ಅಮೆಜಾನ್‌ ಸೇಲ್‌ 2021: ಈ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಬಿಗ್ ಡಿಸ್ಕೌಂಟ್‌!

|

ಆನ್‌ಲೈನ್‌ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿರುವ ಅಮೆಜಾನ್ ಆಯೋಜಿಸುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮತ್ತೆ ಬಂದಿದೆ. ಈ ಸೇಲ್ ಮೇಳವು ಇದೇ ಅಕ್ಟೋಬರ್ 4 ರಂದು ಆರಂಭವಾಗುವುದನ್ನು ದೃಢಪಡಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಈ ಸೇಲ್‌ ಹೆಚ್ಚು ಆಕರ್ಷಕ ಎನಿಸಲಿದ್ದು, ಎಲ್ಲ ಬಗೆಯ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ. ಅದಾಗ್ಯೂ ಮುಖ್ಯವಾಗಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಬಿಗ್ ರಿಯಾಯಿತಿ ಲಭ್ಯವಾಗಲಿದ್ದು, ಸ್ಮಾರ್ಟ್‌ವಾಚ್, ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಅಟ್ರ್ಯಾಕ್ಟ್‌ ಆಗಲಿದೆ.

ಅಮೆಜಾನ್‌ ಸೇಲ್‌ 2021: ಈ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇದೇ ಅಕ್ಟೋಬರ್ 4 ರಂದು ಪ್ರಾರಂಭ ಆಗಲಿದೆ. ಈ ಸೇಲ್‌ ಮೇಳದಲ್ಲಿ ಫಿಟ್ನೆಸ್ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಯನ್ನು ಸೂಚಿಸುತ್ತದೆ. ಹೀಗಾಗಿ ಸ್ಮಾರ್ಟ್‌ವಾಚ್, ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳನ್ನು ಖರೀದಿಸಲು ಗ್ರಾಹಕರಿಗೆ ಇದು ಸೂಕ್ತ ಸಮಯ ಎನಿಸಲಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಹೆಚ್ಚಿನ ರಿಯಾಯಿತಿಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ಗಳ ಬಗ್ಗೆ ಈ ಲೇಖನದಲ್ಲಿ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ ಮಿ ಬ್ಯಾಂಡ್ 6
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಶಿಯೋಮಿಯ ಹೊಸ ಮಿ ಬ್ಯಾಂಡ್ 6 ಡಿವೈಸ್‌ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಬ್ಯವಾಗಲಿದೆ. ಈ ಡಿವೈಸ್ 5 1.1 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 126x294 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಅಲ್ಲದೇ ಇದು 11.9 ಗ್ರಾಂ ತೂಕವನ್ನು ಒಳಗೊಂಡಿದೆ. ಹಾಗೆಯೇ ಈ ಫಿಟ್ನೆಸ್ ಬ್ಯಾಂಡ್ ಒಟ್ಟು 11 ಸ್ಟೋರ್ಟ್ಸ್‌ ವಿಧಾನಗಳನ್ನು ಪಡೆಯುತ್ತದೆ. ಇದರೊಂದಿಗೆ 24 ಗಂಟೆಗಳ ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆ/ಒತ್ತಡದ ಟ್ರ್ಯಾಕಿಂಗ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಫೀಚರ್ ಹೊಂದಿದೆ. ಅಲ್ಲದೇ 5ATM ನೀರು-ನಿರೋಧಕವಾಗಿದೆ. 125mAh ಬ್ಯಾಟರಿ ಇದ್ದು, 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ.

ಅಮೆಜಾನ್‌ ಸೇಲ್‌ 2021: ಈ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಒನ್‌ಪ್ಲಸ್ ಬ್ಯಾಂಡ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಒನ್‌ಪ್ಲಸ್ ಬ್ಯಾಂಡ್ ಡಿವೈಸ್‌ ಸಹ ಬಿಗ್ ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ. ಒನ್‌ಪ್ಲಸ್ ಬ್ಯಾಂಡ್ ಬಜೆಟ್‌ ದರದಲ್ಲಿ ಖರೀದಿಸಲು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಡಿವೈಸ್ 1.6 ಇಂಚಿನ AMOLED ಡಿಸ್‌ಪ್ಲೇಯನ್ನು 126x294 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದಿದೆ. ಸುಮಾರು 13 ಫಿಟ್ನೆಸ್ ವ್ಯಾಯಾಮ ವಿಧಾನಗಳು, ರಕ್ತ ಆಮ್ಲಜನಕ ಸಂವೇದಕ ಮತ್ತು ಆಪ್ಟಿಕಲ್ ಹೃದಯ ಬಡಿತ ಸಂವೇದಕ ಆಯ್ಕೆ ಹೊಂದಿದೆ. ಒನ್‌ಪ್ಲಸ್ ಬ್ಯಾಂಡ್ IP68 ಪ್ರಮಾಣೀಕರಣ ಮತ್ತು 5 ಎಟಿಎಂ ನೀರಿನ ಪ್ರತಿರೋಧವನ್ನು ಹೊಂದಿದೆ. ಇದಲ್ಲದೇ, ಇದು 100mAh ಬ್ಯಾಟರಿಯನ್ನು 14 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ನಾಯಿಸ್‌ ಕಲರ್‌ಫಿಟ್‌ ಪ್ರೊ 2
ನಾಯಿಸ್‌ ಕಲರ್‌ಫಿಟ್‌ ಪ್ರೊ 2 ಡಿವೈಸ್‌ ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದೆ. ಈ ಡಿವೈಸ್ ಪ್ರಮುಖ ಅಂಶವೆಂದರೆ ಅದರ ದೊಡ್ಡ 1.3 TFT ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೇ IP68 ಧೂಳು ಮತ್ತು ನೀರಿನ ಪ್ರತಿರೋಧದೊಂದಿಗೆ ಬರುತ್ತದೆ. ಇದರೊಂದಿಗೆ ಆರೋಗ್ಯ ಟ್ರ್ಯಾಕಿಂಗ್ ಫೀಚರ್ಸ್‌ಗಳಾದ 24 ಗಂಟೆಗಳ ಹೃದಯ ಬಡಿತ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್, ಮೆನ್ಸ್ಟ್ರುವಲ್ ಸೈಕಲ್ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಹಾಗೆಯೇ ಇದು 210mAh ಬ್ಯಾಟರಿ ಹೊಂದಿದ್ದು, 10 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.

ಅಮೆಜಾನ್‌ ಸೇಲ್‌ 2021: ಈ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಒಪ್ಪೋ ಬ್ಯಾಂಡ್ ಸ್ಟೈಲ್‌
ಅಮೆಜಾನ್‌ನ ಸೇಲ್‌ನಲ್ಲಿ ಒಪ್ಪೋ ಬ್ಯಾಂಡ್ ಸ್ಟೈಲ್‌ ಡಿವೈಸ್‌ ಸಹ ಆಕರ್ಷಕ ರಿಯಾಯಿತಿಯಲ್ಲಿ ಸಿಗಲಿದೆ. ಇದು 1.1 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿವೈಸ್ ವಾಕಿಂಗ್, ಸೈಕ್ಲಿಂಗ್, ಈಜು, ಬ್ಯಾಡ್ಮಿಂಟನ್, ಕ್ರಿಕೆಟ್ ಸೇರಿದಂತೆ ಒಟ್ಟು 12 ವರ್ಕೌಟ್ ಮೋಡ್‌ಗಳನ್ನು ಒಳಗೊಂಡಿದೆ. ಹಾಗೆಯೇ ಇದು SPO2 ಮೇಲ್ವಿಚಾರಣೆ, ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು ಸ್ಲೀಪ್ ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಪಡೆದಿದೆ. ಇದು 100mAh ನಿಂದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 12 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ ಎಂದು ಹೇಳಲಾಗಿದೆ.

ಹಾನರ್ ಬ್ಯಾಂಡ್ 5i
ಅಮೆಜಾನ್‌ ಸೇಲ್‌ನಲ್ಲಿ ಹಾನರ್ ಬ್ಯಾಂಡ್ 5i ಡಿವೈಸ್‌ ಸಹ ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ. ಈ ಡಿವೈಸ್ 0.96-ಇಂಚಿನ ಡಿಸ್ಪ್ಲೇಯನ್ನು 160x80 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಜೊತೆಗೆ ಸ್ಮಾರ್ಟ್ ಬ್ಯಾಂಡ್ ಆಪ್ಟಿಕಲ್ ಹೃದಯ ಬಡಿತ ಸಂವೇದಕ, 3-ಅಕ್ಷದ ಜಡ ಸಂವೇದಕ ಹೊಂದಿದೆ. ಹಾಗೆಯೇ ಒಟ್ಟು 9 ಸ್ಪೋರ್ಟ್ಸ್‌ ವಿಧಾನಗಳು ಹೊಂದಿದ್ದು, ಅದರೊಂದಿಗೆ 5ATM ನೀರಿನ ಪ್ರತಿರೋಧವನ್ನು ಹೊಂದಿದೆ. ಈ ಡಿವೈಸ್ 91mAh ಬ್ಯಾಟರಿ ಹೊಂದಿದ್ದು, 9 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆಯುತ್ತದೆ.

Most Read Articles
Best Mobiles in India

English summary
Amazon Great Indian Festival Sale: Best Discount On These Fitness Bands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X