Amazon: ಸಿದ್ಧರಾಗಿ....ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ದಿನಾಂಕ ಘೋಷಣೆ!
ದೇಶದ ಜನರು ಬಹಳ ಕುತೂಹಲದಿಂದ ಕಾಯುತ್ತಿದ್ದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ದಿನಾಂಕಗಳನ್ನು ಘೋಷಣೆ ಮಾಡಲಾಗಿದೆ. ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರು ನಿರೀಕ್ಷೆ ಮಾಡಿರದ ಕಡಿಮೆ ಬೆಲೆಗೆ ಸ್ಮಾರ್ಟ್ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಅಕ್ಟೋಬರ್ 8 ರಿಂದ 15 ರವರೆಗೆ ನಡೆಯಲಿದ್ದು, ಈಗಾಗಲೇ ಸಾಕಷ್ಟು ಜನರು ಈ ದಿನಾಂಕಕ್ಕೆ ಕಾಯುತ್ತಿದ್ದಾರೆ. ಅದರಂತೆ ಈಗ ಅಮೆಜಾನ್ ಫ್ಲಿಪ್‌ಕಾರ್ಟ್ ನೊಂದಿಗೆ ಸ್ಪರ್ಧಿಸಲು ತನ್ನ ವಿಶೇಷ ಸೇಲ್‌ನ ದಿನಾಂಕ ಪ್ರಕಟಿಸಿದೆ. ಹಾಗಿದ್ರೆ, ಯಾವಾಗ ಈ ವಿಶೇಷ ಸೇಲ್ ಆರಂಭ ಆಗಲಿದೆ?, ಈ ಸೇಲ್‌ನಲ್ಲಿ ಏನೆಲ್ಲಾ ಆಫರ್ ಇರಲಿದೆ ಎಂಬ ಮಾಹಿತಿಯನ್ನು ಈ ಮೂಲಕ ತಿಳಿದುಕೊಳ್ಳಿ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ದಿನಾಂಕ ಪ್ರಕಟ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival Sale) ಆಫರ್‌ಗಳು ಅಕ್ಟೋಬರ್ 8 ರಿಂದ ಸಾಮಾನ್ಯ ಬಳಕೆದಾರರಿಗೆ ಲಭ್ಯವಿದ್ದರೆ, ಅಮೆಜಾನ್ ಪ್ರೈಮ್ ಸದಸ್ಯರು ಎಂದಿನಂತೆ ಅಕ್ಟೋಬರ್ 7ರ ಮಧ್ಯರಾತ್ರಿಯಿಂದ ಮಾರಾಟದ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ ಎಂದು ಅಮೆಜಾನ್ ತಿಳಿಸಿದೆ.
ಈ ಹಬ್ಬದ ಋತುವಿನಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಸೇಲ್ ಉತ್ತುಂಗದಲ್ಲಿದ್ದು, ಎಲ್ಲಾ ಬ್ರ್ಯಾಂಡ್‌ಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳು ಈ ಸಮಯದಲ್ಲಿ ತಮ್ಮದೇ ಆದ ವಿಶೇಷ ರಿಯಾಯಿತಿಗಳನ್ನು ಪ್ರಕಟಿಸುತ್ತವೆ. ಇದಕ್ಕಾಗಿಯೇ ಜನರು ತಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿ ಮಾಡಲು ಕಾಯುತ್ತಾ ಕುಂತಿದ್ದಾರೆ. ಜೊತೆಗೆ ಈ ಮೂಲಕ ಹಣವನ್ನೂ ಸಹ ಉಳಿತಾಯ ಮಾಡಬಹುದಾಗಿದೆ.
ಇನ್ನು ಫ್ಲಿಪ್‌ಕಾರ್ಟ್‌ಗೆ ಸ್ಪರ್ಧಿಸಲು ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ಗಿಂತ ಉತ್ತಮ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪ್ರಕಟಿಸುತ್ತದೆ ಎಂದು ತಿಳಿದುಬಂದಿದೆ. ಅಮೆಜಾನ್ ಈಗಾಗಲೇ ಅದರ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದೆ. ಅದರಲ್ಲೂ ಮೊಬೈಲ್‌ಗಳು ಮತ್ತು ಇತರೆ ಟೂಲ್ಸ್‌ಗಳ ಮೇಲೆ ಶೇಕಡಾ 40 ರಷ್ಟು ಮತ್ತು ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರೆ ಡಿವೈಸ್ ಮೇಲೆ ಶೇಕಡಾ 75 ರಷ್ಟು ರಿಯಾಯಿತಿಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಎಸ್‌ಬಿಐ ಕಾರ್ಡ್‌ದಾರರು 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ ಎಂದು ತಿಳಿದುಬಂದಿದ್ದು, ಮೊಬೈಲ್ ಫೋನ್‌ಗಳು, ಟೂಲ್ಸ್‌ಗಳು, ಸ್ಮಾರ್ಟ್ ವಾಚ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಡಿವೈಸ್, ಸ್ಮಾರ್ಟ್ ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳ ಮೇಲೆ ಲಭ್ಯವಿರುವ ರಿಯಾಯಿತಿಗಳನ್ನು ಸೂಚಿಸುವ ವೆಬ್‌ಪುಟವು ಅಮೆಜಾನ್‌ನಲ್ಲಿ ಈಗ ಕಾಣಿಸಿಕೊಂಡಿದೆ.
ಅದರಲ್ಲೂ ಪ್ರಮುಖವಾಗಿ ಆಪಲ್, ಅಸುಸ್, ಲೆನೊವೊ. ಒನ್‌ಪ್ಲಸ್, ಐಕ್ಯೂ ರಿಯಲ್‌ಮಿ, ಸ್ಯಾಮ್‌ಸಂಗ್ ಹಾಗೂ ಸೋನಿ ಸೇರಿದಂತೆ ಭಾರತೀಯ ಮತ್ತು ಜಾಗತಿಕ ಬ್ರಾಂಡ್‌ಗಳ ಡಿವೈಸ್‌ಗಳಿಗೆ ಈ ವಿಶೇಷ ಸೇಲ್‌ನಲ್ಲಿ ದೊಡ್ಡ ರಿಯಾಯಿತಿಗಳನ್ನು ಪಡೆಯುತ್ತವೆ. ಇಷ್ಟೇ ಅಲ್ಲದೆ ಅಮೆಜಾನ್ ಆಫರ್ ಸೇಲ್ ಅಮೆಜಾನ್ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳನ್ನೂ ಸಹ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ.
ಇದರೊಂದಿಗೆ ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ಈಗಾಗಲೇ ಅಮಜಾನ್ ಲೈವ್ ಮಾಡಿದೆ. ಅಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23, ನೋಕಿಯಾ G42, ಒಟೊರೊಲಾ ರೋಜರ್ 40, ಟೆಕ್ನೋಪೋವಾ 5 ಪ್ರೊ, ರೆಡ್ಮಿ 10 ಪವರ್ ಮತ್ತು ಲಾವಾ ಅಗ್ನಿ 2 ಫೋನ್‌ಗಳನ್ನು ಪಟ್ಟಿ ಮಾಡಲಾಗಿದ್ದು, ಈ ಫೋನ್‌ಗಳಿಗೆ ದೊಡ್ಡ ರಿಯಾಯಿತಿ ನೀಡಲಾಗಿದ. ಈ ಮೂಲಕ ನೀವು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಅಷ್ಟೇ ಅಲ್ಲದೆ ಒನ್‌ಪ್ಲಸ್ ನಾರ್ಡ್ 3, ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮತ್ತು ರೆಡ್ಮಿ 12 5G ಫೋನ್‌ಗಳು ಸಹ ಈ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಮಾರಾಟವು ಅಮೆಜಾನ್ ಪೇ ಆಧಾರಿತ ಪಾವತಿ ಕೊಡುಗೆಗಳು ಮತ್ತು ಕೂಪನ್ ರಿಯಾಯಿತಿಗಳನ್ನು ಸಹ ಹೊಂದಿದ್ದು, ಅಮೆಜಾನ್ ಪ್ರೈಮ್ ಸದಸ್ಯರು ಆರಂಭಿಕ ಪ್ರವೇಶ ಮತ್ತು ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








