Home
ಸುದ್ದಿಜಾಲ

Amazon Great Indian Festival Sale ಈಗ ಲೈವ್‌: ಈ ಮಸ್ತ್ ಆಫರ್‌ಗಳನ್ನು ಕಳ್ಕೋಬೇಡಿ!

ಬಹುನಿರೀಕ್ಷಿತ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಈಗ ಪ್ರೈಮ್‌ ಸದಸ್ಯರಿಗೆ (Prime Members) ಲೈವ್ ಆಗಿದೆ. ಹಬ್ಬದ ಈ ವಿಶೇಷ ಮಾರಾಟ ಮೇಳದಲ್ಲಿ ಆಯ್ದ ಫೋನ್‌ಗಳು, ಟಿವಿಗಳು, ಸ್ಮಾರ್ಟ್‌ವಾಚ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ಇತರೆ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ನಂಬಲಾಗದ ಡಿಸ್ಕೌಂಟ್‌ಗಳನ್ನು ಕಾಣಬಹುದಾಗಿದೆ. ಇದಲ್ಲದೇ ಆಯ್ದ ಬ್ಯಾಂಕ್‌ಗಳ ಆಫರ್‌ ಸಹ ಗ್ರಾಹಕರು ಪಡೆದುಕೊಳ್ಳಬಹುದು.

ಹೌದು, ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಒಂದು ದಿನ ಮುಂಚೆಯೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಲೈವ್‌ ಆಗಿದೆ. ಇನ್ನು ನಾಳೆ (ಸೆಪ್ಟೆಂಬರ 27 ರಿಂದ) ಎಲ್ಲರಿಗೂ ಈ ಸೇಲ್‌ ಕೊಡುಗೆ ಲಭ್ಯ ಆಗಲಿದೆ. ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಅತ್ಯುತ್ತಮ ಕೊಡುಗೆಗಳನ್ನು ಪಡೆದುಕೊಳ್ಳಲು ಈ ಮಾರಾಟ ಸೂಕ್ತ ಸಮಯ ಎನ್ನಬಹುದಾಗಿದೆ. ಹಾಗಾದರೇ ಈ ಅಮೆಜಾನ್‌ ಸೇಲ್‌ನ ಆಫರ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

Amazon Great Indian Festival Sale ಈಗ ಲೈವ್‌: ಈ ಆಫರ್‌ಗಳನ್ನು ಕಳ್ಕೋಬೇಡಿ!

ಲ್ಯಾಪ್‌ಟಾಪ್‌ಗಳಿಗೆ ಬಿಗ್‌ ಡಿಸ್ಕೌಂಟ್‌

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ಮಾರಾಟದಲ್ಲಿ ಲ್ಯಾಪ್‌ಟಾಪ್‌ಗಳಿಗೆ ಶೇ 44% ವರೆಗೆ ರಿಯಾಯಿತಿ ಘೋಷಿಸಲಾಗಿದೆ. ಈ ಸೇಲ್‌ನಲ್ಲಿ Acer, Asus, Dell ಮತ್ತು Lenovo ನಂತಹ ಜನಪ್ರಿಯ ಸಂಸ್ಥೆಗಳ ಆಯ್ದ ಲ್ಯಾಪ್‌ಟಾಪ್‌ಗಳ ಮೇಲೆ ಸುಮಾರು 45,000ರೂ. ಗಳ ವರೆಗೆ ರಿಯಾಯಿತಿ ಲಭ್ಯವಾಗಲಿದೆ. ಗೇಮಿಂಗ್ ಲ್ಯಾಪ್‌ಟಾಪ್‌, ಬಿಸಿನೆಸ್‌ ಲ್ಯಾಪ್‌ಟಾಪ್‌ ಅಥವಾ ದೈನಂದಿನ ಬಳಕೆಯ ಲ್ಯಾಪ್‌ಟಾಪ್‌ ಹೀಗೆ ಎಲ್ಲ ಬಗೆಯ ಲ್ಯಾಪ್‌ಟಾಪ್‌ಗಳಿಗೆ ಆಫರ್‌ ಕಾಣಬಹುದಾಗಿದೆ.

ಟ್ಯಾಬ್ಲೆಟ್‌ಗಳಿಗೆ ಸೂಪರ್‌ ಆಫರ್‌

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ಮಾರಾಟದಲ್ಲಿ ಟ್ಯಾಬ್‌ಗಳು ಕೂಡಾ ಬೊಂಬಾಟ್‌ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇವೆ. ಪ್ರಮುಖವಾಗಿ Apple, Samsung, Xiaomi ಹಾಗೂ Lenovo ನಂತಹ ಲೀಡಿಂಗ್ ಸಂಸ್ಥೆಗಳ ಟ್ಯಾಬ್ಲೆಟ್‌ಗಳ ಮೇಲೆ 48% ವರೆಗೆ ರಿಯಾಯಿತಿ ಸಿಗಲಿದೆ.

ಸ್ಮಾರ್ಟ್‌ವಾಚ್‌ಗಳಿಗೆ ಸಖತ್ ರಿಯಾಯಿತಿ

ಗ್ರಾಹಕರು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಮಾರಾಟದಲ್ಲಿ ಸ್ಯಾಮ್‌ಸಂಗ್‌, ಶಿಯೋಮಿ ಮತ್ತು ಒನ್‌ಪ್ಲಸ್‌ ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್‌ವಾಚ್‌ಗಳ ಮೇಲೆ 95% ವರೆಗೆ ರಿಯಾಯಿತಿ ಪಡೆಯಬಹುದು. ಇಂದಿನ ಬಹುತೇಕ ಎಲ್ಲ ಸ್ಮಾರ್ಟ್‌ವಾಚ್‌ಗಳು ಆರೋಗ್ಯ ಟ್ರ್ಯಾಕಿಂಗ್ ಹಾಗೂ ಫಿಟ್ನೆಸ್‌ ಟ್ರ್ಯಾಕ್ ಆಯ್ಕೆಗಳನ್ನು ಪಡೆದಿವೆ.

ಇಯರ್‌ಬಡ್‌ಗಳ ಭರ್ಜರಿಗೆ ಕೊಡುಗೆ

ಖರೀದಿದಾರರು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಮಾರಾಟದಲ್ಲಿ Boat, Noise ಮತ್ತು JBL ನಂತಹ ಲೀಡಿಂಗ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ವಾಚ್‌ಗಳ ಮೇಲೆ 78% ವರೆಗೆ ರಿಯಾಯಿತಿ ಪಡೆಯಬಹುದು. ಈ ಇಯರ್‌ಬಡ್ಸ್‌ಗಳು ಬಿಗ್ ಬ್ಯಾಟರಿ, ಅತ್ಯುತ್ತಮ ಆಡಿಯೋ ಕ್ವಾಲಿಟಿಗಳಂತಹ ಆಯ್ಕೆಗಳನ್ನು ಪಡೆದಿವೆ.

ಸ್ಮಾರ್ಟ್‌ಟಿವಿಗಳಿಗೆ ಅಚ್ಚರಿ ಡಿಸ್ಕೌಂಟ್‌

ಗ್ರಾಹಕರು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಸೇಲ್‌ನಲ್ಲಿ Samsung, LG, TCL ಮತ್ತು Xiaomi ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್‌ಟಿವಿಗಳಿಗೆ ಮೇಲೆ 68% ವರೆಗೆ ರಿಯಾಯಿತಿ ಪಡೆಯಬಹುದು.

ರೆಫ್ರಿಜರೇಟರ್‌ ಹಾಗೂ ವಾಶಿಂಗ್‌ ಮಷಿನ್‌ ಆಫರ್‌

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 (Amazon Great Indian Festival 2024) ಸೇಲ್‌ನಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳ ರೆಫ್ರಿಜರೇಟರ್‌ ಮೇಲೆ ಸುಮಾರು 31% ವರೆಗೆ ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಆಯ್ದ ಲೀಡಿಂಗ್ ಬ್ರ್ಯಾಂಡ್‌ಗಳ ವಾಶಿಂಗ್‌ ಮಷಿನ್‌ ಉತ್ಪನ್ನಗಳ ಮೇಲೆ ಶೇ 37% ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು.

Best Mobiles in India

English summary
Amazon Great Indian Festival Sale 2024 LIVE for Prime members. Don't miss this amazing offers on tv, washing machine, smartwatch, earbuds and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+