ಅಮೆಜಾನ್ ಸೇಲ್: ಈ ಏರ್ ಫ್ರೈಯರ್‌ಗಳು ಕೇವಲ 10,000ರೂ. ಒಳಗೆ ಲಭ್ಯ
ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಸೇಲ್ ಮುಖಾಂತರ ಗ್ರಾಹಕರಿಗೆ ಅನುಕೂಲವಾಗುಂತೆ ಬಹುಪಾಲು ಎಲ್ಲಾ ವಸ್ತುಗಳಿಗೂ ಉತ್ತಮ ರಿಯಾಯಿತಿ ನೀಡಿ ಮಾರಾಟ ಮಾಡುತ್ತಿದೆ. ಅದರಂತೆ ಮನೆಗೆ ಅಗತ್ಯವಾಗಿ ಬೇಕಾದ ಕೆಲವು ಸಾಮಾಗ್ರಿಗಳಿಗೂ ಆಕರ್ಷಕ ಡಿಸ್ಕೌಂಟ್ ನೀಡಿದೆ. ಈ ಆಫರ್ ಇದೇ ತಿಂಗಳ 30 ರ ವರೆಗೆ ಇರಲಿದೆ.

ಹೌದು, ಅಮೆಜಾನ್ ಆಯೋಜನೆ ಮಾಡಿರುವ ಈ ಫೆಸ್ಟಿವಲ್‌ನಲ್ಲಿ ಏರ್ ಫ್ರೈಯರ್‌ಗಳಿಗೆ ಭಾರೀ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಉತ್ತಮ ಕ್ವಾಲಿಟಿಯ ಏರ್ ಫ್ರೈಯರ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಕೊಂಡುಕೊಳ್ಳಬಹುದಾಗಿದೆ. ಇವುಗಳ ವಿಶೇಷತೆ ಎಂದರೆ ಹೆಚ್ಚಿನ ಎಣ್ಣೆಯ ಅಗತ್ಯವಿಲ್ಲದೆ ಅಹಾರ ತಯಾರು ಮಾಡಿಕೊಳ್ಳಬಹುದಾಗಿದೆ.

ಏರ್ ಫ್ರೈಯರ್ ಆಹಾರವನ್ನು ಬೇಯಿಸುವ ಉಪಯುಕ್ತ ಗ್ಯಾಜೆಟ್ ಆಗಿದೆ. ಇದರಿಂದ , ಹುರಿಯಲು, ಬಿಸಿ ಮಾಡಲು ಸೇರಿದಂತೆ ಇನ್ನಿತರೆ ಅಡುಗೆ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ 10,000 ರೂ. ಗಳ ಒಳಗೆ ಲಭ್ಯವಿರುವ ಏರ್ ಫ್ರೈಯರ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಶಿಯೋಮಿ ಸ್ಮಾರ್ಟ್ ಏರ್ ಫ್ರೈಯರ್
ಶಿಯೋಮಿ ಸ್ಮಾರ್ಟ್ ಏರ್ ಫ್ರೈಯರ್ 6,499 ರೂ. ಗಳಿಗೆ ಲಭ್ಯವಿದೆ. ಇದು 3.5 ಲೀಟರ್ ಸಾಮರ್ಥ್ಯ ಹೊಂದಿದ್ದು, ಆಹಾರವನ್ನು ಬೇಯಿಸಲು, ಹುರಿಯಲು ಬಳಕೆ ಮಾಡಬಹುದು. ಇದು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ.

ಫಿಲಿಪ್ಸ್ ಡಿಜಿಟಲ್ ಏರ್ ಫ್ರೈಯರ್
ಈ ಸ್ಮಾರ್ಟ್ ಅಡುಗೆ ಗ್ಯಾಜೆಟ್ಸ್‌ಗೆ 6,499 ರೂ. ನಿಗದಿ ಮಾಡಲಾಗಿದೆ. ಇದು 4.1 ಲೀಟರ್ ಸಾಧನವಾಗಿದ್ದು, ರಾಪಿಡ್ ಏರ್ ತಂತ್ರಜ್ಞಾನದ ಆಯ್ಕೆ ಪಡೆದಿದೆ. ಈ ಡಿಜಿಟಲ್ ಏರ್ ಫ್ರೈಯರ್‌ನಲ್ಲಿ ಅತ್ಯಂತ ಕಡಿಮೆ ಎಣ್ಣೆಯ ಮೂಲಕ ಆರೋಗ್ಯಕರ ಮತ್ತು ರುಚಿಯಾದ ಆಹಾರ ತಯಾರು ಮಾಡಬಹುದು.

INALSA ಏರ್ ಫ್ರೈಯರ್ ಡಿಜಿಟಲ್ ನ್ಯೂಟ್ರಿ ಫ್ರೈ
ಈ INALSA ಏರ್ ಫ್ರೈಯರ್ ಡಿಜಿಟಲ್ ನ್ಯೂಟ್ರಿ ಫ್ರೈ ಯನ್ನು ಅಮೆಜಾನ್ 7,215 ರೂ.ಗಳಲ್ಲಿ ನೀಡಲಿದೆ. ಇದು 1400W ಸಾಮರ್ಥ್ಯದ ನಾನ್-ಸ್ಟಿಕ್ ಏರ್ ಫ್ರೈಯರ್ ಆಗಿದೆ. ಈ ಸ್ಮಾರ್ಟ್ ಡಿವೈಸ್ ನಾಲ್ಕು ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಆಹಾರವನ್ನು ಬೇಯಿಸಲು ಸುಲಭವಾಗಿದೆ. buzzes ತಂತ್ರಜ್ಞಾನ ಇದರಲ್ಲಿದ್ದು, ಆಹಾರ ತಿನ್ನಲು ಸಿದ್ಧವಾದಾಗ ಶಬ್ಧ ಮಾಡುತ್ತದೆ.

ಇನ್‌ಸ್ಟಂಟ್ ವೋರ್ಟೆಕ್ಸ್ ಪ್ಲಸ್ 6-ಇನ್-1 ಏರ್ ಫ್ರೈಯರ್
ಈ ಡಿವೈಸ್‌ನ್ನು 8,999 ರೂ. ಗಳಿಗೆ ಅಮೆಜಾನ್ ನೀಡಲಿದೆ. ಈ ಇನ್‌ಸ್ಟಂಟ್ ವೋರ್ಟೆಕ್ಸ್ ಏರ್ ಫ್ರೈಯರ್ ವಿವಿಧ ರೀತಿಯ ಆಹಾರ ಬೇಯಿಸಲು ಸಹಾಯಕವಾಗಿದೆ. ಈ ಏರ್ ಫ್ರೈ ನಿಂದ ಆಹಾರವನ್ನು ರೋಸ್ಟ್ ಮಾಡಲು, ಬಾಯ್ಲ್ ಮಾಡಲು ತುಂಬಾ ಸುಲಭವಾದ ಫೀಚರ್ಸ್‌ಗಳನ್ನು ಹೊಂದಿದೆ. ಆಹಾರ ಪದಾರ್ಥವನ್ನು ಬೇಯಿಸಲು ಅಥವಾ ಹುರಿಯಲು 95% ಕಡಿಮೆ ಎಣ್ಣೆಯನ್ನು ಇದು ಬಳಸುತ್ತದೆ.

ಕೆಂಟ್ 16096 ಕ್ಲಾಸಿಕ್ ಹಾಟ್ ಏರ್ ಫ್ರೈಯರ್
ಈ ಸ್ಮಾರ್ಟ್ ಅಡುಗೆ ಗ್ಯಾಜೆಟ್ಸ್ ತುಂಬಾನೆ ಕಡಿಮೆ ಬೆಲೆಗೆ ಸಿಗಲಿದೆ ಅಂದರೆ. ನೀವು ಕೇವಲ 4,249 ರೂ.ಗಳಿಗೆ ಇದನ್ನು ನಿಮ್ಮ ಅಡುಗೆ ಮನೆಯಲ್ಲಿ ಇರಿಸಿಕೊಳ್ಳಬಹುದಾಗಿದೆ. ಇದರಲ್ಲಿ ಆಹಾರ ಬೆಂದು ಸಿದ್ಧವಾದಾಗ ತಂತಾನೇ ಆಫ್ ಆಗುತ್ತದೆ.

ಸೋಲಾರಾ ಎಕ್ಸ್ಟ್ರಾ ಲಾರ್ಜ್ ಡಿಜಿಟಲ್ ಏರ್ ಫ್ರೈಯರ್
ಈ ಡಿವೈಸ್ ನಿಮಗೆ 7,299 ರೂ.ಗಳಲ್ಲಿ ಲಭ್ಯ ಇದೆ. ಸೋಲಾರಾ ಡಿಜಿಟಲ್ ಏರ್ ಫ್ರೈಯರ್ ಭಾರತೀಯ ಅಡುಗೆಗಳನ್ನು ಮಾಡಲು ಸಹಾಯಕವಾಗುವಂತೆ ತಯಾರು ಮಾಡಲಾಗಿದೆ. ಇದರಲ್ಲಿ 8 ಪೂರ್ವನಿಗದಿ ವಿಧಾನದ ಅಯ್ಕೆಗಳಿವೆ. 85% ಕ್ಕಿಂತ ಕಡಿಮೆ ಎಣ್ಣೆಯಿಂದ ಆಹಾರವನ್ನು ಈ ಸಾಧನ ಬೇಯಿಸುತ್ತದೆ.

INALSA ಏರೋ ಏರ್ ಫ್ರೈಯರ್
INALSA ದ ಈ ಎಲ್ಲಾ ಈ ಹೊಸ ಏರೋ ಫ್ರೈಯರ್ 8,590 ರೂ. ಗಳಿಗೆ ಲಭ್ಯವಾಗಲಿದೆ. ಇದರಲ್ಲಿ ತಾಪಮಾನವನ್ನು ಹೊಂದಿಸುವ ಅಗತ್ಯತೆಯೇ ಇರುವುದಿಲ್ಲ. ಬದಲಾಗಿ ಆಟೋ ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. 16 ಪೂರ್ವ ನಿಗದಿ ಕಾರ್ಯಗಳನ್ನು ಒಳಗೊಂಡಿದ್ದು, ತುಕ್ಕು ಹಿಡಿಯದ ಉಕ್ಕನ್ನು ಈ ಸಾಧನದಲ್ಲಿ ಬಳಕೆ ಮಾಡಲಾಗಿದೆ.


Click it and Unblock the Notifications








