Home
ಸುದ್ದಿಜಾಲ

'ಐಫೋನ್‌ 11'ಗೆ ಅಮೆಜಾನ್ ನೀಡಿರುವ ಆಫರ್‌ ತಿಳಿದ್ರೆ, ನೀವು ಹುಬ್ಬೇರಿಸುವುದು ಪಕ್ಕಾ!

ಸದಾ ಒಂದಿಲ್ಲೊಂದು ಸ್ಪೆಷಲ್ ಆಫರ್‌ಗಳಿಂದ ಗುರುತಿಸಿಕೊಂಡಿರುವ ಇ-ಕಾಮರ್ಸ್ ದೈತ್ಯ ಅಮೆಜಾನ್ ಆನ್‌ಲೈನ್‌ ಶಾಪಿಂಗ್ ಪ್ರಿಯರ ಫೇವರೇಟ್‌ ತಾಣವೆನಿಸಿದೆ. ಸೇಲ್‌ನಲ್ಲಿ ಮುಖ್ಯವಾಗಿ ಗ್ಯಾಡ್ಜೆಟ್ಸ್‌ಗಳಿಗೆ ಭಾರೀ ರಿಯಾಯಿತಿ ನೀಡುತ್ತದೆ. ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಇದೀಗ ಅಮೆಜಾನ್ ಸಂಸ್ಥೆಯು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ಸೇಲ್‌ ಘೋಷಿಸಿದೆ. ಈ ಸೇಲ್‌ನಲ್ಲಿ ಆಯ್ದ ಐಫೋನ್‌ ಡಿವೈಸ್‌ಗಳಿಗೆ ಆಕರ್ಷಕ ಕೊಡುಗೆ ತಿಳಿಸಿದೆ.

ಐಫೋನ್‌ 11'ಗೆ ಅಮೆಜಾನ್ ನೀಡಿರುವ ಆಫರ್‌ ತಿಳಿದ್ರೆ, ನೀವು ಹುಬ್ಬೇರಿಸುವುದು ಪಕ್ಕಾ

ಹೌದು, ಅಮೆಜಾನ್ ಇ-ಕಾಮರ್ಸ್ ತಾಣವು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ಅನ್ನು ಘೋಷಿಸಿದೆ. ಇನ್ನು ಈ ಸೇಲ್ ಇದೇ ಅಕ್ಟೋಬರ್ 3ರಂದು ಪ್ರಾರಂಭವಾಗಲಿದೆ. ಮೇಳದಲ್ಲಿ ಆಪಲ್‌ ಕಂಪೆನಿಯ ನೂತನ ಐಫೋನ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಮುಖ್ಯವಾಗಿ ಐಫೋನ್ 11 ಸ್ಮಾರ್ಟ್‌ಫೋನ್‌ ಭಾರಿ ಡಿಸ್ಕೌಂಟ್‌ ಲಭ್ಯವಾಗಿದೆ. ಹಾಗಾದರೇ ಅಮೆಜಾನ್ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ನಲ್ಲಿ ಭಾರಿ ಡಿಸ್ಕೌಂಟ್ ಪಡೆಯುವ ಐಫೋನ್‌ 11 ಆಫರ್ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಐಫೋನ್‌ 11'ಗೆ ಅಮೆಜಾನ್ ನೀಡಿರುವ ಆಫರ್‌ ತಿಳಿದ್ರೆ, ನೀವು ಹುಬ್ಬೇರಿಸುವುದು ಪಕ್ಕಾ

ಅಮೆಜಾನ್‌ನಲ್ಲಿ ಈ ಸೇಲ್ ಮೇಳದಲ್ಲಿ ಜನಪ್ರಿಯ ಆಪಲ್ ಐಫೋನ್ 11 ಫೋನ್ 38,999ರೂ.ಗಳಿಗೆ ಲಭ್ಯವಾಗಲಿದೆ ಎಂದು ಅಮೆಜಾನ್ ಸೇಲ್‌ ಪೇಜ್ ಸೂಚನೆಯನ್ನು ನೀಡಿದೆ. ಐಫೋನ್ 11 ಸದ್ಯ ಎರಡು ವರ್ಷ ಹಳೆಯದಾಗಿದ್ದರೂ, ಇತ್ತೀಚಿಗಿನ ಐಫೋನ್ 12 ಮತ್ತು ಐಫೋನ್ 13 ನಂತಹ ಹೊಸ ಮಾದರಿಗಳ ನಡುವೆ ಜನಪ್ರಿಯತೆ ಉಳಿಸಿಕೊಂಡಿದೆ. ಇನ್ನು ಈ ಐಫೋನ್ 11 ಫೋನ್ A13 ಬಯೋನಿಕ್ ಚಿಪ್‌ಸೆಟ್‌ ಸಪೋರ್ಟ್‌ ಪಡೆದಿದ್ದು, ಅತ್ಯುತ್ತಮ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಐಫೋನ್‌ 11, ಐಫೋನ್ 12 ಮತ್ತು ಐಫೋನ್ 13 ಫೀಚರ್ಸ್‌ಗಳು ಹೇಗಿವೆ ಮುಂದೆ ನೋಡೋಣ ಬನ್ನಿರಿ.

ಐಫೋನ್ 11
ಆಪಲ್ ಸಂಸ್ಥೆಯು ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

ಐಫೋನ್‌ 11'ಗೆ ಅಮೆಜಾನ್ ನೀಡಿರುವ ಆಫರ್‌ ತಿಳಿದ್ರೆ, ನೀವು ಹುಬ್ಬೇರಿಸುವುದು ಪಕ್ಕಾ

ಐಫೋನ್ 12
ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13
ಐಫೋನ್ 13 ಫೋನ್‌ ಫೀಚರ್ಸ್‌ ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಐಫೋನ್ 13 ಮಿನಿ ಫೋನ್‌ ಫೀಚರ್ಸ್‌
ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Amazon Great Indian Festival Sale: Big Discount On iPhone 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+