ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್! ಶಾಪಿಂಗ್‌ಗೆ ಸಿದ್ಧರಾಗಿ.!
ಆನ್‌ಲೈನ್ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಲು ಇಷ್ಟಪಡುವ ಗ್ರಾಹಕರಿಗೆ ಬೃಹತ್ ಆನ್‌ಲೈನ್ ಸಂಸ್ಥೆ 'ಅಮೆಜಾನ್' ಇದೀಗ ಆಫರ್‌ಗಳ ಸುರಿಮಳೆಯನ್ನೇ ಸುರಿಸಲು ಸಜ್ಜಾಗಿದೆ. ಅಮೆಜಾನ್ 'ಗ್ರೇಟ್ ಇಂಡಿಯನ್ ಸೇಲ್' ಹೆಸರಿನಲ್ಲಿ ಆಫರ್‌ಗಳ ಅತೀ ದೊಡ್ಡ ಆನ್‌ಲೈನ್ ಮೇಳವನ್ನು ಏರ್ಪಡಿಸಲು ದಿನ ನಿಗದಿಮಾಡಿದ್ದು, ಇದೇ ಜನವರಿ 20 ರಿಂದ ಆರಂಭವಾಗುವ ಗ್ರೇಟ್ ಇಂಡಿಯನ್ ಸೇಲ್ ಆಫರ್ ಮೇಳ ಆರಂಭವಾಗುತ್ತಿದೆ.

ಈ ವರ್ಷದ ಮೊದಲ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆಫರ್ ಸೇಲ್ ಇದಾಗಿದ್ದು, ಈ ಮೇಳದಲ್ಲಿ ಅಮೆಜಾನ್, ಗ್ರಾಹಕರಿಗೆ ಸ್ಮಾರ್ಟ್‌ಫೋನ್, ಗೃಹ ಬಳಕೆ ವಸ್ತುಗಳು ಸೇರಿದಂತೆ 170 ಮಿಲಿಯನ್ ವಿಭಿನ್ನ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ನೀಡುವುದಾಗಿ ತಿಳಿಸಿದೆ. ಹಾಗೇಯೆ ಈ ಆಫರ್ ಮೇಳದಲ್ಲಿ ಗ್ರಾಹಕರು ಖರೀದಿಸುವ ಪ್ರತಿ ವಸ್ತುಗಳ ಮೇಲೆ ಭಾರೀ ಕ್ಯಾಶ್‌ಬ್ಯಾಕ್, ಡೀಲ್, ಡಿಸ್ಕೌಂಟ್‌ಗಳು ದೊರಕಲಿವೆ. ಹಾಗಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆಫರ್ ಬಗ್ಗೆ ನಾವೂ ಸ್ವಲ್ಪ ತಿಳಿಯೋಣ.

ಗ್ರೇಟ್ ಇಂಡಿಯನ್ ಸೇಲ್ ಯಾವಾಗ?
ಅಮೇಜಾನ್ ಆಯೋಜಿಸಿರುವ ದಿ ಗ್ರೇಟ್ ಇಂಡಿಯನ್ ಸೇಲ್ ಜನವರಿ 20 ರಿಂದ ಜನವರಿ 23ರ ವರೆಗೆ, ಅಂದರೆ ಮೂರುದಿನಗಳ ಕಾಲ ನಡೆಯಲಿದೆ. ವಿಭಿನ್ನ ಕೆಟಗರಿಯ ಸುಮಾರು 170 ಮಿಲಿಯನ್ ಪ್ರೊಡಕ್ಟ್ ಗಳ ಸೇಲ್ ಇದರಲ್ಲಿ ಇರಲಿದೆದೆ ಮತ್ತು ಅಮೆಜಾನ್ ಪ್ರೈಮ್ ಸದಸ್ಯರಿಗೆ ವಿಶೇಷ ರಿಯಾಯಿತಿ ಕೂಡ ದೊರೆಯುತ್ತದೆ ಎಂದು ಅಮೆಜಾನ್ ಜಾಹಿರಾತು ನೀಡಿದೆ.

HDFC ಗ್ರಾಹಕರಿಗೆ ಬಂಪರ್ ಆಫರ್
ಹೆಚ್ ಡಿ ಎಫ್ ಸಿ ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಹೆಚ್ಚುವರಿ 10 ಶೇಕಡಾ ರಿಯಾಯಿತಿ ಲಭ್ಯವಾಗುತ್ತದೆ. ಕೆಲವು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಗಳಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ ಇದೆ. ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಮಾಲೀಕರು ಸ್ಮಾರ್ಟ್ ಫೋನ್, ಟಿವಿ, ಎಸಿ ಮತ್ತು ಇತರೆ ಹಲವು ಕೆಟಗರಿಯ ಸಾವಿರಕ್ಕೂ ಅಧಿಕ ವಸ್ತುಗಳಿಗೆ ಎಕ್ಸ್ ಚೇಂಜ್ ಆಫರ್ ನ್ನು ಪಡೆಯಲಿದ್ದಾರೆ.

ಅಮೇಜಾನ್ ಬ್ರ್ಯಾಂಡ್ ಉತ್ಪನ್ನ ಖರೀದಿಗೆ ಸುಗ್ಗಿ!
ಅಮೇಜಾನ್ ತನ್ನದೇ ಸ್ವಂತ ಬ್ರ್ಯಾಂಡ್ ನ ವಸ್ತುಗಳಿಗೂ ಆಫರ್ ನೀಡುತ್ತಿದೆ. ಅಮೇಜಾನ್ ಬೇಸಿಕ್ಸ್, ಸೊಲಿಮೋ, ಸಿಂಬಾಲ್, ವೆದಕಾ, ಪ್ರೆಸ್ಟ್ರೋ ಮತ್ತು ಇತ್ಯಾದಿಗಳು ರಿಯಾಯಿತಿಯಲ್ಲಿ ಲಭ್ಯವಿದೆ. ಅಮೇಜಾನ್ ಇಕೋ, ಫೈಯರ್ ಟಿವಿ ಸ್ಟಿಕ್ ಮತ್ತು ಕಿಂಡಲ್ ಇ-ರೀಡರ್ಸ್ ಗಳಿಗೆ 3,000 ದ ವರೆಗೆ ರಿಯಾಯಿತಿ ಸಿಗುತ್ತದೆ.

ಎಲ್ಲಾ ಮೊಬೈಲ್‌ಗಳ ಮೆಲೆ ಬಂಪರ್ ಆಫರ್.
ಈ ಅಮೆಜಾನ್ ಮೇಳದಲ್ಲಿ ದೇಶದ ಪ್ರಮುಖ ಮೊಬೈಲ್ ಕಂಪನಿಳ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 10 ರಿಮದ 40 ಪರ್ಸೆಂಟ್ ವರೆಗೂ ಭರ್ಜರಿ ಡಿಸ್ರ್ಕಂಟ್ಸ್ ನೀಡಲಾಗಿದೆ. ಸ್ಯಾಮ್ಸಂಗ್, ಆಪಲ್, ಹುವಾಯಿ, ಶಿಯೋಮಿ, ಒನ್‌ಪ್ಲಸ್, ಇವುಗಳೊಂದಿಗೆ ಇತರೆ ಮೊಬೈಲ್ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳ ಬೆಲೆಯ ಮೇಲೆ ವಿಶೇಷ ರಿಯಾಯಿತಿಗಳು ಇರುತ್ತವೆ

ಕ್ಯಾಮರಾಗಳಿಗೂ ಇದೆ ಬೆಸ್ಟ್ ಆಫರ್!
ಜನಪ್ರಿಯ ಕೆನಾನ್, ನಿಕಾನ್, ಫ್ಯುಜಿಫೀಲ್ಮ್, ಸೋನಿ, ಸಿಗ್ಮಾ, ಓಲಂಪಸ್ ಕಂಪನಿಗಳ ಕ್ಯಾಮರಾಗಳ ಮೇಲೆ ಶೇಕಡಾ 55% ವರೆಗೂ ಭರ್ಜರಿ ರಿಯಾಯಿತಿಯನ್ನು ಅಮೆಜಾನ್ ಪ್ರಕಿಸಿದೆ. ಇದರೊಂದಿಗೆ ಕ್ಯಾಮರಾದ ಲೆನ್ಸ್, ಕ್ಯಾಮರಾ ಸ್ಟ್ಯಾಂಡಿಗ್ ಪ್ಯಾನಲ್‌ಗಳು ಸೇರಿದಂತೆ ಇತರೆ ಪ್ರಮುಖ ಎಲ್ಲ ಬಿಡಿಭಾಗಗಳ ಮೇಲೂ ವಿಶೇಷ ರಿಯಾಯಿತಿಗಳ ಗ್ರಾಹಕರಿಗೆ ದೊರಕಲಿದೆ.

ಲ್ಯಾಪ್‌ಟಾಪ್‌ಗಳು ಈಗ ಕಡಿಮೆ ಬೆಲೆಯಲ್ಲಿ
ಗ್ರೇಟ್ ಇಂಡಿಯನ್ ಆಫರ್ ಮೇಳದಲ್ಲಿ ಲ್ಯಾಪ್‌ಟಾಪ್ ಮತ್ತು ಪ್ರಿಂಟರ್‌ಗಳ ಮೇಲೆ ಶೇಕಡಾ 40% ವರೆಗೂ ಡಿಸ್ಕೌಂಟ್ ನೀಡುವುದಾಗಿ ಅಮೆಜಾನ್ ಹೇಳಿಕೊಂಡಿದೆ. ಹೆಚ್‌ಪಿ, ಡೆಲ್, ಆಪಲ್, ಎಸರ್, ಲೆನೋವಾ, ಆಸೂಸ್ ಸೇರಿದಂತೆ ಪ್ರಮುಖ ಕಂಪನಿಗಳ ಲ್ಯಾಪ್‌ಟಾಪಗಳ ಮೇಲೆ ಸುಮಾರು 35,000ರೂ. ವರೆಗೂ ರಿಯಾಯಿತಿ ನೀಡುವುದಾಗಿ ಅಮೆಜಾನ್ ಜಾಹಿರಾತು ನೀಡಿದೆ.


Click it and Unblock the Notifications








