ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್; ಈ ಫೋನ್‌ಗಳಿಗೆ ಎಂಥಾ ಡಿಸ್ಕೌಂಟ್ ಗೊತ್ತಾ!?
ಅಮೆಜಾನ್‌ನಲ್ಲಿ (Amazon) ಈಗಾಗಲೇ ಹಲವಾರು ವಿಶೇಷ ಸೇಲ್‌ಗಳ ಮೂಲಕ ಗ್ರಾಹಕರು ಅಗ್ಗದ ದರದಲ್ಲಿ ಅತ್ಯುತ್ತಮ ಡಿವೈಸ್‌ಗಳನ್ನು ಖರೀದಿ ಮಾಡಿದ್ದಾರೆ. ಈಗ ಬಹಳ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದ್ದು, ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival Sale) ಬಗ್ಗೆ ಘೋಷಣೆ ಮಾಡಲಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರು ಐಫೋನ್ , ಐಕ್ಯೂ, ಒನ್‌ಪ್ಲಸ್ ಫೋನ್ ಸೇರಿದಂತೆ ಅನೇಕ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಅದೂ ಸಹ ಭಾರೀ ಹಣ ಉಳಿತಾಯ ಮಾಡುವ ಮೂಲಕ. ಹಾಗಿದ್ರೆ, ಈ ವಿಶೇಷ ಸೇಲ್ ಎಲ್ಲಿಯವರೆಗೆ ಇರಲಿದೆ?, ಈ ಫೋನ್‌ಗಳಿಗೆ ಇರುವ ಆಫರ್ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಅಮೆಜಾನ್‌ನಲ್ಲಿ ಈ ವಿಶೇಷ ಸೇಲ್ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅಮೆಜಾನ್‌ನಲ್ಲಿ ಈವೆಂಟ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದ್ದು, ಅಕ್ಟೋಬರ್ 10 ರಂದು ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಮೂಲಕ ದೀಪಾವಳಿ ವೇಳೆಗೆ ಐಫೋನ್ 13(iPhone 13) ಸೇರಿದಂತೆ ಅನೇಕ ಫೋನ್‌ಗಳು ದೊಡ್ಡ ರಿಯಾಯಿತಿಯನ್ನು ಪಡೆಯಲಿವೆ.
ಇನ್ನು ಈ ವಿಶೇಷ ಸೇಲ್‌ನಲ್ಲಿ ಐಫೋನ್ 13, ಒನ್‌ಪ್ಲಸ್ 11R, ಐಕ್ಯೂ ನಿಯೋ 7 ಪ್ರೊ (iPhone 13, OnePlus 11R, IQOO Neo 7 Pro) ಸೇರಿದಂತೆ ಹೆಚ್ಚಿನ 5G ಫೋನ್‌ಗಳು ರಿಯಾಯಿತಿ ಮೂಲಕ ಖರೀದಿ ಮಾಡಬಹುದಾಗಿದೆ. ಟಿಪ್‌ಸ್ಟರ್‌ಗಳಾದ ಮುಕುಲ್ ಶರ್ಮಾ ಮತ್ತು ಅಭಿಷೇಕ್ ಯಾದವ್ ಈವೆಂಟ್‌ನ ಟೀಸರ್ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಅಕ್ಟೋಬರ್ 10 ರಂದು ನಡೆಯಲಿದೆ ಎಂದು ಬಹಿರಂಗಪಡಿಸುತ್ತದೆ.
ಫೋನ್‌ಗಳಲ್ಲಿ ಶೇಕಡಾ 40 ರಷ್ಟು ರಿಯಾಯಿತಿ: ಅಮೆಜಾನ್ ಫೋನ್‌ಗಳು ಮತ್ತು ಟೂಲ್ಸ್‌ಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಭರವಸೆ ನೀಡಲಾಗಿದೆ. ಅದರಲ್ಲೂ ಸ್ಮಾರ್ಟ್ ವಾಚ್‌ಗಳು, ಹೆಡ್‌ಫೋನ್‌ಗಳು ಮತ್ತು ಹೆಚ್ಚಿನವುಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ನಿಗಲಿದೆ ಎನ್ನಲಾಗಿದ್ದು, ಲ್ಯಾಪ್‌ಟಾಪ್ ಖರೀದಿಸಲು ಬಯಸುವವರು ವಿವಿಧ ಡಿವೈಸ್‌ಗಳ ಮೇಲೆ 40,000 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಇದರೊಂದಿಗೆ ಗ್ರಾಹಕರು ಟ್ಯಾಬ್ಲೆಟ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದ್ದು, ಉಳಿದಂತೆ ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಅದಾಗ್ಯೂ ಟೀಸರ್ ಪೇಜ್‌ನಲ್ಲಿ ರಿಯಾಯಿತಿಯನ್ನು ಪಡೆಯುವ ಫೋನ್‌ಗಳ ಕೆಲವು ಹೆಸರುಗಳನ್ನು ಮಾತ್ರ ದೃಢಪಡಿಸಲಾಗಿದೆ.
ಒನ್‌ಪ್ಲಸ್ 11R, ಸ್ಯಾಮ್‌ಸಂಗ್ ಗ್ಯಾಲಕ್ಸಿ S23, ಐಕ್ಯೂ ನಿಯೋ 7 ಪ್ರೊ, ಒನ್‌ಪ್ಲಸ್ 11, ಒನ್‌ಪ್ಲಸ್ ನಾರ್ಡ್ 3, ಮೊಟೊರೊಲಾ ರೇಜರ್ 40 ಅಲ್ಟ್ರಾ ಸೇರಿದಂತೆ ಇನ್ನೂ ಅನೇಕ ಸ್ಮಾರ್ಟ್‌ಫೋನ್‌ಗಳು ದೊಡ್ಡ ಕೊಡುಗೆಯೊಂದಿಗೆ ಕಾಣಿಸಿಕೊಳ್ಳಲಿವೆ. ಇದರೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M14, ಐಕ್ಯೂ Z6 ಲೈಟ್, ರೆಡ್ಮಿ 12, ಒನ್‌ಪ್ಲಸ್ ನಾರ್ಡ್ CE 3 ಲೈಟ್, ಐಕ್ಯೂ Z7s ಸೇರಿದಂತೆ ಇತರೆ ಜನಪ್ರಿಯ ಫೋನ್‌ಗಳು ಸಹ ಕಡಿಮೆ ಬೆಲೆಗೆ ಲಭ್ಯ ಇರಲಿವೆ ಎಂದು ತಿಳಿದುಬಂದಿದೆ.

ಫ್ಲಿಪ್‌ಕಾರ್ಟ್‌ನಲ್ಲೂ ಬಿಗ್ ಸೇವಿಂಗ್ ಡೇಸ್ ಸೇಲ್: ಈ ನಡುವೆ ಮತ್ತೊಂದು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಇದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಮತ್ತು ಐಫೋನ್‌ಗಳು ಸಹ ಸೇರಿವೆ. ಐಫೋನ್ ಡೀಲ್‌ಗಳನ್ನು ಅಕ್ಟೋಬರ್ 1 ರಂದು ಬಹಿರಂಗಪಡಿಸಲಾಗುವುದು ಎಂದು ಟೀಸರ್ ಪೇಜ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಅಷ್ಟೇ ಅಲ್ಲದೆ ರಿಯಲ್‌ಮಿ ಫೋನ್ ಡೀಲ್‌ಗಳು ಅಕ್ಟೋಬರ್ 6 ರಂದು ಲೈವ್ ಆಗಲಿದ್ದು, ರೆಡ್ಮಿ ಫೋನ್ ಅಭಿಮಾನಿಗಳು ಅಕ್ಟೋಬರ್ 7 ರವರೆಗೆ ಕಾಯಬೇಕಾಗಿದೆ. ಜೊತೆಗೆ ಒಪ್ಪೋ ಡೀಲ್‌ಗಳನ್ನು ಅಕ್ಟೋಬರ್ 8 ರಂದು ನಡೆಸಲಾಗುತ್ತದೆ. ಉಳಿದಂತೆ ಅಕ್ಟೋಬರ್ 8 ರಂದು ಪೊಕೊ ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.


Click it and Unblock the Notifications








