ಅಮೆಜಾನ್ ಸೇಲ್‌ನಲ್ಲಿ ಈ ಪ್ರಮುಖ ಡಿವೈಸ್‌ಗಳಿಗೂ ಬಿಗ್ ಆಫರ್!
ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಜನಪ್ರಿಯ ಇ-ಕಾಮರ್ಸ್ ದೈತ್ಯ ಅಮೆಜಾನಿನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗ ಚಾಲ್ತಿಯಲ್ಲಿದೆ. ಪ್ರತಿಷ್ಠಿತ ಮೊಬೈಲ್ ಕಂಪನಿಗಳ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳು ವಿಶೇಷ ಡಿಸ್ಕೌಂಟ್ ಪಡೆದಿವೆ. ಸ್ಮಾರ್ಟ್‌ಫೋನ್ ಅಷ್ಟೆ ಅಲ್ಲದೇ ಲ್ಯಾಪ್‌ಟಾಪ್, ಸ್ಮಾರ್ಟ್ ವಾಚ್, ಸ್ಮಾರ್ಟ್ ಬ್ಯಾಂಡ್ ಸೇರಿದಂತೆ ಅಗತ್ಯ ಗ್ಯಾಡ್ಜೆಟ್ಸ್ ಉತ್ಪನ್ನಗಳಿಗೂ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ.

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಕೆಲವು ಗ್ಯಾಡ್ಜೆಟ್ಸ್ ವಸ್ತುಗಳಿಗೆ ಹೆಚ್ಚಿನ ರಿಯಾಯಿತಿ ಲಭ್ಯ ಇವೆ. ಮುಖ್ಯವಾಗಿ ಹೆಡ್‌ಫೋನ್, ಇಯರ್‌ಫೋನ್, ಸ್ಪೀಕರ್ಸ್, ಟ್ಯಾಬ್ಸ್, ಮಾನಿಟರ್‌ಗಳು, ಪ್ರಿಂಟರ್ ಹಾಗೂ ಸ್ಮಾರ್ಟ್ ಟಿವಿ ಗಳು ರಿಯಾಯಿತಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಅಮೆಜಾನ್ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ಗಳಿಗೆ ಲಭ್ಯವಿರುವ ರಿಯಾಯಿತಿಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಲ್ಯಾಪ್‌ಟಾಪ್ ಉತ್ಪನ್ನಗಳು
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳಿಗೆ ಸುಮಾರು 30,000ರೂ. ವರೆಗೂ ಡಿಸ್ಕೌಂಟ್ ತಿಳಿಸಲಾಗಿದೆ. ಹಾಗೆಯೇ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಸುಮಾರು 35,000ರೂ. ವರೆಗೂ ರಿಯಾಯಿತಿ ಪಡೆದಿವೆ. ನೋ ಕಾಸ್ಟ್ ಇಎಮ್‌ಐ, ಎಕ್ಸ್‌ಚೇಂಜ್ ಕೊಡುಗೆ ಸಹ ಇವೆ. ಹೆಚ್‌ಪಿ, ಡೆಲ್, ಲೆನೊವಾ ಸೇರಿದಂತೆ ಬ್ರ್ಯಾಂಡೆಡ್ ಲ್ಯಾಪ್‌ಟಾಪ್‌ಗಳು ಆಫರ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ.

ಹೆಡ್‌ಫೋನ್ ಉತ್ಪನ್ನಗಳು
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಹೆಡ್‌ಫೋನ್‌ಗಳಿಗೆ ಶೇ. 75% ಪರ್ಸೆಂಟ್ ವರೆಗೂ ಡಿಸ್ಕೌಂಟ್ ಇದೆ. ಸೋನಿ, ಬೋಟ್, ಸ್ಯಾಮ್‌ಸಂಗ್, ಮಿ, ಸಂಸ್ಥೆಯ ಹೆಡ್‌ಫೋನ್‌ಗಳಿಗೂ ವಿಶೇಷ ರಿಯಾಯಿತಿ ನೀಡಲಾಗಿದೆ.

ಕ್ಯಾಮೆರಾ ಉತ್ಪನ್ನಗಳು
ಸದ್ಯ ಚಾಲ್ತಿ ಇರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಕ್ಯಾಮೆರಾ ಡಿವೈಸ್‌ಗಳಿಗೂ ಹೆಚ್ಚಿನ ರಿಯಾಯಿತಿ ತಿಳಿಸಲಾಗಿದೆ. ಪ್ರಮುಖ ಕ್ಯಾಮೆರಾಗಳಿಗೆ ಗಳಿಗೆ ಶೇ. 60% ಪರ್ಸೆಂಟ್ ವರೆಗೂ ಡಿಸ್ಕೌಂಟ್ ಇದೆ.

ಇತರೆ ಡಿವೈಸ್‌ಗಳು
ಅಮೆಜಾನ್‌ನಲ್ಲಿ ಫೋನ್, ಲ್ಯಾಪ್‌ಟಾಪ್ ಬೆಸ್ಟ್ ಆಫರ್ ಇದೆ. ಹಾಗೆಯೇ ಸೇಲ್‌ನಲ್ಲಿ ವಾಯರ್ ಲೆಸ್ ಇಯರ್‌ಫೋನ್ ಗಳಿಗೆ 70%, ಪ್ರಿಂಟರ್ ಡಿವೈಸ್‌ಗಳಿಗೆ 50%, ಮಾನಿಟರ್‌ಗಳಿಗೆ ಶೇ.50% ರಿಯಾಯಿತಿ ಘೋಷಿಸಲಾಗಿದೆ.


Click it and Unblock the Notifications








