ಅಮೆಜಾನ್‌ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌; ಈ ಗ್ಯಾಜೆಟ್‌ಗಳಿಗೆ 50% ಗಿಂತ ಹೆಚ್ಚಿನ ಡಿಸ್ಕೌಂಟ್!

|

ಅಮೆಜಾನ್‌ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಲೈವ್‌ ಆಗಿದ್ದು, ಈಗಾಗಲೇ ಹಲವಾರು ಗ್ರಾಹಕ ಅಗತ್ಯ ಡಿವೈಸ್‌ಗಳಿಗೆ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದೆ. ಜೊತೆಗೆ ವಿವಿಧ ಬ್ಯಾಂಕ್‌ ಆಫರ್‌ಗಳು ಸಹ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಲಭ್ಯವಾಗುತ್ತಿದ್ದು, ಗ್ರಾಹಕರು ಅಗ್ಗದ ದರದಲ್ಲಿ ತಮ್ಮಿಷ್ಟದ ಪ್ರೊಡಕ್ಟ್‌ಗಳನ್ನು ಖರೀದಿ ಮಾಡಬಹುದು. ಅದರಂತೆ ಸ್ಮಾರ್ಟ್‌ವಾಚ್‌ ಹಾಗೂ ಇನ್ನಿತರೆ ಡಿವೈಸ್‌ ಖರೀದಿ ಮಾಡಲು ಬಯಸುವವರಿಗೆ ಇದು ಸದಾವಕಾಶ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ವಿಶೇಷ ಆಫರ್‌ನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಹಾಗೂ ಸ್ಮಾರ್ಟ್‌ವಾಚ್‌ಗಳು ಭರ್ಜರಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಹಾಗೆಯೇ ಅರ್ಧ ಬೆಲೆಗೆ ಈ ಸೇಲ್‌ನಲ್ಲಿ ಸ್ಮಾರ್ಟ್‌ವಾಚ್‌ಗಳು ಹಾಗೂ ಇನ್ನೂ ಹೆಚ್ಚಿನ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ವಾಚ್‌ಗಳು ಕೈಗೆಟಕುವ ಬೆಲೆಗೆ ಸಿಗಲಿವೆ?, ಸ್ಮಾರ್ಟ್‌ಟಿವಿಗೆ ಆಫರ್‌ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ 4 ಕ್ಲಾಸಿಕ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ 4 ಕ್ಲಾಸಿಕ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ 4 ಕ್ಲಾಸಿಕ್‌ ಗೆ 51% ರಿಯಾಯಿತಿ ನೀಡಲಾಗಿದ್ದು, ಈ ಮೂಲಕ 16,999 ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಈ ವಾಚ್‌ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, SpO2, ಹೃದಯ ಬಡಿತ ಟ್ರ್ಯಾಕಿಂಗ್, ಒತ್ತಡದ ಟ್ರ್ಯಾಕಿಂಗ್ ಮತ್ತು ಇನ್ನೂ ಹೆಚ್ಚಿನ ಆರೋಗ್ಯ ಸಂಬಂಧಿ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಫೈರ್‌ ಬೋಲ್ಟ್‌ ನಿಂಜಾ ಕಾಲ್‌ ಪ್ರೊ ಪ್ಲಸ್‌

ಫೈರ್‌ ಬೋಲ್ಟ್‌ ನಿಂಜಾ ಕಾಲ್‌ ಪ್ರೊ ಪ್ಲಸ್‌

ಫೈರ್‌ ಬೋಲ್ಟ್‌ ನಿಂಜಾ ಕಾಲ್‌ ಪ್ರೊ ಪ್ಲಸ್‌ ಸ್ಮಾರ್ಟ್‌ವಾಚ್‌ಗೆ ಬರೋಬ್ಬರಿ 91% ರಿಯಾಯಿತಿ ನೀಡಲಾಗಿದ್ದು, ಕೇವಲ 1,799 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಅದರಂತೆ ಈ ವಾಚ್‌ 1.83 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಬ್ಲೂಟೂತ್ ಕಾಲ್‌ ಪೀಚರ್ಸ್‌ನೊಂದಿಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಇದು ಹೊಂದಿದೆ.

ಒಪ್ಪೋ ಎನ್ಕೋ ಬಡ್ಸ್‌

ಒಪ್ಪೋ ಎನ್ಕೋ ಬಡ್ಸ್‌

ಒಪ್ಪೋ ಎನ್ಕೋ ಬಡ್ಸ್‌ ಗೆ ಅಮೆಜಾನ್‌ನಲ್ಲಿ 60% ರಿಯಾಯಿರಿ ಘೋಷಣೆ ಮಾಡಲಾಗಿದ್ದು, 1,599 ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಬಡ್ಸ್‌ ಇನ್‌ಬಿಲ್ಟ್‌ ಮೈಕ್ರೋಫೋನ್‌ನೊಂದಿಗೆ ಪ್ಯಾಕ್‌ ಅಗಿದ್ದು, ಡಾಲ್ಬಿ ಅಟ್ಮಾಸ್‌ ಫೀಚರ್ಸ್‌ಜೊತೆಗೆ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಇರುವುದು ಬಳಕೆದಾರರಿಗೆ ಇನ್ನಷ್ಟು ಇಷ್ಟವಾಗಲಿದೆ. ಜೊತೆಗೆ ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 24 ಗಂಟೆಗಳ ವರೆಗೆ ಬಳಕೆ ಮಾಡಬಹುದಾಗಿದೆ.

ಇಮೌ 360° 1080P ಫುಲ್ HD ಸೆಕ್ಯೂರಿಟಿ ಕ್ಯಾಮೆರಾ

ಇಮೌ 360° 1080P ಫುಲ್ HD ಸೆಕ್ಯೂರಿಟಿ ಕ್ಯಾಮೆರಾ

ಇಮೌ 360° 1080P ಫುಲ್ HD ಸೆಕ್ಯೂರಿಟಿ ಕ್ಯಾಮೆರಾಗೆ 69% ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ನೀವು 2,348 ರೂ.ಗಳ ಬೆಲೆಯಲ್ಲಿ ಈ ಡಿವೈಸ್‌ ಅನ್ನು ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾ ಮಾನವ ಪತ್ತೆ, ಚಲನೆಯ ಟ್ರ್ಯಾಕಿಂಗ್, 2-ವೇ ಆಡಿಯೋ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

Qubo ಸ್ಮಾರ್ಟ್ ವೈಫೈ ವಾಯರ್‌ಲೆಸ್‌ ವಿಡಿಯೋ ಡೋರ್‌ಬೆಲ್

Qubo ಸ್ಮಾರ್ಟ್ ವೈಫೈ ವಾಯರ್‌ಲೆಸ್‌ ವಿಡಿಯೋ ಡೋರ್‌ಬೆಲ್

Qubo ಸ್ಮಾರ್ಟ್ ವೈಫೈ ವಾಯರ್‌ಲೆಸ್‌ ವಿಡಿಯೋ ಡೋರ್‌ಬೆಲ್ ಗೆ 50% ರಿಯಾಯಿತಿ ನೀಡಲಾಗಿದ್ದು, 4,989 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಅಂತೆಯೇ ಈ ಡಿವೈಸ್‌ 2-ವೇ ಆಡಿಯೋ ಫೀಚರ್ಸ್‌ನೊಂದಿಗೆ 1080p ವಿಡಿಯೋ ರೆಕಾರ್ಡಿಂಗ್ ರೆಸಲ್ಯೂಶನ್ ನೀಡುತ್ತದೆ. ಹಾಗೆಯೇ 36 ಪೂರ್ವ ಲೋಡ್ ಮಾಡಿದ ಚೈಮ್‌ಗಳೊಂದಿಗೆ ಪ್ಯಾಕ್‌ ಆಗಿರಲಿದೆ.

ಇಫ್ಫಾಲ್ಕಾನ್ 43 ಇಂಚಿನ 4K ಟಿವಿ

ಇಫ್ಫಾಲ್ಕಾನ್ 43 ಇಂಚಿನ 4K ಟಿವಿ

ಇಫ್ಫಾಲ್ಕಾನ್ 43 ಇಂಚಿನ 4K ಟಿವಿಗೆ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದ್ದು, 62% ರಿಯಾಯಿತಿಯೊಂದಿಗೆ 18,990 ರೂ. ಗಳಿಗೆ ಈ 4K ಟಿವಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್‌ನೊಂದಿಗೆ 24W ಸ್ಟೀರಿಯೋ ಸ್ಪೀಕರ್‌ಗಳೊಂದಿಗೆ ಪ್ಯಾಕ್‌ ಆಗಿದೆ. ಜೊತೆಗೆ ಗೂಗಲ್‌ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.

Best Mobiles in India

English summary
Great Republic Day sale is live on Amazon, you can buy smartwatches, smart TVs and other devices at low prices. Details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X