ನಾಳೆಯಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆರಂಭ: ಶೇ. 40-70 ವರೆಗೂ ಕಡಿತ.!!
ಆಗಸ್ಟ್ 09 ರಿಂದ 12 ರ ವರೆಗೆ ಈ ಸೇಲ್ ನಡೆಯಲಿದೆ. ಈ ಸಂದರ್ಭದಲ್ಲಿ ಸಾಕಷ್ಟು ವಸ್ತುಗಳ ಮೇಲೆ ಅಮೆಜಾನ್ ಭರ್ಜರಿ ಆಫರ್ ನೀಡಲು ಮುಂದಾಗಿದೆ.
ಮತ್ತೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಶುರುವಾಗಲು ಕ್ಷಣಗಣನೆ ಆರಂಭವಾಗಿದ್ದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 09 ರಿಂದ 12 ರ ವರೆಗೆ ಈ ಸೇಲ್ ನಡೆಯಲಿದೆ. ಈ ಸಂದರ್ಭದಲ್ಲಿ ಸಾಕಷ್ಟು ವಸ್ತುಗಳ ಮೇಲೆ ಅಮೆಜಾನ್ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಇದಾಗಿದೆ.

ಓದಿರಿ: ಏರ್ಟೆಲ್ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?
ಈ ಬಾರಿ ಸೇಲ್ನಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳು, ಸ್ಮಾರ್ಟ್ಫೋನ್, ಕ್ಯಾಮೆರಾ, ಕಂಪ್ಯೂಟರ್, ಬಟ್ಟೆಗಳು, ಸೇರಿದಂತೆ ವಿವಿಧ ವಸ್ತುಗಳ ಮಲೆ ಸುಮಾರು 70% ವರೆಗೂ ಕಡಿತವನ್ನು ಕಾಣಬಹುದಾಗಿದೆ. ಬನ್ನಿ ಈ ಕಡಿತಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವ.

ಸ್ಮಾರ್ಟ್ಫೋನ್ಗಳ ಮೇಲೆ ಶೇ.40% ಕಡಿತ:
ಆನ್ಲೈನ್ ಸೇಲ್ ಗಳಲ್ಲಿ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್ಫೋನ್ಗಳನ್ನು ಕೊಂಡುಕೊಳ್ಳಲು ಮುಂದಾಗುವುದರಿಂದ ಈ ಬಾರಿ ಅಮೆಜಾನ್ ಸ್ಮಾರ್ಟ್ಫೋನ್ ಮತ್ತು ಅವುಗಳ ಆಕ್ಸಿಸಿಸೆರಿಸ್ ಮೇಲೆ ಭರ್ಜರಿ ಕಡಿತವನ್ನು ನೀಡಿದೆ. ಎಲ್ಲಾ ಪ್ರಮುಖ ಬ್ರಾಂಡ್ ಗಳ ಸ್ಮಾರ್ಟ್ಫೋನ್ ಮೇಲೆ ಶೇ.40% ಕಡಿತವನ್ನು ಕಾಣಬಹುದು.

ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ.50% ಕಡಿತ:
ಇದಲ್ಲದೇ ಅಮೆಜಾನ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ.50 % ಕಡಿತ ಮಾಡುವುದಾಗಿ ಅಮೆಜಾನ್ ತಿಳಿಸಿದ್ದು, ಟಿವಿ, ಲ್ಯಾಪ್ಟಾಪ್, ಕ್ಯಾಮೆರಾ ಮುಂತಾದವುಗಳ ಮೇಲೆ ಶೇ.50% ಕಡಿತವನ್ನು ನೀಡಲಿದೆ. ಪ್ರಮುಖ ಬ್ರಾಂಡ್ ವಸ್ತುಗಳು ಇಲ್ಲಿ ದೊರೆಯಲಿದೆ ಎನ್ನಲಾಗಿದೆ.

ಗೃಹ ಉಪಯೋಗಿ ವಸ್ತುಗಳ ಮೇಲೆ ಶೇ.70% ಕಡಿತ:
ಇದಲ್ಲದೇ ಗೃಹ ಬಳಕೆಯ ವಸ್ತುಗಳ ಮೇಲೆ ಅಮೆಜಾನ್ ಸೇಲ್ ನಲ್ಲಿ ಶೇ.70% ಕಡಿತವನ್ನು ಕಾಣಬಹುದಾಗಿದೆ. ಮಿಕ್ಸಿ, ಕುಕ್ಕರ್, ಫ್ರಿಡ್ಜ್, ಓವನ್ ಸೇರಿದಂತೆ ವಿವಿಧ ವಸ್ತುಗಳ ಈ ಕಡಿತವನ್ನು ಕಾಣಬಹುದಾಗಿದೆ. ಅಲ್ಲದೇ ಪ್ರಮುಖ ಬ್ರಾಂಡಿನ ವಸ್ತುಗಳು ಇಲ್ಲಿ ದೊರೆಯಲಿದೆ.

ಫ್ಯಾಷನ್ ವಸ್ತುಗಳ ಮೇಲೆ ಶೇ.70% ಕಡಿತ:
ಇದಲ್ಲದೇ ಫ್ಯಾಷನ್ ಸಂಬಂಧಿಸಿದ ವಸ್ತುಗಳ ಮೇಲೆ ಶೇ. 70% ಕಡಿತವನ್ನು ಮಾಡಿದ್ದು, ಬಟ್ಟೆ, ಬ್ಯಾಗ್, ಶೂ-ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳು ಇಲ್ಲಿ ಸೇರಿಕೊಳ್ಳಲಿದೆ. ಇದರಲ್ಲಿಯೂ ಫೇಮಸ್ ಬ್ರಾಂಡ್ ಗಳು ದೊರೆಯಲಿದೆ.

ಇದಲ್ಲದೇ ಇನ್ನು ಇದೇ:
ಈ ಸೇಲ್ ನಲ್ಲಿ ಗಂಟೆಗೊಂದು ಆಫರ್ ಲಭ್ಯವಿರಲಿದ್ದು, ಇದು ಪ್ರೈಮ್ ಮೆಂಬರ್ ಗಳಿಗೆ ಅರ್ಧ ಗಂಟೆಗೆ ಮೊದಲೇ ದೊರೆಯಲಿದೆ. ಇದಲ್ಲದೇ ಅಮೆಜಾನ್ ಕ್ಯಾಷ್ ಬ್ಯಾಕ್ ಮತ್ತು SBI ಕಾರ್ಡ್ ಮೇಲೆ ಶೇ.10-15 % ಕಡಿತವನ್ನು ಪಡೆಯಬಹುದಾಗಿದೆ.


Click it and Unblock the Notifications