಕ್ಸ್‌; ಈ ಫೋನ್‌ಗಳಿಗೆ ಡಿಸ್ಕೌಂಟ್‌

ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ವೇರೆಬಲ್ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು, ಅಡಿಗೆ ವಸ್ತುಗಳು, ಫ್ಯಾಷನ್, ಸೌಂದರ್ಯ ಸೇರಿದಂತೆ ಇತರೆ ವಸ್ತುಗಳ ಮೇಲೆ ಭರ್ಜರಿ ಕೊಡುಗೆಗಳು ಲಭ್ಯವಾಗಲಿವೆ. ಇನ್ನು ಖರೀದಿದಾರರು ಎಸ್‌ಬಿಐ ಬ್ಯಾಂಕ್ ಕಾರ್ಡ್ ಪಾವತಿಗಳಲ್ಲಿ ಶೇ. 10% ಇನ್‌ಸ್ಟಂಟ್ ರಿಯಾಯಿತಿಯನ್ನು ಪಡೆಯುತ್ತಾರೆ ಎಂದು ಅಮೆಜಾನ್‌ ಘೋಷಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಅಮೆಜಾನ್ ಸೇಲ್‌ನ ಟೀಸರ್‌ನ ಪ್ರಕಾರ, ಒನ್‌ಪ್ಲಸ್‌ 12R, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M35 5G, ರೆಡ್ಮಿ 13C, ಒನ್‌ಪ್ಲಸ್‌ ನಾರ್ಡ್‌ CE 4 ಲೈಟ್‌, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ, ಶೀಯೋಮಿ 14 Civi, ಮೊಟೊರೊಲಾ ರೇಜರ್, ಒನ್‌ಪ್ಲಸ್‌ 11R, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55, ಪೊಕೊ X6 ನಿಯೋ 5G ಸೇರಿದಂತೆ ಆಯ್ದ ಇನ್ನಷ್ಟು ಫೋನ್‌ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯ ಇವೆ.

ಹಾಗೆಯೇ ಸದ್ಯದಲ್ಲೇ ಶುರುವಾಗಲಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ವೇಳೆ ಆಪಲ್‌ ಐಫೋನ್‌ 13 ಅನ್ನು ಅಮೆಜಾನ್‌ ತಾಣದಲ್ಲಿ 45,999ರೂ.ಗಳಿಗೆ ಲಿಸ್ಟ್‌ ಮಾಡಲಾಗಿದೆ. SBI ಬ್ಯಾಂಕ್ ಕಾರ್ಡ್‌ಗಳ ಮೇಲೆ ಖರೀದಿದಾರರು 2,500 ರೂ.ಗಳ ರಿಯಾಯಿತಿ ಸಹ ಲಭ್ಯವಾಗಲಿದೆ. ಹಾಗೆಯೇ, ಹೆಚ್ಚುವರಿಯಾಗಿ ಎಕ್ಸ್‌ಚೇಂಜ್‌ ಕೊಡುಗೆ ಮೇಲೆ 3,500 ರೂ.ಗಳ ಪಡೆಯಬಹುದಾಗಿದೆ. ಇನ್ನು ಇದು ಸ್ಟಾರ್‌ಲೈಟ್, ರೆಡ್‌, ಬ್ಲೂ, ಗ್ರೀನ್‌, ಪಿಂಕ್ ಮತ್ತು ಮಿಡ್‌ನೈಟ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಅಮೆಜಾನ್ ಸಂಸ್ಥೆಯು ಸೆಪ್ಟೆಂಬರ್ 20 ರಂದು ಮಧ್ಯಾಹ್ನ 3 ಗಂಟೆಗೆ ಪ್ರಮುಖ ಮೊಬೈಲ್‌ಗಳ ಡೀಲ್‌ಗಳನ್ನು ಪ್ರಕಟ ಮಾಡಲಿದೆ. ಟೆಕ್ನೋ ಫ್ಯಾಂಟಮ್‌ V ಫ್ಲಿಪ್‌, ಹಾನರ್‌ 200 5G, ಒಪ್ಪೋ F27 ಪ್ರೊ ಸೇರಿದಂತೆ ಇತರೆ ಫೋನ್‌ಗಳ ಮೇಲೆ ಅಧಿಕ ರಿಯಾಯಿತಿಗಳನ್ನು ಘೋಷಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಇನ್ನು ಫ್ಲಿಪ್‌ಕಾರ್ಟ್ ತಾಣವು ಕೂಡಾ ಬಿಗ್ ಬಿಲಿಯನ್ ಡೇಸ್ ಸೇಲ್‌ 2024 ಪ್ರಾರಂಭಿಸಲಿದ್ದು, ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಫೋನ್‌ಗಳಿಗೆ ಆಕರ್ಷಕ ಕೊಡುಗೆಗಳನ್ನು ಲಭ್ಯ ಮಾಡಲಿದೆ. ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23, ಗೂಗಲ್‌ ಪಿಕ್ಸಲ್‌ 9, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ, ಮೊಟೊರೊಲಾ ಎಡ್ಜ್‌ 50 ಪ್ರೊ ಮತ್ತು ಇತರ ಸ್ಮಾರ್ಟ್‌ಫೋನ್‌ಗಳು ಸಹ ಕಡಿಮೆ ಬೆಲೆಗೆ ಲಭ್ಯವಿರುತ್ತವೆ. ಇನ್ನು ಫ್ಲಿಪ್‌ಕಾರ್ಟ್‌ ಪ್ಲಸ್ ಸದಸ್ಯರಿಗೆ ಇದು ಸೆಪ್ಟೆಂಬರ್ 26 ರಂದು ಪ್ರಾರಂಭವಾಗುತ್ತದೆ.

Best Mobiles in India

English summary
Amazon Great Indian Festival sale 2024 date announced. know deals, offers, discounts and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+