ಅಮೆಜಾನ್ v/s ಫ್ಲಿಪ್‌ಕಾರ್ಟ್: ಮುಂಬರುವ ವಿಶೇಷ ಸೇಲ್‌ನಲ್ಲಿ ಹೆಚ್ಚಿನ ಆಫರ್ ಎಲ್ಲಿ ಲಭ್ಯ?
ಆಫರ್ ಬೆಲೆಗೆ ಸ್ಮಾರ್ಟ್ ಡಿವೈಸ್ ಸೇರಿದಂತೆ ಅಗತ್ಯ ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಖರೀದಿ ಮಾಡಲು ಇದು ಸದಾಕಾಲ ಎನ್ನಬಹುದು. ಅಂದರೆ ಪ್ರಮುಖ ಇ ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ (Amazon and Flipkart) ವಿಶೇಷ ಸೇಲ್ ಆಯೋಜನೆ ಮಾಡಲಾಗುತ್ತಿದೆ. ಈ ಮೂಲಕ ಈ ಹಿಂದೆ ಎಂದೂ ನೀಡದ ಆಫರ್ ಅನ್ನು ನೀಡಲಾಗುತ್ತಿದೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಹಾಗೂ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ದಿನಾಂಕ ಘೋಷಣೆ ಆಗಿದ್ದು, ಈಗಾಗಲೇ ಸಾಕಷ್ಟು ಗ್ರಾಹಕರು ಈ ಸೇಲ್‌ನಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದಾರೆ. ಹಾಗಿದ್ರೆ, ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಡಿಸ್ಕೌಂಟ್ ನೀಡಲಾಗುತ್ತದೆ ಎಂಬ ಇಂಟ್ರೆಸಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬಹು ನಿರೀಕ್ಷಿತ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ದಿನಾಂಕ ಘೋಷಣೆ ಮಾಡಿದಂತೆ ಈಗ ಎರಡೂ ಇ-ಕಾಮರ್ಸ್ ದೈತ್ಯರು ಬ್ಯಾಂಕ್ ಕೊಡುಗೆಗಳು ಮತ್ತು ರಿಯಾಯಿತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 8 ರಂದು ಈ ಸೇಲ್ ಆರಂಭ ಆಗಲಿದ್ದು, ಈ ವಾರ್ಷಿಕ ಮಾರಾಟದ ಸಂಭ್ರಮಗಳು ಡೀಲ್‌ಗಳ ಭಂಡಾರದ ಭರವಸೆಯನ್ನೇ ನೀಡುತ್ತವೆ. ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಿಂದ ಕಂಪ್ಯೂಟರ್‌ಗಳು ಮತ್ತು ವೈರ್‌ಲೆಸ್ ಇಯರ್‌ಫೋನ್‌ಗಳವರೆಗೆ ನೀವು ಸಂಭ್ರಮಿಸುವಷ್ಟು ಅಫರ್ ನೀಡಲಾಗುತ್ತದೆ.
ಅದರಲ್ಲೂ ಅಮೆಜಾನ್‌ನ ಕಿಕ್‌ಸ್ಟಾರ್ಟರ್ ಡೀಲ್‌ಗಳು ಮತ್ತು ಫ್ಲಿಪ್‌ಕಾರ್ಟ್‌ನ 'ಸೇಲ್ ಪ್ರೈಸ್ ಲೈವ್' ಪ್ರಚಾರಗಳ ಮೂಲಕ ಶಾಪರ್‌ಗಳು ಆರಂಭಿಕ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅಂದರೆ ಮಾರಾಟದ ಸಮಯದಲ್ಲಿ ಅರ್ಹ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಮೂಲಕ ಗ್ರಾಹಕರು ತಮ್ಮ ಉಳಿತಾಯವನ್ನು ಸೂಪರ್‌ಚಾರ್ಜ್ ಮಾಡಬಹುದಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಏನೆಲ್ಲಾ ಬ್ಯಾಂಕ್ ಅಫರ್ ಇದೆ?: ಆಕ್ಸಿಸ್ ಬ್ಯಾಂಕ್, ಕೊಟಕ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ದಾರರು ತಮ್ಮ ಖರೀದಿಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಎಕ್ಸ್‌ಚೇಂಜ್ ಡಿಸ್ಕೌಂಟ್‌ಗಳು ಸಹ ಲಭ್ಯವಿದ್ದು, ಈ ಮೂಲಕ ಬೆಲೆಗಳು ಮತ್ತಷ್ಟು ಕಡಿಮೆ ಆಗಲಿವೆ. ಇಷ್ಟೇ ಅಲ್ಲದೆ ನಿಮ್ಮ ಮುಂದಿನ ಖರೀದಿಯ ವೆಚ್ಚವನ್ನು ಕಡಿಮೆ ಮಾಡಲು ಫ್ಲಿಪ್‌ಕಾರ್ಟ್‌ನ ಸೂಪರ್ ಕಾಯಿನ್ ಸೌಲಭ್ಯ ಬಳಕೆ ಮಾಡಬಹುದು.
ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 : ಎಸ್‌ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ದಾರರು ಆನ್‌ಲೈನ್ ವಹಿವಾಟುಗಳಲ್ಲಿ ತ್ವರಿತ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಫ್ಲಿಪ್‌ಕಾರ್ಟ್‌ನಂತೆಯೇ, ಅಮೆಜಾನ್ ಹಳೆಯ ಡಿವೈಸ್‌ಗಳ ವಿನಿಮಯ ವ್ಯವಹಾರಗಳನ್ನು ಸಹ ನೀಡುತ್ತದೆ. ಇದು ನಿಮಗೆ ಹೆಚ್ಚಿನದನ್ನು ಉಳಿಸಲು ಸಹಾಯ ಮಾಡುತ್ತದೆ.
ಪ್ರೈಮ್ ಮತ್ತು ಪ್ಲಸ್ ಸದಸ್ಯರಿಗೆ ಏನಿದೆ ಆಫರ್?: ಅಮೆಜಾನ್ ಪ್ರೈಮ್ ಚಂದಾದಾರರು ಮತ್ತು ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಈ ಮೆಗಾ ಮಾರಾಟದ ಈವೆಂಟ್‌ಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಪಡೆಯಲಿದ್ದಾರೆ. ಅಮೆಜಾನ್ ಪ್ರೈಮ್ ಸದಸ್ಯರು ಅಕ್ಟೋಬರ್ 7 ರ ಮಧ್ಯರಾತ್ರಿಯಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಮಾರಾಟಕ್ಕೆ ಎಂಟ್ರಿ ನೀಡಬಹುದಾಗಿದೆ. ರಿಯಾಯಿತಿಗಳು, ಡೀಲ್‌ಗಳು ಮತ್ತು ಆಫರ್‌ಗಳಿಗೆ ಪ್ರೈಮ್ ಅಲ್ಲದ ಗ್ರಾಹಕರಿಗಿಂತ ಮುಂಚಿತವಾಗಿ ಪ್ರವೇಶವನ್ನು ಪಡೆದುಕೊಳ್ಳಬಹುದು.

ಅದೇ ರೀತಿ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವವರು ಸಾಮಾನ್ಯ ಗ್ರಾಹಕರು ಈ ಸೇಲ್‌ಗೆ ಎಂಟ್ರಿ ಆಗುವ ಮುನ್ನವೇ ಒಂದು ದಿನ ಮುಂಚಿತವಾಗಿ ಬಿಗ್ ಬಿಲಿಯನ್ ಡೇಸ್ 2023 ಮಾರಾಟವನ್ನು ಪ್ರವೇಶಿಸಬಹುದು. ಈ ಮೂಲಕ ವಿಶೇಷ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಡಿವೈಸ್‌ಗಳನ್ನು ಖರೀದಿ ಮಾಡುವ ಮೊದಲಿಗರಾಗಬಹುದಾಗಿದೆ. ಈ ಶಾಪಿಂಗ್ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ, ಕೆಲವು ಶಾಪರ್‌ಗಳು ಆಕರ್ಷಕ ಬ್ಯಾಂಕ್ ಆಫರ್‌ಗಳು ಮತ್ತು ವಿಶೇಷ ಪರ್ಕ್‌ಗಳಿಂದ ಇನ್ನೂ ಹೆಚ್ಚಿನದನ್ನು ಪಡೆಯಲು ಸಜ್ಜಾಗುತ್ತಿದ್ದಾರೆ.


Click it and Unblock the Notifications








